ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಫ್ರೆಂಚ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಹೊಸ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ರೆನಾಲ್ಟ್ ಕ್ಯಾಪ್ಚರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರು ಐಕಾನಿಕ್, ಎಸ್ ಎಡಿಷನ್ ಮತ್ತು ಆರ್.ಎಸ್. ಲೈನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಕ್ಯಾಪ್ಚರ್ ಕಾರು ಇ-ಟೆಕ್ ಹೈಬ್ರಿಡ್ ಕ್ಲಿಯೊ ಇ-ಟೆಕ್ ಹೈಬ್ರಿಡ್‌ ತಂತ್ರಜ್ಞಾನವನ್ನು ಹೊಂದಿದೆ. ಇದು 1.6-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 1.2 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲಾಗಿದೆ.

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಇದು ಒಟ್ಟು 145 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಮತ್ತು ಮಲ್ಟಿ-ಮೋಡ್ ಡಾಗ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಹೊಸ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರು 10.6 ಸೆಕೆಂಡ್‌ಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು 170 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಸುಮಾರು 24 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಈ ಹೊಸ ಇ-ಟೆಕ್ ಹೈಬ್ರಿಡ್ ಕಾರು ಸಿಎಮ್ಎಫ್-ಬಿ ಮಾಡ್ಯುಲರ್ ಫ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಆಲ್ಪೈನ್ ತಂಡದೊಂದಿಗಿನ ತಮ್ಮ ಫಾರ್ಮುಲಾ1 ಪರಿಣತಿಯಿಂದ ಇ-ಟೆಕ್ ಪವರ್‌ಟ್ರೇನ್ ತಯಾರಿಸಲಾಗಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಇದು ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಪ್ಯೂರ್ ಡ್ರೈವ್ ಮೋಡ್‌ನಲ್ಲಿ ಕ್ಯಾಪ್ಚರ್ ಆಲ್-ಎಲೆಕ್ಟ್ರಿಕ್ ಆಗಿ ಹೋಗುತ್ತದೆ ಮತ್ತು ಅದು ಮೊದಲು ಆನ್ ಮಾಡಿದಾಗ ಡೀಫಾಲ್ಟ್ ಮೋಡ್ ಆಗಿದೆ. ಮೈಸೆನ್ಸ್ ಡ್ರೈವ್ ಮೋಡ್ ಚಾಲಕನ ಇನ್ಪುಟ್ ಮತ್ತು ಚಾಲನಾ ಸ್ಥಿತಿಯನ್ನು ಅವಲಂಬಿಸಿ ಆಟೋಮ್ಯಾಟಿಕ್ ಆಗಿ ಹೈಬ್ರಿಡ್ ಪವರ್‌ಟ್ರೇನ್‌ಗೆ ಹೊಂದಿಕೊಳ್ಳುತ್ತದೆ.

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಇದು ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸುವ ಸ್ಪೋರ್ಟ್ ಮೋಡ್ ಅನ್ನು ಸಹ ಹೊಂದಿದೆ. ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಪ್ರಯೋಜನಗಳ ಜೊತೆ ಯುರೋ ಎನ್‌ಸಿಎಪಿ ಸುರಕ್ಷತಾ ರೇಟಿಂಗ್‌ನಲ್ಲಿ 5-ಸ್ಟಾರ್ ಅನ್ನು ಪಡೆದುಕೊಂಡಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಇನ್ನು ರೆನಾಲ್ಟ್ ಕಂಪನಿಯು ಭಾರತದಲ್ಲಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್

ಹೊಸ ಕ್ಯಾಪ್ಚರ್ ಇ-ಟೆಕ್ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿದೆ. ಈ ಕಾರಿನ ಬೆಲೆಯು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಭಾರತೀಯ ಕರೆನ್ಸಿ ಪ್ರಕಾರ ಅಂದಾಜು ರೂ.21.78 ಲಕ್ಷಗಳಾಗಿದೆ. ಇನ್ನು ಈ ರೆನಾಲ್ಟ್ ಕ್ಯಾಪ್ಟೂರ್ ಇ-ಟೆಕ್ ಹೈಬ್ರಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
Renault Captur E-Tech hybrid Revealed. Read In Kannada.
Story first published: Friday, June 4, 2021, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X