ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಕೈಗೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಉತ್ತೇಜಿಸಲು ವಿವಿಧ ವಾಹನ ಉತ್ಪಾದನಾ ಕಂಪನಿಗಳು ಕೂಡಾ ಹೊಸ ಗುಜುರಿ ನೀತಿ ಅಳವಡಿಸಿಕೊಳ್ಳುವ ಗ್ರಾಹಕರನ್ನು ಸೆಳೆಯುತ್ತಿವೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರವು ಸ್ವಯಂ ಪ್ರೇರಿತ ಸ್ಕ್ರ್ಯಾಪೇಜ್ ನೀತಿಯನ್ನು ಜಾರಿಗೆ ತರುವ ಮಹತ್ವದ ನಿರ್ಣಯ ಪ್ರಕಟಿಸಿದ್ದು, 20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿವೆ. ಹೊಸ ನೀತಿಯಿಂದಾಗಿ ಕೇವಲ ಆಟೋ ಉದ್ಯಮಕ್ಕೆ ಮಾತ್ರವಲ್ಲ ಮಾಲಿನ್ಯ ಮತ್ತು ತೈಲ ಆಮದು ತಗ್ಗಿಸಲು ಪರಿಣಾಮಕಾರಿಯಾದ ನೀತಿಯಾಗಿದೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಅವಧಿ ಮೀರಿದ ಹಳೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಿದ್ದಲ್ಲಿ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯ ಹೊಂದಿರುವ ಹೊಸ ವಾಹನಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದ್ದು, ಸರ್ಕಾರದ ಹೊಸ ಯೋಜನೆ ಅಡಿ ವಿವಿಧ ಆಟೋ ಕಂಪನಿಗಳು ಕೂಡಾ ಅಧಿಕೃತ ಸ್ಕ್ರ್ಯಾಪಿಂಗ್ ಕಂಪನಿಗಳ ಜೊತೆಗೂಡಿ ವಿವಿಧ ಅಭಿಯಾನಗಳನ್ನು ಸಿದ್ದಪಡಿಸುತ್ತಿವೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿಯು ಕೂಡಾ ಮಹೀಂದ್ರಾ ಸೆರೊ ಸ್ಕ್ರ್ಯಾಪಿಂಗ್ ಕಂಪನಿ ಜೊತೆಗೂಡಿ ಹಳೆಯ ವಾಹನ ಮಾಲೀಕರಿಗೆ ವಿವಿಧ ಆಫರ್‌ಗಳನ್ನು ಘೋಷಿಸಿದ್ದು, ಹಳೆಯ ವಾಹನವನ್ನು ಗುಜುರಿಗೆ ಸೇರಿಸಿ ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಆಫರ್ ನೀಡುತ್ತಿದೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಸ್ಕ್ರ್ಯಾಪಿಂಗ್ ನೀತಿಯಡಿಯಲ್ಲಿ ಬರುವ ಅಧಿಕೃತ ಪ್ರಕ್ರಿಯೆಗಳ ಮೂಲಕವೇ ಹಳೆಯ ವಾಹನದ ಸ್ಥಿತಿಗತಿಯ ಆಧಾರದ ಮೇಲೆ ಬೆಲೆ ನಿಗದಿಪಡಿಸುವುದು, ಸ್ಕ್ರ್ಯಾಪಿಂಗ್ ಸರ್ಟಿಫಿಕೇಟ್ ವಿತರಣೆ ಪ್ರಕ್ರಿಯೆಗಳನ್ನು ಪೂರ್ಣ ಪ್ರಮಾಣದಲ್ಲಿ ರೆನಾಲ್ಟ್ ಕಂಪನಿಯೇ ಕೈಗೊಳ್ಳಲಿದ್ದು, ಸರ್ಟಿಫಿಕೇಟ್ ವಿತರಣೆ ನಂತರ ಗ್ರಾಹಕರು ರೆನಾಲ್ಟ್ ಕಂಪನಿಯ ನಿರ್ಮಾಣದ ಹೊಸ ವಾಹನಗಳನ್ನು ಖರೀದಿಗೆ ಬಯಸಿದರೆ ಅಂತಹ ಗ್ರಾಹಕರಿಗೆ ಕಂಪನಿಯು ವಿವಿಧ ಆಫರ್‌ಗಳ ಮೂಲಕ ಹೊಸ ವಾಹನ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಗರಿಷ್ಠ ಸಾಲಸೌಲಭ್ಯಗಳನ್ನು ಒದಗಿಸಲಿದೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಹೊಸ ಸ್ಕ್ರ್ಯಾಪಿಂಗ್ ನೀತಿ ಅಡಿಯಲ್ಲಿ ಹಳೆಯ ವಾಹನಗಳ ಮಾಲೀಕರಿಗೆ ಕೇಂದ್ರ ಸರ್ಕಾರಿದಿಂದ ಸಿಗುವ ಸಬ್ಸಡಿ ಮತ್ತು ಇತರೆ ಲಾಭಗಳನ್ನು ಹೊರತು ರೆನಾಲ್ಟ್ ಕಂಪನಿಯು ತನ್ನದೆ ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ನಲ್ಲಿ ಹಳೆಯ ವಾಹನಗಳನ್ನು ನಾಶಪಡಿಸುವ ಪ್ರಕ್ರಿಯೆ ಮತ್ತು ಹೊಸ ವಾಹನ ಖರೀದಿಗೆ ಹೆಚ್ಚಿನ ಮಟ್ಟದ ಕೊಡುಗೆಗಳನ್ನು ನೀಡಲಿದೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಸ್ಕ್ರ್ಯಾಪಿಂಗ್ ಸೆಂಟರ್‌ಗಳಲ್ಲಿ ಹಳೆಯ ವಾಹನಗಳನ್ನು ಗುಜುರಿಗೆ ಸೇರಿಸುವ ಮತ್ತು ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಶೇ. 7.99 ಬಡ್ಡಿದರದಲ್ಲಿ ಗರಿಷ್ಠ ಸಾಲ ಸೌಲಭ್ಯ ನೀಡುವುದಾಗಿ ಹೇಳಿಕೊಂಡಿದ್ದು, ಹಳೆಯ ವಾಹನಗಳಿಂದಲೂ ಬರುವ ಪರಿಹಾರ ಮೊತ್ತವನ್ನು ಸರಳ ವಿಧಾನಗಳ ಮೂಲಕ ರೆನಾಲ್ಟ್ ಕಂಪನಿಯೇ ತನ್ನ ಗ್ರಾಹಕರಿಗೆ ಸೇವೆಗಳನ್ನು ಪೂರೈಸಲಿದೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಇನ್ನು ಹಳೆಯ ವಾಹನವನ್ನು ಸ್ವಯಂ ಪ್ರೇರಿತವಾಗಿ ಗುಜುರಿಗೆ ಹಾಕಿದ್ದಲ್ಲಿ ಹೊಸ ವಾಹನ ಖರೀದಿಗೆ ಶೇ.5 ರಷ್ಟು ವಿನಾಯ್ತಿಯ ಜೊತೆಗೆ ಹೊಸ ವಾಹನದ ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ವಿನಾಯ್ತಿ ನೀಡಲು ನಿರ್ಧರಿಸಿದ್ದು, 2022ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ನೀತಿಗೆ ಪೂರಕವಾಗಿ ಆಟೋ ಉತ್ಪಾದನಾ ಕಂಪನಿಗಳು ಈಗಾಗಲೇ ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ಗಳೊಂದಿಗೆ ಕಾರ್ಯನಿರ್ವಹಿಸಲು ಸಿದ್ದಗೊಂಡಿವೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಕೇಂದ್ರ ಸರ್ಕಾರವು 20 ವರ್ಷ ಮೇಲ್ಪಟ್ಟ ವ್ಯಯಕ್ತಿಯ ಬಳಕೆಯ ವಾಹನಗಳಿಗೆ ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಕಡ್ಡಾಯ ಸ್ಕ್ರ್ಯಾಪಿಂಗ್ ನೀತಿ ಅಡಿ ತರಲಾಗುತ್ತಿದ್ದರೆ 15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಹಸಿರು ತೆರಿಗೆ ನೀತಿ ಅಡಿಯಲ್ಲಿ ತರಲಾಗುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ವಾಹನ ಬಳಕೆದಾರರು ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳಿಗೆ ದುಬಾರಿ ಬೆಲೆ ಹಸಿರು ತೆರಿಗೆ ವಿಧಿಸಲಿದ್ದು, ಮರುನೋಂದಣಿ ಮತ್ತು ಎಫ್‌ಸಿ ನವೀಕರಿಸುವ ಸಂದರ್ಭದಲ್ಲಿ ಈಗಿರುವ ಮೊತ್ತಕ್ಕಿಂತಲೂ ದುಪ್ಪಟ್ಟು ಮೊತ್ತ ಹೆಚ್ಚಿಸಲು ನಿರ್ಧರಿಲಾಗುತ್ತಿದೆ.

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಕೇಂದ್ರ ಸರ್ಕಾರವು ಹೊಸ ಸ್ಕ್ರ್ಯಾಪಿಂಗ್ ನೀತಿ ಮತ್ತು ಹಸಿರು ತೆರಿಗೆ ನೀತಿಯನ್ನು ಪ್ರತ್ಯೇಕ ಪ್ರಕಟಿಸಲಿದ್ದು, ಅವಧಿ ಮೀರುವ ಮುನ್ನವೇ 15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಗುಜುರಿಗೆ ಸೇರಿಸುವ ಗ್ರಾಹಕರಿಗೆ ಹೊಸ ವಾಹನ ಖರೀದಿಸಲು ಹೆಚ್ಚಿನ ಮಟ್ಟದ ಸಬ್ಸಡಿ ನೀಡಲು ಸಾಧ್ಯತೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಗುಜುರಿ ನೀತಿ ಅಳವಡಿಸಿಕೊಳ್ಳುವ ಹಳೆಯ ವಾಹನ ಮಾಲೀಕರಿಗೆ ಆಫರ್ ಘೋಷಿಸಿದ ರೆನಾಲ್ಟ್

ಹೊಸ ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಯ ಪ್ರಕ್ರಿಯೆ ಹೆಚ್ಚಳವಾಗುವುದರಿಂದ ಹೊಸ ವಾಹನಗಳ ಬೆಲೆ ಕೂಡಾ ಕಡಿತವಾಗಲಿದ್ದು, ಸಾರಿಗೆ ಇಲಾಖೆಯ ಸಚಿವರ ಮಾಹಿತಿಯೆಂತೆ ಹೊಸ ವಾಹನಗಳ ಉತ್ಪಾದನಾ ವೆಚ್ಚವು ಪ್ರಸ್ತುತ ಮಾರುಕಟ್ಟೆಗಿಂತಲೂ ಶೇ. 20ರಿಂದ ಶೇ.30 ರಷ್ಟು ಇಳಿಕೆಯಾಗುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
Renault India Launched RELIVE Program In Partnership With Mahindra Cero Recycling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X