ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಜರ್ಮನ್ ಮೂಲದ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2021ರ ಪನಾಮೆರಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಪೋರ್ಷೆ ಪನಾಮೆರಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.45 ಕೋಟಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

2021ರ ಪೋರ್ಷೆ ಪನಾಮೆರಾ ಕಾರು ಪನಾಮೆರಾ ಜಿಟಿಎಸ್, ಪನಾಮೆರಾ ಟರ್ಬೊ ಎಸ್, ಮತ್ತು ಪನಾಮೆರಾ ಟರ್ಬೊ ಎಸ್ ಇ-ಹೈಬ್ರಿಡ್ ಎಂಬ ನಾಲ್ಕು ಮಾದರಿಗಳನ್ನು ಒಳಗೊಂಡಿದೆ. ಈ ಎಲ್ಲಾ ಮಾದರಿಗಳ ಬೆಲೆಗಳ ಬಗ್ಗೆ ಹೇಳುವುದಾದರೆ, ಪನಾಮೆರಾ ಸ್ಟ್ಯಾಂಡರ್ಡ್ ಬೆಲೆಯು ರೂ.1.45 ಕೋಟಿಯಿಂದ ಪ್ರಾರಂಭವಾಗುತ್ತದೆ ಮತ್ತು ಪನಾಮೆರಾ ಟರ್ಬೊ ಎಸ್ ಇ-ಹೈಬ್ರಿಡ್‌ ಮಾದರಿಯ ಬೆಲೆಯು ರೂ.2.43 ಕೋಟಿಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಇನ್ನು ಮಿಡ್-ಸ್ಪೆಕ್ ಪನಾಮೆರಾ ಜಿಟಿಎಸ್ ಮತ್ತು ಪನಾಮೆರಾ ಟರ್ಬೊ ಎಸ್ ಮಾದರಿಗಳ ಬೆಲೆಯು ಕ್ರಮವಾಗಿ ರೂ.1.86 ಕೋಟಿ ಮತ್ತು ರೂ.ಕೋಟಿಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

2021ರ ಪೋರ್ಷೆ ಪನಾಮೆರಾ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಲೀಟರ್ ವಿ 6 ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 325 ಬಿಹೆಚ್‌ಪಿ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಇನ್ನು ಟಾಪ್-ಸ್ಪೆಕ್ ಪನಾಮೆರಾ ಜಿಟಿಎಸ್ ಮಾದರಿಯು ವಿ8 ಎಂಜಿನ್ ಅನ್ನು ಪಡೆದುಕೊಂಡಿದೆ, ಈ ಎಂಜಿನ್ 473 ಬಿಹೆಚ್‌ಪಿ ಪವರ್ ಮತ್ತು 20 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಂತೆ ಈ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಪೋರ್ಷೆ ಇಂಡಿಯಾದ ಮುಖ್ಯಸ್ಥರಾದ ಮನೋಲಿಟೊ ವುಜಿಸಿಕ್ ಅವರು ಮಾತನಾಡಿ, ದೇಶಾದ್ಯಂತದ ನಮ್ಮ ಡೀಲರುಗಳಲ್ಲಿ ಪನಾಮೆರಾವನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇದು ಅತ್ಯುತ್ತಮವಾದ ಕಾರ್ಯಕ್ಷಮತೆ, ವರ್ಧಿತ ಸೌಕರ್ಯ ಮತ್ತು ಚಾಸಿಸ್ ನಿರ್ವಹಣೆ ಮತ್ತು ತೀಕ್ಷ್ಣವಾದ, ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿರುವ ಮಾದರಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಇದು 2009 ರಲ್ಲಿ ಪರಿಚಯವಾದಾಗಿನಿಂದ ಬ್ರಾಂಡ್‌ನ ಜಾಗತಿಕ ಯಶಸ್ಸಿಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ಪ್ರತಿಷ್ಠೆ ಮತ್ತು ಸೌಕರ್ಯಗಳ ಅಂತಿಮ ಸಂಯೋಜನೆಯನ್ನು 2021 ಪನಾಮೆರಾ ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಪನಾಮೆರಾ ಟೂಬೊ-ಆಫ್-ಲೈನ್ ಟ್ಯೂಬೊ ಎಸ್ ಇ-ಹೈಬ್ರಿಡ್ ಮಾದರಿಯು ಪವರ್ ಫುಲ್ ಆಗಿದೆ. ಇದು ವಿ8 ಬಿಟರ್ಬೊ ಎಂಜಿನ್ ಇದ್ದು, ಎಲೆಕ್ಟ್ರಿಕ್ ಮೋಟರ್ ಅನ್ನು ಜೋಡಿಸಲಾಗಿದೆ. ಇದು ಒಟ್ಟಾಗಿ 552 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು 2021ರ ಪೋರ್ಷೆ ಪನಾಮೆರಾ ಕಾರು

ಎಲೆಕ್ಟ್ರಿಕ್ ಮೋಟರ್ 17.9 ಕಿಲೋವ್ಯಾಟ್ ಬ್ಯಾಟರಿಯಿಂದ 59 ಕಿಲೋಮೀಟರ್ ವ್ಯಾಪ್ತಿಯವರೆಗೂ ಪೂರ್ಣವಾಗಿ ಎಲೆಕ್ಟ್ರಿಕ್ ಮೋಡ್ ನಲ್ಲಿ ಚಲಿಸುತ್ತದೆ. ಇನ್ನು ಇದರೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಡ್ಯುಯಲ್-ಕ್ಲಚ್ ಯುನಿಟ್ ಅನ್ನು ಒಳಗೊಂಡಿದೆ.

Most Read Articles

Kannada
English summary
2021 Porsche Panamera Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X