ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಪೋರ್ಷೆ ಬಾಕ್ಸ್‌ಸ್ಟರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಪೋರ್ಟ್ಸ್ ಕಾರ್‌ಗಳಲ್ಲಿ ಒಂದಾಗಿದೆ. ಜರ್ಮನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಪೋರ್ಷೆ ತನ್ನ ಬಾಕ್ಸ್‌ಸ್ಟರ್ ಕಾರಿನ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೆಷಲ್ ಎಡಿಷನ್ ಅನ್ನು 1,250 ಯುನಿಟ್‌ಗಳ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಜಿಟಿಎಸ್ 4.0 ಮಾದರಿಯನ್ನು ಆಧರಿಸಿದೆ ಪೋರ್ಷೆ ಬಾಕ್ಸ್‌ಸ್ಟರ್ 25 ವರ್ಷಗಳು ಹಲವಾರು ವಿನ್ಯಾಸ ಅಂಶಗಳನ್ನು ಹೊಂದಿದ್ದು, ಅದು ಮೂಲ ಬಾಕ್ಸ್‌ಟರ್ ಕಾನ್ಸೆಪ್ಟ್ ಕಾರಿಗೆ ಹಿಂತಿರುಗುತ್ತದೆ, ಇದನ್ನು ಮೊದಲು 1993ರ ಡೆಟ್ರಾಯಿಟ್ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಯಿತು.

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋಟ್ಸ್ ಕಾರಿನ ಉತ್ಪಾದನೆಗಯನ್ನು 1996ರಲ್ಲಿ ಪ್ರಾರಂಭಿಸಿದ್ದರು. ಪೋರ್ಷೆ ಕಂಪನಿಯು ವಿಶ್ವಾದ್ಯಂತ ಇದುವವರೆಗೆ ಒಟ್ಟು 3.57 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಫಸ್ಟ್-ಜನರೇಷನ್ ಬಾಕ್ಸ್‌ಸ್ಟರ್ ತನ್ನ ಮುಂಭಾಗದ ವಿನ್ಯಾಸವನ್ನು 911 ಮಾದರಿಯೊಂದಿಗೆ ಹಂಚಿಕೊಂಡಿದೆ. ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋಟ್ಸ್ ಕಾರು ನಿಯೋಡೈಮ್ ಬಣ್ಣವನ್ನು ಹೊಂದಿದ್ದು, ಮೂಲ ಸಿಲ್ವರ್ ಮೆಟಾಲಿಕ್ ಬಣ್ಣಕ್ಕೆ ವಿರುದ್ಧವಾಗಿ ಅದನ್ನು ಮೂಲ 1993 ಕಾನ್ಸೆಪ್ಟ್ ಕಾರಿನಲ್ಲಿ ಬಳಸಲಾಯಿತು.

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೆಷಲ್ ಎಡಿಷನ್ ಮುಂಭಾಗದ ಏಪ್ರನ್, ಮೊನೊ ಬಾರ್‌ನೊಂದಿಗೆ ಸೈಡ್ ಏರ್ ಇಂಟೆಕ್ಸ್, 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ವಿಂಡ್ಸ್ಕ್ರೀನ್ ಸರೌಂಡ್ ವ್ಯತಿರಿಕ್ತ ಕಪ್ಪು ಬಣ್ಣವನ್ನು ಹೊಂದಿದೆ. ಇನ್ನು ಸ್ಪೋರ್ಟ್ ಎಕ್ಸಾಸ್ಟ್ ಸಿಸ್ಟಂಗಾಗಿ ಫ್ಯೂಯಲ್-ಕ್ಯಾಪ್ ಮತ್ತು ಟೈಲ್ ಪೈಪ್ಗಳು ಹೆಚ್ಚಿನ ಅಲ್ಯೂಮಿನಿಯಂ ಫಿನಿಶಿಂಗ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಪೋರ್ಷೆ ಬಾಕ್ಸ್‌ಸ್ಟರ್ ಸ್ಪೆಷಲ್ ಎಡಿಷನ್ ಒಳಭಾಗದಲ್ಲಿ ಬಾಕ್ಸ್‌ಟರ್ ಬೋರ್ಡೆಕ್ಸ್ ಲೆಧರ್ ನಿಂದ ಕೂಡಿದ್ದು, ಕೆಂಪು ಫ್ಯಾಬ್ರಿಕ್ ಕನ್ವರ್ಟಿಬಲ್ ಟಾಪ್ನೊಂದಿಗೆ ಪಡೆಯುತ್ತದೆ, ಕನ್ವರ್ಟಿಬಲ್ ಸಾಫ್ಟ್-ಟಾಪ್ ನಲ್ಲಿ 'ಬಾಕ್ಸ್‌ಸ್ಟರ್ 25' ಅಕ್ಷರಗಳನ್ನು ಹೊಂದಿದೆ.

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಒಳಾಂಗಣ ಮತ್ತು ಸಾಫ್ಟ್-ಟಾಪ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಆಯ್ಕೆಯನ್ನು ಹೊಂದಿದೆ. ಬಾಕ್ಸ್‌ಸ್ಟರ್ 25 ಹೆಚ್ಚುವರಿಯಾಗಿ ಅಲ್ಯೂಮಿನಿಯಂನಲ್ಲಿ ಒಳಾಂಗಣ ಪ್ಯಾಕೇಜ್, 14-ರೀತಿಯಲ್ಲಿ ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಹೊಂದಾಣಿಕೆ ಮಾಡಬಹುದಾದ ಸ್ಪೋರ್ಟ್ಸ್ ಸೀಟುಗಳು ಮತ್ತು ಮಲ್ಟಿಫಂಕ್ಷನ್ ಸ್ಪೋರ್ಟ್ಸ್ ಲೆದರ್ ಸ್ಟೀಯರಿಂಗ್ ವ್ಹೀಲ್ ಅನ್ನು ಸಹ ಹೊಂದಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಈ ಬಾಕ್ಸ್‌ಸ್ಟರ್ ಸ್ಪೆಷಲ್ ಎಡಿಷನ್ ನಲ್ಲಿ ಲೀಟರ್ ಫ್ಲಾಟ್ ಸಿಕ್ಸ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 394 ಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಪಿಡಿಕೆ ಟ್ರಾನ್ಸ್‌ಮಿಷನ್ ಅನ್ನು ಜೋಡಿಸಳಾಗಿದೆ.

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನ 25ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಪೋರ್ಷೆ ಬಾಕ್ಸ್‌ಸ್ಟರ್ ಸ್ಪೆಷಲ್ ಎಡಿಷನ್ 293 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಕಾರು ಕೇವಲ 4 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ. ಇನ್ನು ಇದು ಆಕ್ಟಿವ್ ಸಸ್ಪೆಂಕ್ಷನ್ ಮ್ಯಾನೇಜ್ಮೆಂಟ್ ಸ್ಪೋರ್ಟ್ಸ್ ಸಸ್ಪೆಂಕ್ಷನ್(ಪಿಎಎಸ್ಎಂ) ಅನ್ನು ಒಳಗೊಂಡಿದೆ.

Most Read Articles

Kannada
English summary
Porsche Celebrates 25 Years Of The Boxster With This Special Edition Model. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X