ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಟಾಟಾ ಮೋಟಾರ್ಸ್ ಭಾರತದಲ್ಲಿರುವ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ವಾರ್ಷಿಕ ಮಾರಾಟದಲ್ಲಿ 119%ನಷ್ಟು ಏರಿಕೆಯನ್ನು ದಾಖಲಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

2020ರ ಫೆಬ್ರವರಿ ತಿಂಗಳಿನಲ್ಲಿ 12,430 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 27,225 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಟಾಟಾ ಮೋಟಾರ್ಸ್ ಕಂಪನಿಯು ಹಲವಾರು ವಿಧದ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಸ್ವತಃ ರತನ್ ಟಾಟಾರವರೇ 1998ರ ಆಟೋ ಎಕ್ಸ್‌ಪೋದಲ್ಲಿ ಸಫಾರಿ ಎಸ್‌ಯುವಿ ಹಾಗೂ ಇಂಡಿಕಾ ಹ್ಯಾಚ್‌ಬ್ಯಾಕ್ ಕಾರ್ ಅನ್ನು ಅನಾವರಣಗೊಳಿಸಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಈ ಎರಡೂ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸನ್ನು ಕಂಡವು. ರತನ್ ಟಾಟಾರವರು ಈ ಎರಡು ಜನಪ್ರಿಯ ವಾಹನಗಳನ್ನು ಅನಾವರಣಗೊಳಿಸುವ ವೀಡಿಯೊವನ್ನು ಈ ಲೇಖನದಲ್ಲಿ ಶೇರ್ ಮಾಡುತ್ತಿದ್ದೇವೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಒಂದು ವೀಡಿಯೊ ರತನ್ ಟಾಟಾ ಅವರ ಭಾಷಣದಿಂದ ಆರಂಭವಾಗುತ್ತದೆ. ಈ ವೀಡಿಯೊದಲ್ಲಿ ಟಾಟಾ ಇಂಡಿಕಾದ ಹಿಂಭಾಗವನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ. ನಂತರ ಟಾಟಾ ಸಫಾರಿ ಫೋಟೋಗಳನ್ನು ತೋರಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಈ ವೀಡಿಯೊದಲ್ಲಿ ಕಲ್ಲುಗಳ ಮೇಲೆ ನಿಂತಿರುವ ಬಿಳಿ ಬಣ್ಣದ ಸಫಾರಿಯನ್ನು ಕಾಣಬಹುದು. ಟಾಟಾ ಸಫಾರಿ ಎಸ್‌ಯು‌ವಿಯ ಆಫ್ ರೋಡ್ ಸಾಮರ್ಥ್ಯದ ಬಗ್ಗೆ ಹೇಳುವುದು ಇದರ ಹಿಂದಿರುವ ಉದ್ದೇಶ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಈ ವೀಡಿಯೊದಲ್ಲಿ ಕೆಂಪು ಬಣ್ಣದ ಟಾಟಾ ಸಫಾರಿಯನ್ನು ಸಹ ಕಾಣಬಹುದು. ಇಂಡಿಕಾ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಯಾದ ಎರಡು ವಾರಗಳಲ್ಲಿ ದಾಖಲೆ ಸಂಖ್ಯೆಯ ಬುಕ್ಕಿಂಗ್'ಗಳನ್ನು ಪಡೆದಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಎರಡು ವರ್ಷಗಳಲ್ಲಿ ಇಂಡಿಕಾ ಹ್ಯಾಚ್‌ಬ್ಯಾಕ್ ಕಾರು ಈ ಸೆಗ್'ಮೆಂಟಿನ ಮಾರಾಟದಲ್ಲಿ ಮೊದಲ ಸ್ಥಾನವನ್ನು ಪಡೆದಿತ್ತು. ಇಂಡಿಕಾ ಕಾರ್ ಅನ್ನು 1.4 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್'ಗಳೊಂದಿಗೆ ಮಾರಾಟ ಮಾಡಲಾಯಿತು.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಪೆಟ್ರೋಲ್ ಎಂಜಿನ್ 60 ಬಿಹೆಚ್‌ಪಿ ಪವರ್ ಹಾಗೂ 104 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 53.5 ಬಿಹೆಚ್‌ಪಿ ಪವರ್ ಹಾಗೂ 85 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳೊಂದಿಗೆ ನಾಲ್ಕು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಇಂಡಿಕಾ ಹ್ಯಾಚ್‌ಬ್ಯಾಕ್ ಕಾರಿನ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.2.59 ಲಕ್ಷಗಳಾದರೆ, ಟಾಪ್ ಎಂಡ್ ಡಿಎಲ್‌ಎಕ್ಸ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.3.9 ಲಕ್ಷಗಳಾಗಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಡಿಎಲ್‌ಎಕ್ಸ್ ಮಾದರಿಯಲ್ಲಿ ನಾಲ್ಕು ಡೋರ್ ಪವರ್ ವಿಂಡೋ, ಸೆಂಟ್ರಲ್ ಲಾಕಿಂಗ್‌ ಹೊಂದಿರುವ ರಿಮೋಟ್, ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, ರೇರ್ ವೈಪರ್, ಪಾರ್ಸೆಲ್ ಟ್ರೇ, ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಡಿಜಿಟಲ್ ಗಡಿಯಾರ ಹಾಗೂ ಟ್ಯಾಕೋಮೀಟರ್'ಗಳನ್ನು ನೀಡಲಾಗಿತ್ತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಆ ಸಮಯದಲ್ಲಿ ಬೇರೆ ಯಾವುದೇ ಕಾರು ನೀಡಲು ಸಾಧ್ಯವಾಗದಂತಹ ರೋಡ್ ಪ್ರೆಸೆನ್ಸ್ ಅನ್ನು ಟಾಟಾ ಸಫಾರಿ ನೀಡಿತ್ತು. ಆಗ ಟಾಟಾ ಸಫಾರಿ ಎಸ್‌ಯು‌ವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.8.25 ಲಕ್ಷಗಳಾಗಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಬಿಎಸ್ 6 ಮಾಲಿನ್ಯ ನಿಯಮ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇಂಡಿಕಾ ಹ್ಯಾಚ್‌ಬ್ಯಾಕ್ ಕಾರ್ ಅನ್ನು 2018ರಲ್ಲಿ ಸ್ಥಗಿತಗೊಳಿಸಲಾಯಿತು. ಸಫಾರಿಯನ್ನು 2019ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಲಾಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಇತ್ತೀಚೆಗೆ ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಹೆಸರಿನಲ್ಲಿಯೇ ಹೊಸ ಎಸ್‌ಯು‌ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹಳೆಯ ಸಫಾರಿಗಿಂತ ಭಿನ್ನವಾಗಿರುವ ಹೊಸ ಸಫಾರಿ ಫ್ರಂಟ್ ವ್ಹೀಲ್ ಡ್ರೈವ್ ಅನ್ನು ಮಾತ್ರ ಹೊಂದಿದೆ.

ಜೊತೆಗೆ ಮೊನೊಕೊಕ್ ಚಾಸಿಸ್ ಅನ್ನು ಸಹ ಹೊಂದಿದೆ. ಹಳೆ ಮಾದರಿಯ ಸಫಾರಿ ಲಿಡರ್ ಫ್ರೇಮ್ ಚಾಸಿಸ್ ಅನ್ನು ಹೊಂದಿದ್ದವು. ಜೊತೆಗೆ 4×4 ಡ್ರೈವ್ ಸಾಮರ್ಥ್ಯವನ್ನು ಹೊಂದಿದ್ದವು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಸಫಾರಿ ಎಸ್‌ಯು‌ವಿಯಲ್ಲಿ ಹ್ಯಾರಿಯರ್, ಜೀಪ್ ಕಂಪಾಸ್ ಹಾಗೂ ಎಂಜಿ ಹೆಕ್ಟರ್‌ನಲ್ಲಿರುವಂತಹ 2.0 ಲೀಟರ್ ಕೈರೋಟೆಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಕಾರುಗಳು ಅನಾವರಣಗೊಂಡಿದ್ದ ಅಪರೂಪದ ಕ್ಷಣಗಳಿವು

ಈ ಎಂಜಿನ್'ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಆರು-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗುತ್ತದೆ. ಇದು ಫ್ರಂಟ್ ವ್ಹೀಲ್'ಗಳನ್ನು ಮಾತ್ರ ಚಾಲನೆ ಮಾಡುತ್ತದೆ. ಹೊಸ ಸಫಾರಿ ಎಸ್‌ಯು‌ವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.14.69 ಲಕ್ಷಗಳಾಗಿದೆ.

ಚಿತ್ರಕೃಪೆ: ವೈಲ್ಡ್ ಫಿಲ್ಮ್ಸ್ ಇಂಡಿಯಾ

Most Read Articles

Kannada
English summary
Rare video of Ratan Tata unveiling Safari SUV and Indica hatchback in 1998. Read in Kannada.
Story first published: Monday, April 19, 2021, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X