ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಹೊಸ ಹೆಚ್‌ಟಿ ಸರಣಿಯ ಮೂರು ಹೊಸ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಸಿಎನ್‌ಜಿ ಚಾಲಿತ ಅಪೆ ಎಕ್ಸ್'ಟ್ರಾ ಹೆಚ್‌ಟಿ, ಅಪೆ ಆಟೋ ಹೆಚ್‌ಟಿ ಹಾಗೂ ಪೆಟ್ರೋಲ್ ಚಾಲಿತ ಅಪೆ ಎಕ್ಸ್'ಟ್ರಾ ಹೆಚ್‌ಟಿಗಳು ಸೇರಿವೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ವಾಹನಗಳನ್ನು ಕ್ರಮವಾಗಿ ಸರಕು ಹಾಗೂ ಪ್ರಯಾಣಿಕರ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಅಪೆ ಎಕ್ಸ್'ಟ್ರಾ ಹೆಚ್‌ಟಿ ಪೆಟ್ರೋಲ್ ಬೆಲೆ ಎಕ್ಸ್‌ಶೋರೂಂ ದರದಂತೆ ರೂ. 2.25 ಲಕ್ಷಗಳಾಗಿದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಇನ್ನು ಅಪೆ ಎಕ್ಸ್'ಟ್ರಾ ಹೆಚ್‌ಟಿ ಸಿಎನ್‌ಜಿ ಬೆಲೆ ಎಕ್ಸ್‌ಶೋರೂಂ ದರದಂತೆ ರೂ. 2.46 ಲಕ್ಷಗಳಾದರೆ, ಅಪೆ ಆಟೋ ಹೆಚ್‌ಟಿ ಬೆಲೆ ಎಕ್ಸ್‌ಶೋರೂಂ ದರದಂತೆ ರೂ. 2.56 ಲಕ್ಷಗಳಾಗಿದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಹೆಚ್‌ಟಿ ಸರಣಿಯು ಹೊಸ 300 ಸಿಸಿ ವಾಟರ್ ಕೂಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸಿಎನ್‌ಜಿ ಮಾದರಿಗಳು 11.39 ಬಿಹೆಚ್‌ಪಿ ಪವರ್ ಹಾಗೂ 22.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಇನ್ನು ಪೆಟ್ರೋಲ್ ಚಾಲಿತ ಅಪೆ ಎಕ್ಸ್'ಟ್ರಾ ಹೆಚ್‌ಟಿ ಮಾದರಿಯು 12 ಬಿಹೆಚ್‌ಪಿ ಪವರ್ ಹಾಗೂ 24 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪಿಯಾಜಿಯೊ ಕಂಪನಿಯು ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ಎಂಜಿನ್ ಇಂಟಿಗ್ರೇಟೆಡ್ ವಾಟರ್ ಕುಲಿಂಗ್ ಸಿಸ್ಟಂ ಅನ್ನು ಹೊಂದಿದ್ದು, ಕಡಿಮೆ ಎನ್‌ವಿಹೆಚ್ ಲೆವೆಲ್ ನೀಡುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ತ್ರಿಚಕ್ರ ವಾಹನ ಕಾರ್ಗೊ ಸೆಗ್ ಮೆಂಟಿನಲ್ಲಿ ಪೆಟ್ರೋಲ್ ಆವೃತ್ತಿಯನ್ನು ನೀಡುವ ಏಕೈಕ ಕಂಪನಿಯಾಗಿದೆ. ಸಿಎನ್‌ಜಿ ವಾಹನಗಳಿಗೆ ಹೆಚ್ಚು ಬೇಡಿಕೆ ಇರುವ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಈ ಪೆಟ್ರೋಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಮುಂಬರುವ ದಿನಗಳಲ್ಲಿ ಅಪೆ ಆಟೋ ಹೆಚ್‌ಟಿ ಪೆಟ್ರೋಲ್‌ ಆವೃತ್ತಿಯ ಪ್ಯಾಸೆಂಜರ್ ಮಾದರಿಯನ್ನು ಬಿಡುಗಡೆಗೊಳಿಸಲು ಪಿಯಾಜಿಯೊ ನಿರ್ಧರಿಸಿದೆ. ಕಾರ್ಗೊ ಸರಣಿಯಲ್ಲಿ ಮಾರಾಟವಾಗುವ 3 ಮಾದರಿಗಳು 5.0 ಅಡಿ, 5.5 ಅಡಿ ಹಾಗೂ 6.0 ಅಡಿ ಡೆಕ್ ಉದ್ದದ ಆಯ್ಕೆಗಳನ್ನು ಹೊಂದಿವೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ನಾನ್ ಬ್ರಾಂಡ್ ಇಂಧನ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ತ್ರಿಚಕ್ರ ವಾಹನದ ದೊಡ್ಡ ಸಾಮರ್ಥ್ಯದ ಎಂಜಿನ್ ಅನ್ನು ಪರಿಚಯಿಸಲಾಗಿದೆ ಎಂದು ಪಿಯಾಜಿಯೊ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಇವಿಪಿ ಕಮರ್ಷಿಯಲ್ ವೆಹಿಕಲ್ ಬಿಸಿನೆಸ್ ಮುಖ್ಯಸ್ಥರಾದ ಸಾಜು ನಾಯರ್ ಹೇಳಿದರು.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿದೆ. ಇದರ ಭಾಗವಾಗಿ ಕಂಪನಿಯು ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಿದೆ.

ಹೆಚ್‌ಟಿ ಸರಣಿಯ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಸದ್ಯಕ್ಕೆ ಬಹುತೇಕ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 725 ಕ್ಕೂ ಹೆಚ್ಚು ವಾಹನ ಮಾರಾಟಗಾರರನ್ನು ಮತ್ತು 1,100 ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳನ್ನು ಹೊಂದಿದೆ.

Most Read Articles

Kannada
English summary
Piaggio launches HT series three wheelers in India. Read in Kannada.
Story first published: Saturday, July 24, 2021, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X