ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ ಇತ್ತೀಚೆಗೆ ರೂರಲ್ ಫ್ಲೋಟ್ ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ತನ್ನ ಹೊಸ ರೆನಾಲ್ಟ್ ಕಿಗರ್ ಎಸ್‌ಯುವಿ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಈ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕಿಗರ್ ಕಾರಿನ ಮಾರಾಟವನ್ನು ಹೆಚ್ಚಿಸುವುದು ಕಂಪನಿಯ ಉದ್ದೇಶ. ರೆನಾಲ್ಟ್ ಇಂಡಿಯಾ ಮೂರು ತಿಂಗಳ ಅವಧಿಯಲ್ಲಿ ಈ ಅಭಿಯಾನವನ್ನು ಮೂರು ರಾಜ್ಯಗಳ 13 ರಾಜ್ಯಗಳ 233ಕ್ಕೂ ಹೆಚ್ಚು ನಗರಗಳಿಗೆ ಕೊಂಡೊಯ್ದಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ರೆನಾಲ್ಟ್ ಕಂಪನಿಯ ರೂರಲ್ ಫ್ಲೋಟ್, ಮೊಬೈಲ್ ಶೋರೂಂ ಆಗಿದ್ದು, ಹೊಸ ರೆನಾಲ್ಟ್ ಕಿಗರ್ ಎಸ್‌ಯುವಿಯನ್ನು ಹಲವು ನಗರಗಳಲ್ಲಿ ಪ್ರದರ್ಶಿಸಿದೆ. ರೆನಾಲ್ಟ್ ಕಂಪನಿಯು ಈ ಅಭಿಯಾನವನ್ನು ಹರಿಯಾಣ, ಬಿಹಾರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜಸ್ಥಾನಗಳಲ್ಲಿ ಹಮ್ಮಿಕೊಂಡಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಕಂಪನಿಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 2,700ಕ್ಕೂ ಹೆಚ್ಚು ಟೆಸ್ಟ್ ಡ್ರೈವ್‌ಗಳನ್ನು ನಡೆಸಲಾಗಿದ್ದು, ಸುಮಾರು 23,000 ಗ್ರಾಹಕರು ಆಸಕ್ತಿ ತೋರಿಸಿದ್ದಾರೆ. ರೆನಾಲ್ಟ್ ಕಂಪನಿಯು ದೇಶಾದ್ಯಂತ 500ಕ್ಕೂ ಹೆಚ್ಚು ಶೋರೂಂ ಹಾಗೂ ಸರ್ವೀಸ್ ಸೆಂಟರ್'ಗಳನ್ನು ಹೊಂದಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಇದರಲ್ಲಿ 200ಕ್ಕೂ ಹೆಚ್ಚು ಆನ್-ವ್ಹೀಲ್ ವರ್ಕ್ ಶಾಪ್'ಗಳಿವೆ. ರೆನಾಲ್ಟ್ ಕಂಪನಿಯ ಟ್ರೈಬರ್ ಎಂಪಿವಿ 4 ಸ್ಟಾರ್ ಸೆಫ್ಟಿ ರೇಟಿಂಗ್ ಪಡೆದಿದೆ. ಟ್ರೈಬರ್ ದೇಶದಲ್ಲಿರುವ ಸುರಕ್ಷಿತ ಎಂಪಿವಿಗಳಲ್ಲಿ ಒಂದಾಗಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್‌ನೊಂದಿಗೆ ತನ್ನ ಮೂಲವನ್ನು ಹಂಚಿಕೊಳ್ಳುತ್ತದೆ. ನಿಸ್ಸಾನ್ ಮ್ಯಾಗ್ನೈಟ್‌ ಸುರಕ್ಷತೆಗಾಗಿ 4 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಕಿಗರ್ ಸಹ 4 ಸ್ಟಾರ್ ರೇಟಿಂಗ್ ಪಡೆಯುವ ನಿರೀಕ್ಷೆಗಳಿವೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಈ ತಿಂಗಳ ಆರಂಭದಲ್ಲಿ ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಈ ಬೆಲೆ ಏರಿಕೆಯು ಹೊಸ ಕಿಗರ್ ಎಸ್‌ಯುವಿಯ ಮೇಲೂ ಪರಿಣಾಮ ಬೀರಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆ ರೂ.39,000ಗಳಷ್ಟು ಹೆಚ್ಚಾಗಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಈ ಎಸ್‌ಯುವಿಯ ವಿವಿಧ ಮಾದರಿಗಳ ಬೆಲೆಯನ್ನು ರೆನಾಲ್ಟ್ ಕಂಪನಿಯು ರೂ.9,000ಗಳಿಂದ ರೂ.39,000ಗಳವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ ಕಿಗರ್ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.5.64 ಲಕ್ಷಗಳಿಂದ ರೂ.10.08 ಲಕ್ಷಗಳಾಗಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ರೆನಾಲ್ಟ್ ಕಿಗರ್ ತನ್ನ ಸೆಗ್ ಮೆಂಟಿನಲ್ಲಿರುವ ಆಕರ್ಷಕ ವಿನ್ಯಾಸದ ಎಸ್‌ಯುವಿಯಾಗಿದೆ. ರೆನಾಲ್ಟ್ ಕಿಗರ್'ನಲ್ಲಿರುವ ವಿನ್ಯಾಸವು ಟ್ರೈಬರ್ ಹಾಗೂ ಕ್ವಿಡ್ ಕಾರುಗಳ ಸಂಯೋಜನೆಯಾಗಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಕಿಗರ್ ಎಸ್‌ಯುವಿಯಲ್ಲಿ ಎಲ್ಇಡಿ ಡಿಆರ್‌ಎಲ್, ಸಿ ಶೇಪಿನ ಎಲ್ಇಡಿ ಟೇಲ್ ಲೈಟ್, ಒಆರ್‌ವಿ‌ಎಂಗಳಲ್ಲಿ ಟರ್ನ್ ಇಂಡಿಕೇಟರ್, ಬ್ಲ್ಯಾಕ್ ಒಆರ್‌ವಿಎಂ, ರೇರ್ ಸ್ಪಾಯ್ಲರ್, ಸ್ಯಾಟಿನ್ ಸಿಲ್ವರ್ ರೂಫ್ ರೇಲ್'ಗಳನ್ನು ನೀಡಲಾಗಿದೆ.

ಮೊಬೈಲ್ ಶೋರೂಂ ಮೂಲಕ ಕಿಗರ್ ಎಸ್‌ಯುವಿ ಪ್ರದರ್ಶನಕ್ಕೆ ಮುಂದಾದ ರೆನಾಲ್ಟ್

ಕಿಗರ್ ಎಸ್‌ಯುವಿಯನ್ನು 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಹಾಗೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ 72 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

Most Read Articles

Kannada
English summary
Renault showcases Kiger SUV on mobile showroom in rural area through Rural Float Campaign. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X