ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಓಲಾ ಕಂಪನಿಯು ಲಂಡನ್‌ನಲ್ಲಿ ಎಲೆಕ್ಟ್ರಿಕ್ ಕ್ಯಾಬ್ ಅನ್ನು ಪರಿಚಯಿಸಿದೆ. ಇದರಿಂದ ಓಲಾದ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೊಸ ವರ್ಗವು ಲಭ್ಯವಾಗಲಿದೆ ಎಂದು ಕಂಪನಿಯು ತನ್ನ ಲಂಡನ್‌ ಗ್ರಾಹಕರಿಗೆ ತಿಳಿಸಿದೆ.

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಇದರಿಂದ ಇನ್ನು ಮುಂದೆ ಲಂಡನ್ ಗ್ರಾಹಕರು ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು. ಮುಂಬರುವ ದಿನಗಳಲ್ಲಿ ಕಂಪನಿಯು ಇತರ ನಗರಗಳಲ್ಲಿಯೂ ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಎಲೆಕ್ಟ್ರಿಕ್ ವಾಹನ ವಿಭಾಗದ ಸವಾರರಿಗೆ ಆರಾಮದಾಯಕ ಕ್ಯಾಬ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಎಲೆಕ್ಟ್ರಿಕ್ ಕ್ಯಾಬ್‌ಗಳ ವರ್ಗಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಲಂಡನ್‌ನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕ್ಯಾಬ್ ಆರಂಭಿಸುವ ಗ್ರೀನ್ ಟ್ರಾನ್ಸ್‌ಪೋರ್ಟ್ ನೆಟ್‌ವರ್ಕ್‌ಗೆ ಅನುಸಾರವಾಗಿ ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ಆರಂಭಿಸಲಾಗಿದೆ ಎಂದು ಓಲಾ ಕಂಪನಿ ಹೇಳಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಎಲೆಕ್ಟ್ರಿಕ್ ಕ್ಯಾಬ್ ಪ್ಲಾಟ್‌ಫಾರಂಗೆ ಹೊಸ ಚಾಲಕರನ್ನು ಸೇರಿಸಲು ಓಲಾ ಕಂಪನಿ ಚಿಂತನೆ ನಡೆಸಿದೆ. ಕಂಪನಿಯ ಪ್ರಕಾರ ತರಬೇತಿ ಪಡೆದ 700 ಚಾಲಕರನ್ನು ಲಂಡನ್‌ನಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ನೇಮಿಸಲಾಗುವುದು.

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಸ್ಥಳೀಯ ಚಾಲಕರಿಗೆ ಎಲೆಕ್ಟ್ರಿಕ್ ಕ್ಯಾಬ್‌ಗಳಲ್ಲಿ ಉದ್ಯೋಗಾವಕಾಶ ನೀಡಲಾಗುವುದು ಎಂದು ಓಲಾ ಕಂಪನಿ ತಿಳಿಸಿದೆ. ಓಲಾ ತನ್ನ ಹೊಸ ಕ್ಯಾಬ್ ಚಾಲಕರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಈ ಯೋಜನೆಯು ಚಾಲಕರಿಗೆ ಹೆಚ್ಚು ಆದಾಯವನ್ನು ನೀಡಲಿದೆ. ಕಂಪನಿಯು ಹೊಸ ಚಾಲಕರಿಗೆ ಮೊದಲ ಮೂರು ತಿಂಗಳವರೆಗೆ 0%ನಷ್ಟು ಕಮಿಷನ್ ವಿಧಿಸುತ್ತದೆ. ಈ ಯೋಜನೆಯು ಕಂಪನಿಗೆ ಸವಾಲಿನ ಸಂಗತಿಯಾಗಿದೆ.

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಎಲೆಕ್ಟ್ರಿಕ್ ಕ್ಯಾಬ್ ಆರಂಭದ ಬಗ್ಗೆ ಮಾತನಾಡಿದ ಓಲಾ ಯುಕೆ ವ್ಯವಸ್ಥಾಪಕ ನಿರ್ದೇಶಕರಾದ ಮಾರ್ಕ್ ರೋಸೆಂಡಾಲ್'ರವರು, ಓಲಾ ಕಂಪನಿಯು ಪರಿಸರವನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಗ್ರಾಹಕರು ಸಾಮಾನ್ಯ ಕ್ಯಾಬ್ ಶುಲ್ಕದಷ್ಟೇ ಶುಲ್ಕವನ್ನು ಪಾವತಿಸಿ ಓಲಾ ಎಲೆಕ್ಟ್ರಿಕ್ ಕ್ಯಾಬ್‌ಗಳಲ್ಲಿ ಪ್ರಯಾಣಿಸಬಹುದು.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ಲಂಡನ್‌ನ ಹೊರಗೂ ಸಹ ಆರಂಭಿಸಲಾಗುವುದು ಎಂದು ಹೇಳಿದರು. ಓಲಾ ಕಂಪನಿಯು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ತಮಿಳುನಾಡಿನಲ್ಲಿ ನಿರ್ಮಿಸುತ್ತಿದೆ.

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

500 ಎಕರೆ ಪ್ರದೇಶದಲ್ಲಿರುವ ಈ ಉತ್ಪಾದನಾ ಘಟಕದಲ್ಲಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲಿದೆ. ಈ ಘಟಕವು ಪ್ರತಿವರ್ಷ 1 ಕೋಟಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಈ ಉತ್ಪಾದನಾ ಘಟಕದ ಮೊದಲ ಹಂತವು ಈ ವರ್ಷದ ಬೇಸಿಗೆಯಲ್ಲಿ ಸಿದ್ಧವಾಗಲಿದೆ ಎಂದು ಓಲಾ ಕಂಪನಿ ಹೇಳಿದೆ. ಮುಂದಿನ ವರ್ಷದ ವೇಳೆಗೆ ಈ ಉತ್ಪಾದನಾ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

ಲಂಡನ್‌ ನಗರದಲ್ಲಿ ಎಲೆಕ್ಟ್ರಿಕ್ ಕ್ಯಾಬ್‌ಗಳಿಗೆ ಚಾಲನೆ ನೀಡಿದ ಓಲಾ

ಓಲಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಹೈಪರ್ ಚಾರ್ಜ್ ನೆಟ್ ವರ್ಕ್ ನಿರ್ಮಿಸುತ್ತಿದೆ. ಈ ನೆಟ್ ವರ್ಕ್'ನಲ್ಲಿ ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲಾಗುವುದು.

Most Read Articles

Kannada
English summary
Ola starts electric cab services in London. Read in Kannada.
Story first published: Friday, May 14, 2021, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X