ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ರೆನಾಲ್ಟ್ ಕಂಪನಿಯು ಟ್ರೈಬರ್ ಕಾರು ಮಾದರಿಯ 2021ರ ಆವೃತ್ತಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಕಂಪನಿಯು ಇದೀಗ ಮತ್ತಷ್ಟು ಫೀಚರ್ಸ್‌ಗಳನ್ನು ಉನ್ನತೀಕರಿಸಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಬಜೆಟ್ ಬೆಲೆಯ ಎಂಪಿವಿ ಕಾರು ಮಾದರಿಯಲ್ಲೇ ವಿಶೇಷ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ರೆನಾಲ್ಟ್ ಟ್ರೈಬರ್ ಮಾದರಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.65 ಲಕ್ಷ ಬೆಲೆ ಪಡೆದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ 2021ರ ಮಾದರಿಯು ಗ್ರಾಹಕರ ಕೈಸೇರುತ್ತಿದೆ.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‍ಎಕ್ಸ್‌ಟಿ, ಆರ್‌ಎಕ್ಸ್‌ಜೆಡ್ ಆವೃತ್ತಿಗಳನ್ನು ಹೊಂದಿರುವ ಹೊಸ ಕಾರುಗಳಲ್ಲಿ ಬೆಸ್ ವೆರಿಯೆಂಟ್ ಹೊರತುಪಡಿಸಿ ಇನ್ನುಳಿದ ಮಾದರಿಳು ಮ್ಯಾನುವಲ್ ಮತ್ತು ಸಿವಿಟ್ ಗೇರ್‌ಬಾಕ್ಸ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಹೊಸ ಕಾರಿನ ಹೊರಭಾಗದಲ್ಲಿ ರಿಯರ್ ವ್ಯೂ ಮಿರರ್ ಒಳಗೊಂಡ ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಬ್ಲ್ಯಾಕ್ ಔಟ್ ಥೀಮ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಲಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಕಾರಿನ ಒಳಭಾಗದಲ್ಲಿ ಈ ಬಾರಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್ ಜೊತೆಗೆ ಮೌಂಟೆಡ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗಿದ್ದು, ಟ್ರೈಬರ್ ಮಾದರಿಯಲ್ಲಿ ಹೊಸದಾಗಿ ನೀಡಲಾಗಿರುವ ಮೆಟಲ್ ಮಸ್ಟರ್ಟಡ್, ಎಲೆಕ್ಟ್ರಿಕ್ ಬ್ಲ್ಯೂ, ಮೂನ್‍ಲೈಟ್ ಸಿಲ್ವರ್, ಐಸ್ ಕೂಲ್ ವೈಟ್ ಮತ್ತು ಕೆಡರ್ ಬ್ರೌನ್ ಡ್ಯುಯಲ್ ಕಲರ್ ಆಯ್ಕೆಯೊಂದಿಗೆ ಆಕರ್ಷಕ ಲುಕ್ ಪಡೆದುಕೊಂಡಿದೆ.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಹೊಸ ಆವೃತ್ತಿಯ ಮೂಲಕ ರೆನಾಲ್ಟ್ ಕಂಪನಿಯು ದಟ್ಸನ್ ಗೊ ಪ್ಲಸ್, ಹ್ಯುಂಡೈ ಗ್ರಾಂಡ್ ಐ10, ಫೋರ್ಡ್ ಫಿಗೋ, ಮಾರುತಿ ವ್ಯಾಗನ್ಆರ್ ಮತ್ತು ಎರ್ಟಿಗಾ ಎಂಟ್ರಿ ಲೆವಲ್ ಕಾರು ಮಾದರಿಗೂ ಪೈಪೋಟಿ ನೀಡಲಿದ್ದು, ಟರ್ಬೊ ಆವೃತ್ತಿಯು ಕೂಡಾ ನೀರಿಕ್ಷೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಹೊಸದಾಗಿ ಟ್ರೈಬರ್ ಮಾದರಿಯಲ್ಲಿ ಜೋಡಣೆಗೆ ನಿರ್ಧರಿಸಲಾಗಿರುವ ಟರ್ಬೊ ಪೆಟ್ರೋಲ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಟ್ರೈಬರ್ ಮಾದರಿಯಲ್ಲಿ ಟರ್ಬೊ ಮಾದರಿಗೂ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದರೂ ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳಿಗಾಗಿ ಹೊಸ ಆವೃತ್ತಿಯ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗುತ್ತಿದ್ದು, 2022ರ ಆವೃತ್ತಿಯಲ್ಲಿ ಹೊಸ ಮಾದರಿಯ ಬಿಡುಗಡೆ ಖಚಿತವಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ 2021ರ ರೆನಾಲ್ಟ್ ಟ್ರೈಬರ್

ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎಬಿಎಸ್ ಜೊತೆಗೆ ಇಬಿಡಿ, 8-ಇಂಚಿನ ಡಿಸ್‌ಪ್ಲೇ ಹೊಂದಿರುವ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆರಂಭಿಕ ಮಾದರಿಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 4 ಏರ್‌ಬ್ಯಾಗ್ ನೀಡಲಾಗಿದೆ.

Most Read Articles

Kannada
English summary
Renault Launched Updated 2021 Triber MPV In India. Read in Kannada.
Story first published: Monday, April 26, 2021, 23:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X