100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಪಿಯಾಜಿಯೊ ಇಟಲಿ ಮೂಲದ ವಾಹನ ತಯಾರಕ ಕಂಪನಿಯಾಗಿದೆ. ಕಂಪನಿಯು ಏಳು ಬ್ರಾಂಡ್'ಗಳ ಹೆಸರಿನಲ್ಲಿ ಹಲವು ಮೋಟಾರು ವಾಹನ ಹಾಗೂ ಕಾಂಪ್ಯಾಕ್ಟ್ ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡುತ್ತದೆ.

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಕಂಪನಿಯು ಪಿಯಾಜಿಯೊ, ವೆಸ್ಪಾ, ಗಿಲೆರಾ, ಏಪ್ರಿಲಿಯಾ, ಮೋಟೋ ಗುಜಿ, ಡರ್ಬಿ ಹಾಗೂ ಸ್ಕಾರಬಿಯೊ ಹೆಸರಿನಲ್ಲಿ ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಕಂಪನಿಯ ಕೇಂದ್ರ ಕಚೇರಿ ಇಟಲಿಯ ಪೊಂಟೆಡೆರಾದಲ್ಲಿದೆ.

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಭಾರತದಲ್ಲಿಯೂ ತನ್ನ ವಾಹನಗಳನ್ನು ಮಾರಾಟ ಮಾಡುವ ಪಿಯಾಜಿಯೊ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಭಾರತದಲ್ಲಿ 100 ದಿನಗಳಲ್ಲಿ 100 ಶೋರೂಂಗಳನ್ನು ತೆರೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಭಾರತದಲ್ಲಿ ತನ್ನ ತ್ರಿಚಕ್ರ ಕಮರ್ಷಿಯಲ್ ವಾಹನಗಳ (ಸಿವಿ) ವ್ಯಾಪ್ತಿಯನ್ನು ವಿಸ್ತರಿಸಲು ಕಂಪನಿಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಕಮರ್ಷಿಯಲ್ ವೆಹಿಕಲ್ ಸೆಗ್ ಮೆಂಟಿನಲ್ಲಿ ಕಂಪನಿಯು ಈಗ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಪಿಯಾಜಿಯೊ ಕಂಪನಿಯು ಭಾರತದಲ್ಲಿ 725 ಶೋರೂಂಗಳನ್ನು ಹಾಗೂ 1,100 ಗ್ರಾಹಕ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಭಾರತದಲ್ಲಿ ಪಿಯಾಜಿಯೊ ಕಂಪನಿಯು ಏಪ್ರಿಲಿಯಾ, ವೆಸ್ಪಾ ಹಾಗೂ ಆ್ಯಪ್‌ ವಾಹನಗಳನ್ನು ಮಾರಾಟ ಮಾಡುತ್ತದೆ. ಪಿಯಾಜಿಯೊ ಕಂಪನಿಯು 2021ರ ಮೊದಲ ತ್ರೈಮಾಸಿಕ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ.

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಈ ವರದಿಯ ಪ್ರಕಾರ ಕಂಪನಿಯ ವಾಹನಗಳು ಹೆಚ್ಚು ಮಾರಾಟವಾಗಿವೆ. ಈ ವರದಿಯ ಪ್ರಕಾರ, ಕಂಪನಿಯು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ 90%ನಷ್ಟು ಹೆಚ್ಚಳವನ್ನು ದಾಖಲಿಸಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ವಾಹನಗಳನ್ನು ಭಾರತೀಯ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ ಎಂದು ತಮ್ಮ ಕಂಪನಿಯ ಸಾಧನೆಯ ಕುರಿತುಪಿಯಾಜಿಯೊ ವೆಹಿಕಲ್ಸ್ ಸಿಇಒ ಡಿಯಾಗೋ ಗ್ರಾಫಿ ಹೇಳಿದ್ದಾರೆ.

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಕಂಪನಿಯ ದ್ವಿಚಕ್ರ ಹಾಗೂ ತ್ರಿಚಕ್ರ ಕಮರ್ಷಿಯಲ್ ವಾಹನಗಳ ಬಗ್ಗೆ ಗ್ರಾಹಕರಿಗೆ ವಿಶ್ವಾಸ ಹೆಚ್ಚಾಗಿದೆ ಎಂದು ಅವರು ಹೇಳಿದರು. ತ್ರಿಚಕ್ರ ವಾಹನ ವಿಭಾಗದಲ್ಲಿ ಪಿಯಾಜಿಯೊ ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಕೋವಿಡ್ 19 ಸಾಂಕ್ರಾಮಿಕದ ಈ ಸಮಯದಲ್ಲಿ ಹಲವಾರು ಸವಾಲುಗಳ ನಡುವೆಯೂ ನಾವು ನಮ್ಮ ಮಾರಾಟ ಜಾಲವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಸ್ತರಿಸಿದ್ದೇವೆ. ಜೊತೆಗೆ ವಿದೇಶಗಳಲ್ಲಿಯೂ ನಮ್ಮ ಅಸ್ತಿತ್ವವನ್ನು ಬಲಪಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

100 ದಿನಗಳಲ್ಲಿ 100 ಶೋರೂಂ ತೆರೆದು ಹೊಸ ದಾಖಲೆ ನಿರ್ಮಿಸಿದ ಪಿಯಾಜಿಯೊ

ಈ ಬೆಳವಣಿಗೆಯು ವ್ಯಾಪಾರಿ ಸಮುದಾಯ ಹಾಗೂ ಗ್ರಾಹಕರು ಪಿಯಾಜಿಯೊ ಕಂಪನಿಯ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಕಂಪನಿಯುಭವಿಷ್ಯದ ಬ್ರಾಂಡ್ ಆಗಿ ಹೊರ ಹೊಮ್ಮುತ್ತಿದೆ ಎಂದು ಡಿಯಾಗೋ ಗ್ರಾಫಿ ಹೇಳಿದರು.

Most Read Articles

Kannada
English summary
Piaggio creates new milestone by opening 100 dealerships in 100 days. Read in Kannada.
Story first published: Wednesday, May 12, 2021, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X