ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಲಿದೆ ರಿಲಯನ್ಸ್

ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ಚೀನಾ ಏಕಸ್ವಾಮ್ಯತೆ ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದಂತೆ ಇದೀಗ ಭಾರತದಲ್ಲೂ ಪ್ರಮುಖ ಕಂಪನಿಗಳು ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸುತ್ತಿವೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ದುಬಾರಿ ಇಂಧನಗಳ ಪರಿಣಾಮ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದ್ದು, ಪರಿಸರ ಸ್ನೇಹಿ ವಾಹನಗಳಿಗೆ ಇಂಧನ ಚಾಲಿತ ವಾಹನಗಳಂತೆ ಹೆಚ್ಚಿನ ಮಟ್ಟದ ಬೇಡಿಕೆ ಸೃಷ್ಠಿಸಲು ಬ್ಯಾಟರಿ ಸಂಪನ್ಮೂಲವನ್ನು ಅಗ್ಗವಾಗಿಸಲು ಹಲವಾರು ಕಂಪನಿಗಳು ಭಾರತದಲ್ಲೇ ಬ್ಯಾಟರಿ ಉತ್ಪಾದನೆಗೆ ಸಿದ್ದವಾಗುತ್ತಿವೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗೆ ಹಲವಾರು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆಯಾರೂ ಇವಿ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿಗಾಗಿ ವಿದೇಶಿ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವುದೇ ಇವಿ ವಾಹನಗಳ ಬೆಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ವಾಹನಗಳ ತಯಾಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಬೇಕಿರುವ ಶೇ.90 ಬಿಡಿಭಾಗಗಳನ್ನು ಸ್ಥಳೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರೂ ಬ್ಯಾಟರಿ ಸಂಪನ್ಮೂಲಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನೇ ಅವಲಂಬನೆಯಾಗಿರುವುದು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಸಾಮಾನ್ಯ ವಾಹನಗಳಂತೆ ಜನಪ್ರಿಯತೆಗೊಳಿಸಲು ಸಾಧ್ಯವಾಗುತ್ತಿಲ್ಲ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಆಮದುಗೊಳ್ಳುವ ಬ್ಯಾಟರಿಯಿಂದಾಗಿ ದುಬಾರಿ ಬೆಲೆ ಪರಿಣಾಮ ಇವಿ ವಾಹನ ಖರೀದಿಗೆ ಆಸಕ್ತಿ ಇದ್ದರೂ ಹಿಂದೇಟು ಹಾಕುತ್ತಿರುವ ಗ್ರಾಹಕರು ಬಜೆಟ್ ಬೆಲೆಯಲ್ಲಿ ಇವಿ ವಾಹನಗಳನ್ನು ನೀರಿಕ್ಷಿಸುತ್ತಿದ್ದು, ಹೊಸ ಉದ್ಯಮದಲ್ಲಿ ರಿಲಯನ್ಸ್ ಕಂಪನಿಯು ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಎಲೆಕ್ಟ್ರಾನಿಕ್ಸ್ ಮಾರಾಟ ಮತ್ತು ತೈಲ ಮಾರಾಟ ಸೇರಿದಂತೆ ವಿವಿಧ ಕ್ಷೇತ್ರ ಲಕ್ಷಾಂತರ ಕೋಟಿ ಹೂಡಿಕೆ ಮಾಡಿರುವ ರಿಲಯನ್ಸ್ ಕಂಪನಿಯು ಇದೇ ಮೊದಲ ಬಾರಿಗೆ ನವೀಕರಿಸಬಹುದಾದ ಇಂಧನ ವಿಭಾಗದಲ್ಲೂ ತನ್ನ ಅಧಿಪತ್ಯ ಸ್ಥಾಪನೆಯ ನೀರಿಕ್ಷೆಯಲ್ಲಿದೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಭವಿಷ್ಯ ವಾಹನಗಳಿಗಾಗಿ ವಿಶ್ವದ ಅತಿದೊಡ್ಡ ಸಮಗ್ರ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪಿಸಲು ಮುಂದಾಗಿರುವ ರಿಲಯನ್ಸ್ ಕಂಪನಿಯು ಬ್ಯಾಟರಿ ಉತ್ಪಾದನೆಗಾಗಿ ಸುಮಾರು ರೂ. 60 ಸಾವಿರ ಕೋಟಿ ಹೂಡಿಕೆಗೆ ಮುಂದಾಗಿದೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಭಾರತದಲ್ಲಿ ನಿರ್ಮಾಣವಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ವದೇಶಿ ನಿರ್ಮಿತ ಬ್ಯಾಟರಿ ಸಂಪನ್ಮೂಲ ಲಭ್ಯವಾಗುವಂತೆ ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಿರುವ ರಿಲಯನ್ಸ್ ಕಂಪನಿಯು ಹೊಸ ಘಟಕ ನಿರ್ಮಾಣಕ್ಕಾಗಿ 5 ಸಾವಿರ ಎಕರೆ ಭೂಮಿ ಖರೀದಿಗೆ ಚಾಲನೆ ನೀಡಿದೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಸ್ವದೇಶಿ ನಿರ್ಮಿತ ಬ್ಯಾಟರಿ ಸಂಪನ್ಮೂಲ ಬಳಕೆಯಿಂದಾಗಿ ಇವಿ ವಾಹನಗಳ ಬೆಲೆಯಲ್ಲಿ ಗಣನೀಯವಾಗಿ ತಗ್ಗಲಿದ್ದು, ಇಂಧನ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಸಹ ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯಕ್ಕಾಗಿ ರೂ. 75 ಸಾವಿರ ಹೂಡಿಕೆ ಮಾಡಲಿದೆ ರಿಲಯನ್ಸ್

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

Most Read Articles

Kannada
English summary
Reliance to invest rs 60,000 crore in renewable power project. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X