ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ಫ್ರೆಂಚ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ರೆನಾಲ್ಟ್ ಮೆಗೇನ್ ಇ-ಟೆಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ.

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ಕಳೆದ ವರ್ಷ ಫ್ರೆಂಚ್ ಕಾರು ತಯಾರಕ ತನ್ನ 'ರೆನಾಲ್ಟ್ ಇವೇಸ್: ದಿ ಚಾಲೆಂಜ್ ಟೋವರ್ಡ್ಸ್ ಎಮಿಷನ್ಸ್' ಸಮಾರಂಭದಲ್ಲಿ ಬಹಿರಂಗಪಡಿಸಿದ ರೆನಾಲ್ಟ್ ಮೆಗೇನ್ ಇವಿಷನ್ ಕಾನ್ಸೆಪ್ಟ್ ಕಾರನ್ನು ಹೊಸ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಆಧರಿಸಿದೆ. ಇದು ಸಿ-ಸೆಗ್ಮೆಂಟ್ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಕಂಪನಿಯ ಮೊದಲ ಹೆಜ್ಜೆಯಾಗಿದ್ದು ಅದು ಎ-ಸೆಗ್ಮೆಂಟ್ ಟ್ವಿಂಗೊ ಇ-ಟೆಕ್ ಎಲೆಕ್ಟ್ರಿಕ್ ಮತ್ತು ಬಿ-ಸೆಗ್ಮೆಂಟ್ ಜೊಯಿ ಸರಣಿಯನ್ನು ಸೇರಲಿದೆ.

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ಎಲೆಕ್ಟ್ರಿಕ್ ಕಾರಿನ ಚಿತ್ರಗಳಲ್ಲಿ ಮೇಗನ್ ಇ-ಟೆಕ್ ಎಲೆಕ್ಟ್ರಿಕ್ ಸಾಂಪ್ರದಾಯಿಕ ಹ್ಯಾಚ್‌ಬ್ಯಾಕ್, ಕ್ರಾಸ್‌ಒವರ್ ಮತ್ತು ಬಹುಪಯೋಗಿ ವಾಹನಗಳ ನಡುವಿನ ಮಿಶ್ರಣವಾಗಿದೆ. ವರದಿಗಳ ಪ್ರಕಾರ, ಇವಿ ಮಾಡ್ಯುಲರ್ ಸಿಎಮ್ಎಫ್-ಇವಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ಇದು ಒಟ್ಟು 217-ಎಚ್‌ಪಿ ಎಲೆಕ್ಟ್ರಿಕ್ ಮೋಟರ್ ಮತ್ತು 60-ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ ಅನ್ನು ಒಳಗೊಂಡಿದ್. ಎರಡು ಚಾರ್ಜ್‌ಗಳ ನಡುವೆ 450 ಕಿ.ಮೀ ರೇಂಜ್ ಅನ್ನು ನೀಡುತ್ತದ ಎಂದು ವರದಿಗಳಾಗಿದೆ.

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ಡೌಯಿ ಕಾರ್ಖಾನೆಯಲ್ಲಿ ತಯಾರಾದ, ಎಲ್ಲಾ ಎಲ್ಲಾ ಪೂರ್ವ-ಉತ್ಪಾದನಾ ಎಲೆಕ್ಟ್ರಿಕ್ ಮಾದರಿಗಳಿಗೆ ಹೊಸ ವಿನ್ಯಾಸವನ್ನು ನೀಡಲಿದೆ. ಈ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಬ್ರ್ಯಾಂಡ್ ಲೋಗೊ ಮಾದರಿಯ ಆಕರ್ಷಕ ಗ್ರಾಫಿಕ್ ಲೈನ್ ಗಳನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ನೋಡುಗರನ್ನು ಬೆರಗುಗೊಳಿಸುವಂತಹ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಮುಂದಿನ ವರ್ಷದ ಆರಂಭದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಮೇಗನ್ ಇ-ಟೆಕ್ ಅನ್ನು ಬಿಡುಗಡೆ ಮಾಡುವುದಾಗಿ ರೆನಾಲ್ಟ್ ಘೋಷಿಸಿದೆ.

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

2025ರ ವೇಳೆಗೆ ಕಂಪನಿಯು ಬಿಡುಗಡೆ ಮಾಡಲು ಉದ್ದೇಶಿಸಿರುವ 24 ಹೊಸ ಮಾದರಿಗಳಲ್ಲಿ ಮೇಗನ್ ಇ-ಟೆಕ್ ಮೊದಲ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಲಿದೆ ಎಂದು ಫ್ರೆಂಚ್ ಆಟೋ ದೈತ್ಯ ರೆನಾಲ್ಟ್ ಹೇಳಿದೆ. ಇದು ಹೊಸ ಸಿಎಮ್ಎಫ್-ಇವಿ ಪ್ಲಾಟ್‌ಫಾರ್ಮ್ ಆಧಾರಿತ ಮೊದಲ ವಾಹನವಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ರೆನಾಲ್ಟ್ ತನ್ನ ಹೊಸ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಇತ್ತೀಚ್ಗ್ ಪರಿಚಯಿಸಿತು. ರೆನಾಲ್ಟ್ ಕ್ಯಾಪ್ಚರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹೊಸ ರೆನಾಲ್ಟ್ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರು ಐಕಾನಿಕ್, ಎಸ್ ಎಡಿಷನ್ ಮತ್ತು ಆರ್.ಎಸ್. ಲೈನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ

ನಿಸ್ಸಾನ್ ಅರಿಯಾವನ್ನು ಆಧರಿಸಿದ ಅದೇ ಪ್ಲಾಟ್‌ಫಾರ್ಮ್ ಅನ್ನು ರೆನಾಲ್ಟ್-ನಿಸ್ಸಾನ್-ಮಿತ್ಸುಬಿಷಿ ಅಲೈಯನ್ಸ್‌ನ ಎಲ್ಲಾ ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಈ ಹೊಸ ರೆನಾಲ್ಟ್ ಮೆಗೇನ್ ಇ-ಟೆಕ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
English summary
Renault Teases Megane E-Tech Electric vehicle. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X