ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಬೆಂಗಳೂರು ಮೂಲದ ಪ್ರವೈಗ್ ಡೈನಾಮಿಕ್(Pravaig Dynamics) ಕಂಪನಿಯು ತನ್ನ ಹೊಸ ಎಕ್ಸ್ಟಿಷನ್ ಎಂಕೆ1(Extinction MK1) ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಕಾರಿನ ಉತ್ಪಾದನೆ, ವಿತರಣೆ ಮತ್ತು ಕಂಪನಿಯ ಮುಂದಿನ ಯೋಜನೆಗಳ ಕುರಿತಾಗಿ ಡೈನಾಮಿಕ್ ಕಂಪನಿಯು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹೊಸ ಎಕ್ಸ್ಟಿಷನ್ ಎಂಕೆ2 ಎಲೆಕ್ಟ್ರಿಕ್ ಕಾರಿನ ಫೋಟೋಟೈಪ್ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿರುವ ಪ್ರವೈಗ್ ಡೈನಾಮಿಕ್ ಕಂಪನಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದ್ದು, ಮಧ್ಯಮ ಕ್ರಮಾಂಕದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಫೀಚರ್ಸ್‌ಗಳ ಜೊತೆಗೆ ಅತ್ಯುತ್ತಮ ಮೈಲೇಜ್‌ನೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಪ್ರವೈಗ್ ಡೈನಾಮಿಕ್ ನಿರ್ಮಾಣದ ಎಕ್ಸ್ಟಿಷನ್ ಎಂಕೆ2 ಮಾದರಿಯು ದೂರದಿಂದ ಟೆಸ್ಲಾ ಕಾರು ಮಾದರಿಯಂತೆ ಕಂಡರೂ ತನ್ನದೆ ಆದ ವಿಭಿನ್ನ ತಾಂತ್ರಿಕ ಅಂಶಗಳು ಭಾರತೀಯ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರು ಭಾರತದಲ್ಲಿ 2022ರ ಮಧ್ಯಂತರದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹೊಸ ಎಲೆಕ್ಟ್ರಿಕ್ ಕಾರು ಮಾರಾಟ ಆರಂಭಿಸಿದ ನಂತರ ಪ್ರವೈಗ್ ಡೈನಾಮಿಕ್ ಕಂಪನಿಯು ಮೊದಲ ವರ್ಷದಲ್ಲಿ 2,500 ಯುನಿಟ್ ಉತ್ಪಾದನೆ ಮಾಡಿ ವಿತರಿಸುವ ಯೋಜನೆ ಹೊಂದಿದ್ದು, 2023ಕ್ಕೆ 1 ಲಕ್ಷ ಕಾರುಗಳನ್ನು ಅಭಿವೃದ್ದಿಪಡಿಸಲು ನಿರ್ಧರಿಸಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹಾಗೆಯೇ 2025ರ ವೇಳೆಗೆ 5 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನಾ ಗುರಿತಲುಪಲು ಯೋಜನೆ ರೂಪಿಸಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗೂ ಭಾರತದಿಂದಲೇ ರಫ್ತುಗೊಳ್ಳಲಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಮತ್ತೊಂದು ಮಹತ್ವದ ವಿಚಾರವೆಂದರೆ ಕಂಪನಿಯು ಮೊದಲ ವರ್ಷ ನಿರ್ಮಾಣ ಮಾಡುತ್ತಿರುವ 2500 ಯುನಿಟ್ ಕಾರುಗಳನ್ನು ಟ್ಯಾಕ್ಸಿ ಆಪರೇಟ್ ಸಂಸ್ಥೆಗಳಿಗೆ ವಿತರಿಸಲು ನಿರ್ಧರಿಸಿದ್ದು, 2023ರಲ್ಲಿ 1 ಲಕ್ಷ ಉತ್ಪಾದನಾ ಗುರಿಯ ಸಂದರ್ಭದಲ್ಲಿ ವ್ಯಯಕ್ತಿಕ ಕಾರು ಬಳಕೆದಾರರಿಗೆ ಹೊಸ ಎಕ್ಸ್ಟಿಷನ್ ಎಂಕೆ1 ಕಾರನ್ನು ವಿತರಣೆ ಮಾಡಲಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹೊಸ ಕಾರು ಸಂಪೂರ್ಣವಾಗಿ ಭಾರತದಲ್ಲಿಯೇ ಉತ್ಪಾದನೆ ಮಾಡಲಾದ ಬಿಡಿಭಾಗಗಳಿಂದ ನಿರ್ಮಾಣಗೊಂಡಿದ್ದು, ಹೊಸ ಕಾರಿನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಸಂಪನ್ಮೂಲವು ಕೂಡಾ ಸ್ಥಳೀಯ ಕಂಪನಿಗಳ ಜೊತೆಗೂಡಿ ಅಭಿವೃದ್ದಿಗೊಳಿಸಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಎಕ್ಸ್ಟಿಷನ್ ಎಂಕೆ2 ಹೈ ಎಂಡ್ ಕಾರು ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 504ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸಾಮಾನ್ಯ ಕಾರುಗಳಂತೆ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಕೂಡಾ ಫರ್ಪಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಅಂಶಗಳನ್ನು ಹೊಂದಿರುವ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, 96kWh ಲೀ-ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 30 ನಿಮಿಷಗಳಲ್ಲಿ ಗರಿಷ್ಠ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹಾಗೆಯೇ ಹೊಸ ಕಾರಿನಲ್ಲಿ ವಿವಿಧ ಡ್ರೈವ್ ಮೊಡ್‌ಗಳನ್ನು ನೀಡಲಾಗಿದ್ದು, 201.5-ಬಿಎಚ್‌ಪಿ ಉತ್ಪಾದನೆಯೊಂದಿಗೆ ಗಂಟೆಗೆ ಗರಿಷ್ಠ 196 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಇದರೊಂದಿಗೆ ಹೊಸ ಕಾರಿನ ಹೊರಭಾಗದ ವಿನ್ಯಾಸವು ಸಹ ಸೆಡಾನ್ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಾನ್ಸೆಪ್ಟ್ ಮಾದರಿಯನ್ನು ಟೂ ಡೋರ್ ಕೂಪೆ ಮಾದರಿಯಲ್ಲಿ ಸಿದ್ದಪಡಿಸಲಾಗಿದೆ. ಆದರೆ ಉತ್ಪಾದನಾ ಆವೃತ್ತಿಯು ಫೋರ್ ಡೋರ್ ಮಾದರಿಯಾಗಿರಲಿದ್ದು, ಭಾರತೀಯ ಕಾರು ಖರೀದಿದಾರರ ಅಭಿರುಚಿಗೆ ತಕ್ಕಂತೆ ಹೊಸ ಕಾರನ್ನು ಸಿದ್ದಪಡಿಸಲಾಗುತ್ತಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹೊಸ ಕಾರಿನ ಕಾನ್ಸೆಪ್ಟ್ ಮಾದರಿಯೊಂದಿಗೆ ಮೈಲೇಜ್ ಮಾಹಿತಿಯ ಹೊರತಾಗಿ ಒಳಭಾಗದ ತಾಂತ್ರಿಕ ಅಂಶಗಳನ್ನು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿನ ವಿನ್ಯಾಸವನ್ನೇ ಉತ್ಪಾದನಾ ಆವೃತ್ತಿಯಲ್ಲೂ ಉಳಿಸಿಕೊಳ್ಳುವ ಸುಳಿವು ನೀಡಿದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಹೊಸ ಕಾರಿನಲ್ಲಿ ಆಕರ್ಷಕವಾದ ಡ್ಯಾಶ್‌ಬೋರ್ಡ್, ಸ್ಪೋರ್ಟಿಯಾಗಿರುವ ಸ್ಟೀರಿಂಗ್ ವ್ಹೀಲ್, ಅರಾಮದಾಯಕವಾದ ಆಸನ ಸೌಲಭ್ಯ, ಎಲೆಕ್ಟ್ರಿಕ್ ಸನ್‌ರೂಫ್, ವೆಹಿಕಲ್ ಮ್ಯಾನೆಜ್‌ಮೆಂಟ್ ಸಿಸ್ಟಂ ಜೊತೆಗೆ ಅತ್ಯುತ್ತಮ ಬೂಟ್‌ಸ್ಪೆಸ್, ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಸೇರಿ ಹಲವು ಆಕರ್ಷಕ ತಾಂತ್ರಿಕ ಸೌಲಭ್ಯಗಳಿವೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಪ್ರವೈಗ್ ಕಂಪನಿಯು ಹೊಸ ಕಾರು ಮಾದರಿಗಾಗಿ ಎನ್‌ವಿಡಿಯಾ ಕಂಪನಿಯ ಜೊತೆಗೂಡಿ ಲೆವಲ್ 2 ಅಟೋನಮಸ್ ತಂತ್ರಜ್ಞಾನವನ್ನು ಅಳವಡಿಸಿದ್ದು, ಅಟೋನಮೊಸ್ ತಂತ್ರಜ್ಞಾನ ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್‌ಗಳನ್ನು ಖಾತ್ರಿಪಡಿಸುತ್ತದೆ.

ಕಾರು ವಿತರಣೆ ಮತ್ತು ಹೊಸ ಯೋಜನೆ ಮಾಹಿತಿ ಬಹಿರಂಗಪಡಿಸಿದ Pravaig Dynamics

ಡಿವೆಲೆಟ್ ಕಂಪನಿಯ ಜೊತೆಗೂಡಿ ಹೊಸ ಕಾರು ಮಾದರಿಗಾಗಿ ಪ್ರೀಮಿಯಂ ಸೌಂಡ್ ಸಿಸ್ಟಂ ಜೋಡಣೆ ಮಾಡಿದ್ದು, ಇಸಿಯು ಮತ್ತು ಕಂಟ್ರೋಲ್ ಡಿವೈಸ್‌ಗಳಿಗಾಗಿ ಡಿವೆಸ್ ಕಂಪನಿಯೊಂದಿಗೆ ಕೈಜೋಡಿಸಿದೆ. ಒಟ್ಟಿನಲ್ಲಿ ಭಾರತೀಯ ಗ್ರಾಹಕರಿಗಾಗಿ ಭಾರತೀಯ ಕಂಪನಿಗಳ ಜೊತೆಗೂಡಿ ಹೊಸ ಕಾರನ್ನ ಅಭಿವೃದ್ದಿಪಡಿಸುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನ ಬೆಲೆ ನಿಗದಿ ಮೇಲೆ ಗ್ರಾಹಕರ ಬೇಡಿಕೆಯು ನಿರ್ಧಾರವಾಗಲಿದೆ.

Most Read Articles

Kannada
English summary
Pravaig dynamics first electric car extinction mk1 launch timeline revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X