ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಜಿಯೋ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಯ ಫ್ಯೂಯಲ್ ಅಂಡ್ ಮೊಬಿಲಿಟಿ ಜಂಟಿ ಉದ್ಯಮಗಳು ಜೊತೆಗೂಡಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ಅನ್ನು ಆರಂಭಿಸಿವೆ. ಈ ಸಹಭಾಗಿತ್ವದ ಮೊದಲ Jio - BP (ಜಿಯೋ - ಬಿಪಿ) ಮೊಬಿಲಿಟಿ ಸ್ಟೇಷನ್ ಅನ್ನು ಮಹಾರಾಷ್ಟ್ರದ ನವಿ ಮುಂಬೈನ ನವ್ಡೆಯಲ್ಲಿ ಆರಂಭಿಸಲಾಗಿದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಈ ಸಹಭಾಗಿತ್ವವು ಗ್ರಾಹಕರಿಗೆ ಬಹು ಇಂಧನ ಆಯ್ಕೆಗಳನ್ನು ನೀಡುವ ವಿಶ್ವ ದರ್ಜೆಯ ಮೊಬಿಲಿಟಿ ಸ್ಟೇಷನ್‌ಗಳನ್ನು ತರುವ ಗುರಿಯನ್ನು ಹೊಂದಿದೆ. ಈಗ ಅಸ್ತಿತ್ವದಲ್ಲಿರುವ 1,400 ಕ್ಕೂ ಪೆಟ್ರೋಲ್ ಬಂಕ್ ಗಳನ್ನು ಜಿಯೋ - ಬಿಪಿ ಎಂದು ಮರುಬ್ರಾಂಡ್ ಮಾಡಲಾಗುವುದು. ಇದರ ಜೊತೆಗೆ ಈ ಸಹಭಾಗಿತ್ವವು ಮುಂಬರುವ ದಿನಗಳಲ್ಲಿ ಹೊಸ ಸರಣಿಯ ಗ್ರಾಹಕ ಮೌಲ್ಯಗಳನ್ನು ಪ್ರಸ್ತುತಪಡಿಸಲಿದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಜಿಯೋ - ಬಿಪಿ ಬ್ರ್ಯಾಂಡ್ ಅಡಿಯಲ್ಲಿ 2025 ರ ವೇಳೆಗೆ 5,500 ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಗಳನ್ನು ತೆರೆಯಲಾಗುವುದು. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಿದೆ ಎಂದು ಈ ಕಂಪನಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ. ಮುಂದಿನ 20 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಜಿಯೋ - ಬಿಪಿ ಮೊಬಿಲಿಟಿ ಸ್ಟೇಷನ್‌ಗಳನ್ನು ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇವು ಗ್ರಾಹಕರ ಅನುಕೂಲಕ್ಕಾಗಿ ಹಲವು ಸೇವೆಗಳನ್ನು ಒದಗಿಸಲಿವೆ. ಈ ಪೆಟ್ರೋಲ್ ಬಂಕ್ ಗಳು ಗ್ರಾಹಕರಿಗೆ ಇಂಧನ, ಇವಿ ಚಾರ್ಜಿಂಗ್, ಉಪಹಾರ, ಊಟ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಿವೆ. ಭವಿಷ್ಯದಲ್ಲಿ ಕಡಿಮೆ ಕಾರ್ಬನ್ ಡೈ ಆಕ್ಸೈಡ್ ಪರಿಹಾರಗಳನ್ನು ಪರಿಚಯಿಸುವ ಯೋಜನೆಯನ್ನು ಸಹ ಈ ಸಹಭಾಗಿತ್ವವು ಹೊಂದಿದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಸಾಮಾನ್ಯ ಇಂಧನದ ಬದಲಿಗೆ, ದೇಶಾದ್ಯಂತ ಜಿಯೋ - ಬಿಪಿ ಮೊಬಿಲಿಟಿ ಕೇಂದ್ರಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಯೋಜಕ ಇಂಧನವನ್ನು ನೀಡುತ್ತವೆ. ಈ ಇಂಧನವು ಅಂತರ್ ರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಕ್ರಿಯ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನವು ಎಂಜಿನ್ ಅನ್ನು ಸ್ವಚ್ಛವಾಗಿಡಲು ನೆರವಾಗುತ್ತದೆ ಹಾಗೂ ಎಂಜಿನ್'ನ ಪ್ರಮುಖ ಭಾಗಗಳಲ್ಲಿ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಜಿಯೋ - ಬಿಪಿ ಸಹಭಾಗಿತ್ವವು ಮೊಬಿಲಿಟಿ ಕೇಂದ್ರಗಳು ಹಾಗೂ ಇತರ ಸ್ವತಂತ್ರ ಸ್ಥಳಗಳಲ್ಲಿ (ಮೊಬಿಲಿಟಿ ಪಾಯಿಂಟ್‌) ಇವಿ ಚಾರ್ಜಿಂಗ್ ಸ್ಟೇಷನ್‌ ಹಾಗೂ ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳ ನೆಟ್‌ವರ್ಕ್ ಅನ್ನು ಸಹ ಸ್ಥಾಪಿಸಲಿದೆ. ಈ ಜಂಟಿ ಸಹಭಾಗಿತ್ವವು ಭಾರತದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವ ಪ್ರಮುಖ ಕಂಪನಿಯಾಗುವ ಗುರಿಯನ್ನು ಹೊಂದಿದೆ. ಪೆಟ್ರೋಲ್ ಬಂಕ್ ನಲ್ಲಿ ವೈಲ್ಡ್ ಬೀನ್ ಕೆಫೆ ಮೂಲಕ ಗ್ರಾಹಕರಿಗೆ ಉಪಹಾರಗಳನ್ನು ನೀಡಲಾಗುತ್ತದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಈ ಬಂಕ್ ಗಳಲ್ಲಿ 24 ಗಂಟೆಗಳು ರಿಲಯನ್ಸ್ ರಿಟೇಲ್‌ನ ಸರಕುಗಳು, ದೈನಂದಿನ ಅಗತ್ಯತೆಗಳು, ತಿಂಡಿಗಳು ಹಾಗೂ ಮಿಠಾಯಿಗಳು ಲಭ್ಯವಿರಲಿವೆ. ಜಿಯೋ - ಬಿಪಿ ಸಹಭಾಗಿತ್ವವು Castrol ಕಂಪನಿಯ ನೆರವಿನೊಂದಿಗೆ ತನ್ನ ಮೊಬಿಲಿಟಿ ಕೇಂದ್ರಗಳಲ್ಲಿ ಎಕ್ಸ್‌ಪ್ರೆಸ್ ಆಯಿಲ್ ಚೇಂಜ್ ಔಟ್‌ಲೆಟ್‌ಗಳನ್ನು ನೀಡಲಿದೆ. ಈ ಔಟ್ ಲೆಟ್ ಗಳ ಮೂಲಕ ವೃತ್ತಿಪರವಾಗಿ ತರಬೇತಿ ಪಡೆದ ತಜ್ಞರು ವಾಹನಗಳ ಉಚಿತ ತಪಾಸಣೆ ನಡೆಸಿ, ಉಚಿತವಾಗಿ ಆಯಿಲ್ ಬದಲಿಸುತ್ತಾರೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಎಕ್ಸ್‌ಪ್ರೆಸ್ ಆಯಿಲ್ ಚೇಂಜ್ ಔಟ್‌ಲೆಟ್‌ಗಳಲ್ಲಿ ಕ್ಯಾಸ್ಟ್ರೋಲ್ ಲೂಬ್ರಿಕಂಟ್ ಖರೀದಿಸುವ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಯಾವುದೇ ವೆಚ್ಚವಿಲ್ಲದೆ ಎಂಜಿನ್ ಆಯಿಲ್ ಬದಲಾವಣೆ ಸೇವೆಯನ್ನು ಪಡೆಯಬಹುದು. ಈ ಹೊಸ ಮೌಲ್ಯದ ಪ್ರಸ್ತಾಪಗಳ ಹೊರತಾಗಿ, ಜಿಯೋ - ಬಿಪಿ ಸಹಭಾಗಿತ್ವವು ಎಂಡ್ ಟು ಎಂಡ್ ಆಟೊಮೇಷನ್ ಬೆಂಬಲಿತ ಗುಣಮಟ್ಟವನ್ನು ಖಾತ್ರಿಗೊಳಿಸುತ್ತದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಈ ಮೂಲಕ ಪ್ರತಿ ಗ್ರಾಹಕರು ಜಿಯೋ - ಬಿಪಿ ಮೊಬಿಲಿಟಿ ಕೇಂದ್ರಗಳಲ್ಲಿ ತಾವು ಖರ್ಚು ಮಾಡುವ ಪ್ರತಿ ರೂಪಾಯಿಗೆ ಪೂರ್ಣ ಮೌಲ್ಯವನ್ನು ಪಡೆಯುತ್ತಾರೆ. ಸಾಟಿಯಿಲ್ಲದ ಗ್ರಾಹಕರ ಅನುಭವವನ್ನು ರಚಿಸಲು, ಡೈನಾಮಿಕ್ ಬೆಲೆ, ತ್ವರಿತ ರಿಯಾಯಿತಿ, ಹ್ಯಾಪಿ ಅವರ್ ಯೋಜನೆ, ನೆಟ್‌ವರ್ಕ್‌ನಾದ್ಯಂತ ಹೊಂದಿಕೊಳ್ಳುವ ಏಕರೂಪದ ಡಿಜಿಟಲ್ ಪೇಮೆಂಟ್ ಗಳನ್ನು ಸಹ ಅಳವಡಿಸಲಾಗುವುದು.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ರಿಲಯನ್ಸ್ ಜಿಯೋ ಕಂಪನಿಯು ತನ್ನ ಕೈಗೆಟುಕುವ ದರದ ಇಂಟರ್ ನೆಟ್ ಸೇವೆಗೆ ಹೆಸರುವಾಸಿಯಾಗಿದೆ. ರಿಲಯನ್ಸ್ ಜಿಯೋ ಕಂಪನಿಯು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಬ್ಯಾಟರಿ ಸ್ಥಾವರವನ್ನು ನಿರ್ಮಿಸುವ ಯೋಜನೆಯ ಬಗ್ಗೆ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಇನ್ನೂ ಹಲವು ಹೊಸ ಚಟುವಟಿಕೆಗಳನ್ನು ಆರಂಭಿಸಿದೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಕಂಪನಿಯು ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಈ ಉದ್ದೇಶಕ್ಕಾಗಿ ರಿಲಯನ್ಸ್ ಜಿಯೋ ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ವರದಿಯಾಗಿತ್ತು. ಬ್ಲೂಸ್ಮಾರ್ಟ್ ಸಹ ಈ ಕಂಪನಿಗಳ ಜೊತೆಗೆ ಮೈತ್ರಿಕೂಟಕ್ಕೆ ಸೇರಿಕೊಂಡಿದೆ. ಈ ಮೂರು ಕಂಪನಿಗಳು ಒಟ್ಟಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿವೆ.

ದೇಶಾದ್ಯಂತ ತಲೆ ಎತ್ತಲಿವೆ ಜಿಯೋ - ಬಿಪಿ ಸಹಭಾಗಿತ್ವದ ಪೆಟ್ರೋಲ್ ಬಂಕ್'ಗಳು

ಈ ಕಂಪನಿಗಳು ಜಂಟಿಯಾಗಿ ತೆರೆಯಲಿರುವ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು ಇನ್ನು ಕೆಲವು ವರ್ಷಗಳಲ್ಲಿ ಬಳಕೆಗೆ ಬರಲಿವೆ ಎಂದು ವರದಿಯಾಗಿದೆ. ಈ ಕಂಪನಿಗಳು ಮೂಲ ಸೌಕರ್ಯ ಯೋಜನೆ, ಅಭಿವೃದ್ಧಿ ಹಾಗೂ ಕಾರ್ಯಾಚರಣೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆಗಳಿವೆ. ವರದಿಗಳ ಪ್ರಕಾರ ಈ ಸಹ ಭಾಗಿತ್ವವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಹಂತದ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Reliance jio bp starts new fuel pump in navi mumbai details
Story first published: Wednesday, October 27, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X