ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ದೇಶದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಎಸ್ 6 ಮಾಲಿನ್ಯ ನಿಯಮ ಜಾರಿಗೆ ಬರುವ ಮುನ್ನವೇ ಪೆಟ್ರೋಲ್ ಕಾರುಗಳ ಮಾರಾಟವು ಹೆಚ್ಚಾಗಿತ್ತು.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

2012ರಿಂದ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು ಕಡಿಮೆಯಾಗಿದೆ. 2020ರಲ್ಲಿ ಒಟ್ಟಾರೆಯಾಗಿ ಮಾರಾಟವಾದ ಕಾರುಗಳ ಪೈಕಿ ಪೆಟ್ರೋಲ್ ಕಾರುಗಳ ಮಾರಾಟ ಪ್ರಮಾಣವು 83%ನಷ್ಟಿದೆ. ಇದರಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಸಂಖ್ಯೆಯೇ ಹೆಚ್ಚಾಗಿದೆ.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾದ ನಂತರ ಪೆಟ್ರೋಲ್‌ ಕಾರುಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದೆಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬಹುತೇಕ ಒಂದೇ ಆಗಿದೆ. ಬಿಎಸ್ 6 ಅಪ್‌ಡೇಟ್ ನಂತರ ಡೀಸೆಲ್ ಕಾರುಗಳ ಬೆಲೆ ದುಬಾರಿಯಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈ ಕಾರಣಕ್ಕೆ ಹೊಸ ಗ್ರಾಹಕರು ಪೆಟ್ರೋಲ್ ವಾಹನಗಳನ್ನು ಖರೀದಿಸುತ್ತಿದ್ದಾರೆ. 2012ರಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಇದ್ದಾಗ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು 54%ನಷ್ಟಾಗಿತ್ತು. ನಂತರ ಈ ಪ್ರಮಾಣವು ಕಡಿಮೆಯಾಗುತ್ತಾ ಸಾಗಿತು.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

2013ರಲ್ಲಿ 52%, 2014ರಲ್ಲಿ 48%, 2015ರಲ್ಲಿ 44% ಹಾಗೂ 2016ರಲ್ಲಿ 40%ಗಳಾಗುತ್ತಾ ಸಾಗಿತು. 2017ರಲ್ಲಿ 39%, 2018ರಲ್ಲಿ 37%, 2019ರಲ್ಲಿ 33%ನಷ್ಟಿದ್ದ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು 2020ರ ಏಪ್ರಿಲ್ - ಡಿಸೆಂಬರ್ ನಡುವಿನ ಅವಧಿಯಲ್ಲಿ 17%ಗಳಿಗೆ ಇಳಿಕೆಯಾಯಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಬಿಎಸ್ 6 ನಿಯಮಗಳಿಗೆ ಅಪ್ ಡೇಟ್ ಮಾಡುವ ವೆಚ್ಚವು ದುಬಾರಿ ಎಂಬ ಕಾರಣಕ್ಕೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದವು.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಮಾರುತಿ ಸುಜುಕಿ ಕಂಪನಿಯ ಜೊತೆಗೆ ಫೋಕ್ಸ್‌ವ್ಯಾಗನ್, ಸ್ಕೋಡಾ, ದಟ್ಸನ್ ಹಾಗೂ ನಿಸ್ಸಾನ್ ಕಂಪನಿಗಳು ಪೆಟ್ರೋಲ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿವೆ. ಟಾಟಾ ಮೋಟಾರ್ಸ್ ಕಂಪನಿಯೂ ಸಣ್ಣ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ನಿಲ್ಲಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಕಂಪನಿಯು ಎಸ್‌ಯುವಿ ಸೆಗ್ ಮೆಂಟಿನಲ್ಲಿ ಮಾತ್ರ ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಸದ್ಯಕ್ಕೆ ಎಸ್‌ಯುವಿ, ಎಂಯುವಿ ಸೆಗ್ ಮೇಂಟಿನಲ್ಲಿರುವ ಡೀಸೆಲ್ ಎಂಜಿನ್ ಕಾರುಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈ ಕಾರಣಕ್ಕೆ ಮಹೀಂದ್ರಾ ಕಂಪನಿಯು ತನ್ನ ಒಟ್ಟಾರೆ ವಾಹನದ 88%ನಷ್ಟು ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಫೋರ್ಡ್ ಕಂಪನಿಯು 62%, ಜೀಪ್ ಕಂಪನಿಯು 60%, ಟೊಯೊಟಾ 53%, ಎಂಜಿ ಮೋಟಾರ್ 45%, ಕಿಯಾ ಮೋಟಾರ್ಸ್ 41%ನಷ್ಟು ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಇನ್ನು ಹ್ಯುಂಡೈ ಕಂಪನಿಯು 24%, ಟಾಟಾ ಮೋಟಾರ್ಸ್ 17% ಹಾಗೂ ಹೋಂಡಾ ಕಂಪನಿಯು 13%ನಷ್ಟು ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿವೆ. ಡೀಸೆಲ್ ಬೆಲೆ ಹೆಚ್ಚಳದಿಂದಾಗಿ, ಡೀಸೆಲ್ ಕಾರುಗಳ ಬೇಡಿಕೆಯು ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಡೀಸೆಲ್ ಮಾತ್ರವಲ್ಲ, ಪೆಟ್ರೋಲ್ ಬೆಲೆ ಸಹ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ಈ ಕಾರಣಕ್ಕೆ ಪರ್ಯಾಯ ಇಂಧನಗಳಾದ ಸಿಎನ್‌ಜಿ, ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳಿಗೆ ಬೇಡಿಕೆ ಮೊದಲಿಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈ ವಾಹನಗಳ ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ರಿಯಾಯಿತಿಗಳನ್ನು ಸಹ ನೀಡುತ್ತಿವೆ. ಈಗ ಇವುಗಳನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ಆಟೋಪಂಡಿಟ್ಜ್ ವರದಿ ಪ್ರಕಟಿಸಿದೆ.

Most Read Articles

Kannada
English summary
Petrol car sales increases after BS 6 norms. Read in Kannada.
Story first published: Wednesday, February 24, 2021, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X