ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ತನ್ನ ಮುಂದಿನ ಯೋಜನೆಯ ಭಾಗವಾಗಿ ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ 2025ರ ವೇಳೆಗೆ 14 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಈ 14 ಕಾರುಗಳಲ್ಲಿ 7 ಕಾರುಗಳು ಎಲೆಕ್ಟ್ರಿಕ್ ಆಗಿದ್ದರೆ, 7 ಕಾರುಗಳನ್ನು ಇಂಧನ ಅಥವಾ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಲಾಗುವುದೆಂದು ಕಂಪನಿ ತಿಳಿಸಿದೆ.

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಕಂಪನಿಯು ತನ್ನ ರೆನಾಲ್ಟ್ 5 ಇ-ಟೆಕ್ ಎಲೆಕ್ಟ್ರಿಕ್ ಮೂಲ ಮಾದರಿ ಕಾರ್ ಅನ್ನು ತನ್ನ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ. ರೆನಾಲ್ಟ್ 5 ಇ-ಟೆಕ್ ಮೂಲಮಾದರಿಯ ವಿನ್ಯಾಸವು ಕಂಪನಿಯ ಹಳೆಯ ಕಾರ್ ಆದ ರೆನಾಲ್ಟ್ ಆರ್ 5 ಅನ್ನು ಆಧರಿಸಿದೆ. ಈ ಮೂಲಮಾದರಿಯ ಕಾರಿನ ಸಹಾಯದಿಂದ ಕಂಪನಿಯು ಕ್ರಿಯಾಶೀಲತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಮಾದರಿಯೊಂದಿಗೆ ಕಂಪನಿಯು ತನ್ನ ಹಳೆಯ ಲೋಗೋವನ್ನು ಸಹ ಪ್ರದರ್ಶಿಸಿದೆ.

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಮೂಲ ಮಾದರಿಯ ಕಾರಿನಲ್ಲಿ ಪ್ರದರ್ಶಿಸಲಾಗಿರುವ ಈ ಲೋಗೋವನ್ನು 1972ರಲ್ಲಿ ಬಳಸಲಾಗಿತ್ತು. ಮೂಲಮಾದರಿಯ ಕಾರಿನಲ್ಲಿರುವ ಹೆಡ್‌ಲೈಟ್ ಅನ್ನು ಆರ್ 5 ಕಾರಿನಲ್ಲಿರುವಂತೆಯೇ ವಿನ್ಯಾಸಗೊಳಿಸಲಾಗಿದೆ. ಆದರೆ ಕಾರನ್ನು ಆಧುನಿಕವೆಂದು ತೋರಿಸಲು ಹಾರಿಜಾಂಟಲ್ ಲೈಟ್ ಸ್ಟ್ರಿಪ್ ನೀಡಲಾಗಿದೆ. ಈ ಕಾರಿನ ಮೂಲಕ ಕಂಪನಿಯು ಆರ್ 5 ಕಾರ್ ಅನ್ನು ಆಧುನಿಕ ನೋಟದಲ್ಲಿ ಪರಿಚಯಿಸಲು ಪ್ರಯತ್ನಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಕಂಪನಿಯು 2023ರಲ್ಲಿ ಆರ್ 5 ಎಲೆಕ್ಟ್ರಿಕ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮತ್ತೊಂದು ಎಲೆಕ್ಟ್ರಿಕ್ ಕಾರ್ ಆದ ಆರ್ 4 ಅನ್ನು 2025ರಲ್ಲಿ ಬಿಡುಗಡೆಗೊಳಿಸಲಾಗುವುದು. ಇದರ ಜೊತೆಗೆ ಮೂರು ಎಸ್‌ಯುವಿ ಮಾದರಿಗಳನ್ನು ಸಹ ಬಿಡುಗಡೆಗೊಳಿಸಲಾಗುವುದು. ಇವುಗಳನ್ನು 2023ರಿಂದ ಬಿಡುಗಡೆಗೊಳಿಸಲಾಗುವುದು.

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ತನ್ನ ಕಿಗರ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಜನವರಿ 28ರಂದು ಅನಾವರಣಗೊಳಿಸಲಿದೆ. ಕಿಗರ್ ಎಸ್‌ಯುವಿಯನ್ನು ಕಂಪನಿಯು ಸಿಎಂಎಫ್‌ಎ-ಪ್ಲಸ್ ಪ್ಲಾಟ್‌ಫಾರಂನಲ್ಲಿ ಉತ್ಪಾದಿಸಿದೆ. ಬಿಡುಗಡೆಯಾದ ನಂತರ ಈ ಕಾಂಪ್ಯಾಕ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಹಾಗೂ ಮಾರುತಿ ವಿಟಾರಾ ಬ್ರೆಝಾಗಳಿಗೆ ಪೈಪೋಟಿ ನೀಡಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಅಂತರರಾಷ್ಟ್ರೀಯ ಮಾದರಿಯ ಕಾರಿನ ವಿನ್ಯಾಸದ ಚಿತ್ರಗಳು ಬಹಿರಂಗಗೊಂಡಿವೆ. ಈ ಕಾರಿನ ವಿನ್ಯಾಸವು ಆಕ್ರಮಣಕಾರಿ ಹಾಗೂ ಆಕರ್ಷಕವಾಗಿದೆ. ಕ್ವಿಡ್ ಕಾರಿನಂತೆ ಈ ಕಾರಿನಲ್ಲಿ ಹೆಡ್ ಲ್ಯಾಂಪ್ ಕ್ಲಸ್ಟರ್ ಅನ್ನು ಬಂಪರ್'ಗಳ ಮೇಲೆ ಇರಿಸಲಾಗಿದ್ದು, ಫಾಗ್ ಲ್ಯಾಂಪ್'ಗಳನ್ನು ಅದರ ಕೆಳಗೆ ನೀಡಲಾಗಿದೆ.

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಡಿಸೆಂಬರ್ 2020ರ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ 2020ರ ಡಿಸೆಂಬರ್‌ನಲ್ಲಿ ರೆನಾಲ್ಟ್ ಇಂಡಿಯಾ 9,800 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2019ರ ಡಿಸೆಂಬರ್ ತಿಂಗಳಿಗಿಂತ 18.09%ನಷ್ಟು ಕಡಿಮೆಯಾಗಿದೆ. 2019ರ ಡಿಸೆಂಬರ್'ನಲ್ಲಿ ಕಂಪನಿಯು 11,964 ಯೂನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಭಾರತದಲ್ಲಿ ರೆನಾಲ್ಟ್ ಮಾರಾಟವು ಕಳೆದ ತಿಂಗಳು ಕುಸಿದಿದೆ. ಈ ಕಾರಣಕ್ಕೆ ಕಂಪನಿಯು ತನ್ನ ಮಾದರಿಗಳ ಮೇಲೆ ಜನವರಿ ತಿಂಗಳಿನಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಡಸ್ಟರ್, ಕ್ವಿಡ್, ಟ್ರೈಬರ್ ಸೇರಿದಂತೆ ರೆನಾಲ್ಟ್ ಕಂಪನಿಯ ಕಾರುಗಳ ಮೇಲೆ ರೂ.65,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ.

ಒಂದು ಡಜನ್'ಗೂ ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಕ್ವಿಡ್‌ ಮಾದರಿಯ ಮೇಲೆ ಜನವರಿ ತಿಂಗಳಿನಲ್ಲಿ ರೂ.50,000ಗಳ ರಿಯಾಯಿತಿ ನೀಡಿದರೆ, ಟ್ರೈಬರ್‌ ಮಾದರಿಯ ಮೇಲೆ ರೂ.60,000ಗಳ ರಿಯಾಯಿತಿ ನೀಡಲಾಗುತ್ತಿದೆ. 1.5 ಲೀಟರ್ ಪೆಟ್ರೋಲ್ ಆವೃತ್ತಿಯ ರೆನಾಲ್ಟ್ ಡಸ್ಟರ್ ಮೇಲೆ ರೂ.45,000 ಹಾಗೂ ಟರ್ಬೊ-ಪೆಟ್ರೋಲ್ ಮಾದರಿಯ ಮೇಲೆ ರೂ.65,000 ರಿಯಾಯಿತಿ ನೀಡಲಾಗುತ್ತಿದೆ.

Most Read Articles

Kannada
English summary
Renault to launch 14 new cars in coming days. Read in Kannada.
Story first published: Friday, January 15, 2021, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X