ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹಲವು ಜನಪ್ರಿಯ ಮಾದರಿಗಳಿವೆ. ಇತ್ತೀಚಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದ ಕಾರುಗಳ ಮಾಹಿತಿ ಇಲ್ಲಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಮಾರುತಿ ಬಲೆನೊ

2021ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿಯ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. 2020ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಬಲೆನೊ ಮಾದರಿಯ 17,872 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇನ್ನು ಕಳೆದ ತಿಂಗಳಿನಲ್ಲಿ 9,931 ಯುನಿಟ್‌ಗಳು ಮಾರಾಟವಾಗಿತ್ತು. ಇದು ವರ್ಷದಿಂದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಕುಸಿತವನ್ನು ಕಂಡಿದೆ, ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಈ ಜನಪ್ರಿಯ ಬಲೆನೊ ಕಾರು ಮಾರಾಟದಲ್ಲಿ 1 ಮಿಲಿಯನ್ ಅಥವಾ 10 ಲಕ್ಷ ಯುನಿಟ್‌ಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಮಾರುತಿ ಸುಜುಕಿಯು 2020ರ ಮೇ ಮತ್ತು 2021ರ ಅಕ್ಟೋಬರ್ ತಿಂಗಳುಗಳ ನಡುವೆ 2.5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ 2015 ರಲ್ಲಿ ಬಿಡುಗಡೆಯಾದಗಿನಿಂದ ತಯಾರಕರು ಹ್ಯಾಚ್‌ಬ್ಯಾಕ್‌ನಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಈ ಬಲೆನೊ ಆಗಿದೆ. ಈ ಸಂದರ್ಭದಲ್ಲಿ ಬಲೆನೊ ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವೆಣೆಗಳನ್ನು ಮಾಡಲಾಗಿತ್ತು. ಮಾರುತಿ ಬಲೆನೊ ಮುಂದಿನ ವರ್ಷ ಮತ್ತೊಂದು ಫೇಸ್‌ಲಿಫ್ಟ್ ಪಡೆಯಬಹುದು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಬಲೆನೊ ಮಾದರಿಗೆ ಹೋಲಿಸಿದರೆ ಬಲೆನೊ ಫೇಸ್‌ಲಿಫ್ಟ್ ಸ್ಟೈಲಿಂಗ್‌ನಲ್ಲಿ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಬಹುದು.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಹ್ಯುಂಡೈ ಐ20

ಹ್ಯುಂಡೈ ಐ20 ಅತಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ಟಾಟಾ ಆಲ್‌‌ಟ್ರೊಜ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳಿನಲ್ಲಿ ಹ್ಯುಂಡೈ ಐ20 ಮಾದರಿಯ 4,391 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಇದರ 9,096 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.52 ರಷ್ಟು ಕುಸಿತವನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತು. ಆದರೆ ನಂತರದಲ್ಲಿ ಈ ನ್ಯೂ ಜನರೇಷನ್ ಕಾರಿನ ಮಾರಾಟದಲ್ಲಿ ಕೊಂಚ ಇಳಿಯಿತು.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಈ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಈ ಎಲ್ಲಾ ಕಾರಣದಿಂದ ಈ ಹೊಸ ಹ್ಯುಂಡೈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಟಾಟಾ ಆಲ್‌‌ಟ್ರೊಜ್

ಆಲ್‌‌ಟ್ರೊಜ್ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ಕಳೆದ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಮಾದರಿಯ 3,025 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಇದರ 6,260 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.52 ರಷ್ಟು ಕುಸಿತವನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಸ್ವದೇಶಿ ಬ್ರಾಂಡ್ ಆಲ್‌‌ಟ್ರೊಜ್ ಅನ್ನು 2020ರ ಜನವರಿ ತಿಂಗಳಿನಲ್ಲಿ ALFA ARC (ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಆರ್ಕಿಟೆಕ್ಚರ್ ನಿಂದ ಆಧಾರವಾಗಿರುವ ಮೊದಲ ಉತ್ಪನ್ನವಾಗಿ ಪರಿಚಯಿಸಿತು ಮತ್ತು ಇದು ಅತ್ಯಂತ ಆಕರ್ಷಕ ಮತ್ತು ಸುರಕ್ಷಿತ ಕಾರು ಹಣವು ಕೈಗೆಟುಕುವ ಮಾದರಿಯಾಗಿದೆ. ಟಾಟಾ ಆಲ್‌‌ಟ್ರೊಜ್ ಹೊಸ 'ಐ-ಟರ್ಬೊ' ರೂಪಾಂತರವನ್ನು ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಮತ್ತಷ್ಟು ಬೂಸ್ಟ್ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಟೊಯೊಟಾ ಗ್ಲಾಂಝಾ

ಟೊಯೊಟಾ ಹಾಗೂ ಮಾರುತಿ ಸುಜುಕಿ ಸಹಭಾಗಿತ್ವವನ್ನು ಹೊಂದಿವೆ. ಈ ಸಹಭಾಗಿತ್ವದಲ್ಲಿ ತಯಾರಾದ ಮೊದಲ ಕಾರು ಟೊಯೊಟಾ ಗ್ಲಾಂಝಾ. ಟೊಯೊಟಾ ಗ್ಲಾಂಝಾ, ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ರಿಫ್ರೆಶ್ ಆವೃತ್ತಿಯಾಗಿದೆ. ಟೊಯೊಟಾ ಗ್ಲಾಂಝಾ ಬಹುತೇಕ ಮಾರುತಿ ಸುಜುಕಿ ಬಲೆನೊ ರೀತಿ ಕಾಣುತ್ತದೆ. ಆದರೆ ಹೊಸ ಫ್ರಂಟ್ ಗ್ರಿಲ್ ಹಾಗೂ ಹೊಸ ಬ್ಯಾಡ್ಜ್‌ಗಳೊಂದಿಗೆ, ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಬಲೆನೊ ಕಾರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಕಳೆದ ತಿಂಗಳಿನಲ್ಲಿ ಟೊಯೊಟಾ ಗ್ಲಾಂಝಾ ಮಾದರಿಯ 1,904 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಇದರ 2,428 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.22 ರಷ್ಟು ಕುಸಿತವನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿವು

ಹೋಂಡಾ ಜಾಝ್

ಹೋಂಡಾ ಜಾಝ್ ವಿ, ವಿಎಕ್ಸ್ ಮತ್ತು ಜೆಡ್ಎಕ್ಸ್ ವೆರಿಯೆಂಟ್‌ಗಳೊಂದಿಗೆ ಪ್ರತಿ ವೆರಿಯೆಂಟ್‌ನಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಿದ್ದು, 1.2-ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿವೆ. ಕಳೆದ ತಿಂಗಳಿನಲ್ಲಿ ಹೋಂಡಾ ಜಾಝ್ ಮಾದರಿಯ 327 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಇದರ 633 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.48 ರಷ್ಟು ಕುಸಿತವನ್ನು ಕಂಡಿದೆ.

Most Read Articles

Kannada
English summary
Premium hatchback sales november 2021 in india details
Story first published: Wednesday, December 8, 2021, 19:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X