Just In
- 4 min ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
- 1 hr ago ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ: ಸ್ವಾತಂತ್ರ್ಯ ದಿನದಂದು 5-ಡೋರ್ ಅವತಾರದಲ್ಲಿ ಲಗ್ಗೆ
- 1 hr ago Kia EV9: 2024ರ ವಿಶ್ವ ಕಾರು ಪ್ರಶಸ್ತಿಯಲ್ಲಿ ಡಬಲ್ ಗೆಲುವು ಸಾಧಿಸಿದ ಕಿಯಾ ಇವಿ9
- 2 hrs ago Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
Don't Miss!
- News Surya Grahan 2024: 54 ವರ್ಷಗಳ ನಂತರ ಸಂಪೂರ್ಣ ಸೂರ್ಯಗ್ರಹಣ: ಈ 3 ರಾಶಿಯವರ ಜೀವನ ಸೂರ್ಯನಂತೆ ಹೊಳೆಯುತ್ತೆ....
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Movies ಲೋಕಸಭೆ ಚುನಾವಣೆ: ಬಿಜೆಪಿ 7ನೇ ಪಟ್ಟಿಯಲ್ಲಿ ದರ್ಶನ್ ಜೊತೆ ನಟಿಸಿದ್ದ ನಟಿಗೂ ಸಿಕ್ತು ಟಿಕೆಟ್
- Sports IPL 2024: 14 ವರ್ಷಗಳ ಹಿಂದಿನ ಬೃಹತ್ ಐಪಿಎಲ್ ದಾಖಲೆಯನ್ನು ಮುರಿದ SRH vs MI ಪಂದ್ಯ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
ರೆನಾಲ್ಟ್ ಇಂಡಿಯಾ ಕಂಪನಿಯು ಮಿನಿ ಎಂಪಿವಿ ಕಾರು ಮಾದರಿಯಾದ ಟ್ರೈಬರ್ ಮಾರಾಟದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಯ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ನೆಲೆ ಕಂಡುಕೊಂಡಿದೆ.
ಹೊಸ ಟ್ರೈಬರ್ ಕಾರು ಮಾದರಿಯು ಭಾರತದಲ್ಲಿ 2019ರ ಅಗಸ್ಟ್ನಲ್ಲಿ ಬಿಡುಗಡೆಗೊಂಡ ನಂತರ ಇದುವರೆಗೆ ಸುಮಾರು 75 ಸಾವಿರ ಯುನಿಟ್ ಮಾರಾಟಗೊಂಡಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 3,500 ಯನಿಟ್ನಿಂದ 4 ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದೆ. ಗ್ರಾಮೀಣ ಭಾಗದ ಗ್ರಾಹಕರನ್ನು ಗುರಿಯಾಗಿಸಿ ಟೈರ್ 2, ಟೈರ್ 3 ನಗರಗಳಲ್ಲಿ ತೆರೆಯಲಾದ ಹೊಸ ಕಾರು ಮಾರಾಟ ಸೌಲಭ್ಯವು ಉತ್ತಮ ಬೇಡಿಕೆ ತಂದುಕೊಡುತ್ತಿದ್ದು, ಶೇ. 37ರಷ್ಟು ಗ್ರಾಮೀಣ ಭಾಗದ ಗ್ರಾಹಕರೆ ಟ್ರೈಬರ್ ಕಾರಿನ ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ.
ಟ್ರೈಬರ್ ಕಾರು ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಪಡೆದುಕೊಂಡ ನಂತರ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಹೊಸ ಕಾರು 2021ರ ಮಾದರಿಯೊಂದಿಗೆ ಮಾರಾಟಗೊಳ್ಳುತ್ತಿದೆ.
ಬಜೆಟ್ ಬೆಲೆಯ ಎಂಪಿವಿ ಕಾರು ಮಾದರಿಯಲ್ಲೇ ವಿಶೇಷ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ರೆನಾಲ್ಟ್ ಟ್ರೈಬರ್ ಕಾರು ಮಾದರಿಯ ಹೊಸ ಆವೃತ್ತಿಯೊಂದಿಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ 2021ರ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.65 ಲಕ್ಷ ಬೆಲೆ ಪಡೆದುಕೊಂಡಿದೆ. 2021ರ ಟ್ರೈಬರ್ ಕಾರು ಹಳೆಯ ಮಾದರಿಗಿಂತ ರೂ. 10 ಸಾವಿರದಿಂದ ರೂ. 15 ಸಾವಿರದಷ್ಟು ದುಬಾರಿಯಾಗಿದ್ದು, ಕೆಲವು ಫೀಚರ್ಸ್ ಜೊತೆಗೆ ಡ್ಯುಯಲ್ ಕಲರ್ ಹೊರತುಪಡಿಸಿ ಹೊಸ ಕಾರಿನ ಎಂಜಿನ್ ಆಯ್ಕೆಯಲ್ಲಿ ಈ ಹಿಂದಿನ ಮಾದರಿಯಂತೆ ಮುಂದುವರಿಸಲಾಗಿದೆ.
ಆರ್ಎಕ್ಸ್ಇ, ಆರ್ಎಕ್ಸ್ಎಲ್, ಆರ್ಎಕ್ಸ್ಟಿ, ಆರ್ಎಕ್ಸ್ಜೆಡ್ ಆವೃತ್ತಿಗಳನ್ನು ಹೊಂದಿರುವ ಹೊಸ ಕಾರು ಮೆಟಲ್ ಮಸ್ಟರ್ಟಡ್, ಎಲೆಕ್ಟ್ರಿಕ್ ಬ್ಲ್ಯೂ, ಮೂನ್ಲೈಟ್ ಸಿಲ್ವರ್, ಐಸ್ ಕೂಲ್ ವೈಟ್ ಮತ್ತು ಕೆಡರ್ ಬ್ರೌನ್ ಡ್ಯುಯಲ್ ಕಲರ್ ಆಯ್ಕೆಯೊಂದಿಗೆ ಆಕರ್ಷಕ ಲುಕ್ ಪಡೆದುಕೊಂಡಿದೆ.
ಹಾಗೆಯೇ ಹೊಸ ಕಾರಿನ ಹೊರಭಾಗದಲ್ಲಿ ರಿಯರ್ ವ್ಯೂ ಮಿರರ್ ಒಳಗೊಂಡ ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಬ್ಲ್ಯಾಕ್ ಔಟ್ ಥೀಮ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ ಈ ಬಾರಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್ ಜೊತೆಗೆ ಮೌಂಟೆಡ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗಿದೆ.
ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ 71-ಬಿಎಚ್ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
ಹೊಸ ಆವೃತ್ತಿಯ ಮೂಲಕ ರೆನಾಲ್ಟ್ ಕಂಪನಿಯು ದಟ್ಸನ್ ಗೊ ಪ್ಲಸ್, ಹ್ಯುಂಡೈ ಗ್ರಾಂಡ್ ಐ10, ಫೋರ್ಡ್ ಫಿಗೋ, ಮಾರುತಿ ವ್ಯಾಗನ್ಆರ್ ಮತ್ತು ಎರ್ಟಿಗಾ ಎಂಟ್ರಿ ಲೆವಲ್ ಕಾರು ಮಾದರಿಗೂ ಪೈಪೋಟಿ ನೀಡಲಿದ್ದು, ಟರ್ಬೊ ಆವೃತ್ತಿಯು ಕೂಡಾ ನೀರಿಕ್ಷೆಯಲ್ಲಿದೆ.
ಹೊಸದಾಗಿ ಟ್ರೈಬರ್ ಮಾದರಿಯಲ್ಲಿ ಜೋಡಣೆಗೆ ನಿರ್ಧರಿಸಲಾಗಿರುವ ಟರ್ಬೊ ಪೆಟ್ರೋಲ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 100 ಬಿಎಚ್ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!
ಟ್ರೈಬರ್ ಮಾದರಿಯಲ್ಲಿ ಟರ್ಬೊ ಮಾದರಿಗೂ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದರೂ ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳಿಗಾಗಿ ಹೊಸ ಆವೃತ್ತಿಯ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗುತ್ತಿದ್ದು, 2022ರ ಆವೃತ್ತಿಯಲ್ಲಿ ಹೊಸ ಮಾದರಿಯ ಬಿಡುಗಡೆ ಖಚಿತವಾಗಿದೆ.