ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂಧನ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ಸ್ಪೇನ್ ಮೂಲದ ಪ್ರಖ್ಯಾತ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಕೂಡಾ ತಮ್ಮ ಐಷಾರಾಮಿ ಕಾರುಗಳ ಪಟ್ಟಿಗೆ ಕಿಯಾ(Kia) ಹೊಸ ಇವಿ6(EV6) ಮಾದರಿಯನ್ನು ಸೇರ್ಪಡೆಗೊಳಿಸಿದ್ದಾರೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಅಮೆರಿಕ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಡೀಸೆಲ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಹಿನ್ನಲೆಯಲ್ಲಿ ಎಲೆಕ್ಟ್ಕಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಮಾಲಿನ್ಯ ತಡೆ ಮತ್ತು ಭವಿಷ್ಯದ ದೃಷ್ಠಿಯಿಂದ ಇಂಧನದ ಮೇಲೆ ಅವಂಲನೆಯನ್ನು ತಪ್ಪಿಸಲು ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ವಾಹನಗಳ ಬಳಕೆಯತ್ತ ಗಮನಹರಿಸಲಾಗುತ್ತಿದ್ದು, ಸರ್ಕಾರದ ನಿರ್ಣಯಗಳಿಗೆ ಪೂರಕವಾಗಿ ಆಟೋ ಉತ್ಪಾದನಾ ಕಂಪನಿಗಳು ಸಹ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಮಾದರಿಗಳ ಮಾರಾಟದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಕಿಯಾ ಕಂಪನಿಯು ಕೂಡಾ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಹೊಸ ಇವಿ6 ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಅವರ ಅತ್ಯುತ್ತಮ ಕಾರುಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಟೆನ್ನಿಸ್‌ನಲ್ಲಿ ಜಾಗತಿಕವಾಗಿ ಹಲವಾರು ಟೂರ್ನಿಗಳಲ್ಲಿ ಜಯಶಾಲಿಯಾಗಿರುವ ರಾಫೆಲ್ ನಡಾಲ್ ಬಳಿ ಹಲವಾರು ಸೂಪರ್ ಕಾರುಗಳು ಮತ್ತು ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ಇದ್ದು, ಇದೀಗ ಮೊದಲ ಬಾರಿಗೆ ಇವಿ6 ಮಾದರಿಯೊಂದಿಗೆ ತಮ್ಮ ಅತ್ಯುತ್ತಮ ಕಾರುಗಳ ಪಟ್ಟಿಗೆ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸೇರ್ಪಡೆಗೊಳಿಸಿದ್ದಾರೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ ಹಂತದಲ್ಲಿ ಕಾಲಿನ ಗಾಯದಿಂದಾಗಿ ಸದ್ಯ ವಿಶ್ರಾಂತಿಯಲ್ಲಿರುವ ರಾಫೆಲ್ ನಡಾಲ್ ಅವರು ಬಿಡುವಿನ ವೇಳೆ ಕಾರುಗಳ ಕ್ರೇಜ್ ಹೊಂದಿದ್ದು, ತಮ್ಮ ಹೊಸ ಕಾರುಗಳ ಸಂಗ್ರಹದಲ್ಲಿ ಇದೀಗ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರು ಮಾದರಿಗೂ ಆದ್ಯತೆ ನೀಡಿದ್ದಾರೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಹೊಸ ಇವಿ6 ಕಾರು ಖರೀದಿ ನಂತರ ಭವಿಷ್ಯದ ಇವಿ ವಾಹನಗಳ ಕುರಿತಾಗಿ ಮಾತನಾಡಿದ ರಾಫೆಲ್ ನಡಾಲ್ ಅವರು, ವೃತ್ತಿ ಬದುಕಿನಲ್ಲಿ ಸಮಯಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿರುವಂತೆ ಮುಂಬರುವ ದಿನಗಳಲ್ಲಿ ಸಾಧ್ಯವಿರುವ ಕಡೆಗೆ ಪರಿಸರ ಸ್ನೇಹಿ ವಾಹನಗಳನ್ನು ಅಳವಡಿಸಿಕೊಳ್ಳಲು ಮತ್ತು ಬಳಕೆ ಮಾಡುವುದಾಗಿ ಸಂಕಲ್ಪ ಮಾಡಿದ್ದಾರೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಇನ್ನು ಗ್ರಾಹಕರ ಬೇಡಿಕೆಯೆಂತೆ ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಇವಿ ವಾಹನ ಮಾರಾಟದಲ್ಲಿ ಹೊಸ ನೀರಿಕ್ಷೆಯೊಂದಿಗೆ ವಿವಿಧ ಇವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಅಮೆರಿಕಾ ಮತ್ತು ಯುರೋಪ್ ಮಾರುಕಟ್ಟೆಗಾಗಿ ಹೊಸ ತಂತ್ರಜ್ಞಾನ ಪ್ರೇರಿತ ಇವಿ6 ಕ್ರಾಸ್ ಓವರ್ ಎಸ್‌ಯುವಿ ಮಾದರಿಯನ್ನು ಪರಿಚಯಿಸಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿರುವ ಇವಿ6 ಮಾದರಿಯಲ್ಲಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಆಕರ್ಷಕ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ಎಸ್‌ಯುವಿಯು ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಇವಿ6 ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, 576-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೊಸ ಕಾರು 400ವಿ ಮತ್ತು 800ವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಮಾಣ ಚಾರ್ಜ್ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಸೂಪರ್ ಫಾಸ್ಟ್ ಚಾರ್ಜರ್ ಮೂಲಕ ಕೇವಲ 5 ನಿಮಿಷ ಚಾರ್ಜ್ ‌ಮಾಡಿದರೆ 112 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, 18 ನಿಮಿಷ ಚಾರ್ಜ್ ಮಾಡಿದ್ದಲ್ಲಿ 330 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 50 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದಲ್ಲಿ 480 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದೆ. ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ತುಸು ದುಬಾರಿಯಾಗಿದ್ದು, ಈ ಹೊಸ ಕಾರು ಸದ್ಯಕ್ಕೆ ಅಮೆರಿಕ ಮತ್ತು ಯುರೋಪಿನ ಕೆಲವೇ ಕೆಲವು ರಾಷ್ಟ್ರಗಳಿಗಾಗಿ ಮಾತ್ರ ಅಭಿವೃದ್ದಿಪಡಿಸಲಾಗಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಹಿನ್ನಲೆಯಲ್ಲಿ ಎಲೆಕ್ಟ್ಕಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ಎಲೆಕ್ಟ್ರಿಕ್ ಕಾರ್ ಕ್ರೇಜ್- Kia EV6 ಕಾರು ಖರೀದಿಸಿದ ಟೆನ್ನಿಸ್ ತಾರೆ ರಾಫೆಲ್ ನಡಾಲ್

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸದ್ಯ ಜಾಗತಿಕವಾಗಿ ಗುರುತಿಸಿಕೊಂಡಿರುವ ಅಮೆರಿಕದ ಟೆಸ್ಲಾ ಕಂಪನಿಗೆ ಪೈಪೋಟಿಯಾಗಿ ಕಿಯಾ ತನ್ನ ಹೊಸ ಇವಿ6 ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ6 ಮಾದರಿಯು ಪ್ರತಿಸ್ಪರ್ಧಿ ಟೆಸ್ಲಾ ಇವಿ ಕಾರುಗಳಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

Most Read Articles

Kannada
English summary
Rafael nadal adds kia ev6 to personal fleet details
Story first published: Saturday, October 23, 2021, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X