ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಹೊಸ ಕಾರುಗಳ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ರೆನಾಲ್ಟ್ ಟ್ರೈಬರ್ ಕಾರು ಎಂಪಿವಿ ಕಾರು ಮಾದರಿಯು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಅಂಕಗಳೊಂದಿಗೆ ಸುರಕ್ಷಿತ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಬಜೆಟ್ ಬೆಲೆಗಳಲ್ಲಿ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ರೆನಾಲ್ಟ್ ಕಂಪನಿಯ ಹೊಸ ಕಾರು ಉತ್ಪನ್ನಗಳು ಪ್ರಯಾಣಿಕರಿಗೆ ಉತ್ತಮ ಸುರಕ್ಷತೆ ಖಾತ್ರಿಪಡಿಸುತ್ತಿದ್ದು, ಬಜೆಟ್ ಬೆಲೆಯಲ್ಲಿಯೇ ಪ್ರಯಾಣಿಕರ ಸುರಕ್ಷತೆಗೆ ಅಗತ್ಯವಿರುವ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿರುವ ಟ್ರೈಬರ್ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಖರೀದಿಗೆ ಉತ್ತಮವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಭಾರತದಲ್ಲಿ ಸದ್ಯ ಉತ್ತಮ ಸುರಕ್ಷಾ ರೇಟಿಂಗ್ ಹೊಂದಿರುವ ವಾಹನಗಳ ಬೇಡಿಕೆಯಿದ್ದರೂ ಉತ್ಪಾದನಾ ಕಂಪನಿಗಳು ಅಗ್ಗದ ದರಗಳಲ್ಲಿ ಗ್ರಾಹಕರನ್ನ ಸೆಳೆಯುವ ಉದ್ದೇಶದಿಂದ ಗುಣಮಟ್ಟದ ಮಾನದಂಡಗಳನ್ನು ಗಾಳಿಗೆ ತೂರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ರೆನಾಲ್ಟ್ ಕಂಪನಿಯು ತನ್ನ ಹೊಸ ಕಾರು ಮಾದರಿಗಳಲ್ಲಿ ಬಜೆಟ್ ಬೆಲೆ ಮತ್ತು ಗುಣಮಟ್ಟದ ಎರಡು ವಿಭಾಗದಲ್ಲೂ ಸಮತೋಲನ ಕಾಯ್ದುಕೊಳ್ಳುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರುಗಳ ಸುರಕ್ಷಾ ವಿಚಾರದಲ್ಲಿ ಉತ್ತಮ ಏನಿಸಿದರೂ ಅತಿಯಾದ ಬೆಲೆ ಪರಿಣಾಮ ಮಧ್ಯಮ ವರ್ಗದ ಕಾರು ಖರೀದಿದಾರರಿಗೆ ಅದು ಕಷ್ಟ ಸಾಧ್ಯ. ಆದರೆ ಬೆಲೆ ಮತ್ತು ಸುರಕ್ಷೆ ಎರಡು ವಿಚಾರಗಳಲ್ಲೂ ಸಮತೋಲನದೊಂದಿಗೆ ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ದಿ ಪಡಿಸುವುದು ಸವಾಲಿನ ಕೆಲಸವಾಗಿದ್ದು, ರೆನಾಲ್ಟ್ ಟ್ರೈಬರ್ ಕಾರು ಕೂಡಾ ಈ ವಿಚಾರದಲ್ಲಿ ಉತ್ತಮ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಒಟ್ಟು ಐದು ಅಂಕಗಳಿಗೆ ನಾಲ್ಕು ಅಂಕ ಪಡೆದುಕೊಂಡಿರುವ ಟ್ರೈಬರ್ ಕಾರು ಮಾದರಿಯು ವಯಸ್ಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಿದ್ದಲ್ಲಿ ಮಕ್ಕಳ ಸುರಕ್ಷಾ ವಿಚಾರವಾಗಿ ಒಟ್ಟು ಐದು ಅಂಕಗಳಲ್ಲಿ ಮೂರು ಅಂಕಗಳನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲು ಕನಿಷ್ಠ ಮೂರು ಅಂಕಗಳನ್ನು ಪಡೆದುಕೊಳ್ಳಲೇಬೇಕಿದ್ದು, ಮೂರಕ್ಕಿಂತ ಕಡಿಮೆ ರೇಟಿಂಗ್ಸ್ ಬಂದಲ್ಲಿ ಅಂತಹ ಕಾರನ್ನು ಕಳಪೆ ಎಂದೇ ಕರೆಯಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಪೂರ್ಣ ಪ್ರಮಾಣದ ಅಂಕ ಪಡೆದುಕೊಂಡಲ್ಲಿ ಗರಿಷ್ಠ ಸುರಕ್ಷಿತ ಕಾರು ಮಾದರಿಯಾಗಿ ಮತ್ತು ನಾಲ್ಕು ಅಂಕಗಳನ್ನು ಪಡೆದುಕೊಂಡಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ರೆನಾಲ್ಟ್ ಟ್ರೈಬರ್ ಕಾರು ಕೂಡಾ ಇದೀಗ ಉತ್ತಮ ಮಾದರಿಯಾಗಿ ಹೊರಹೊಮ್ಮಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಭಾರತದಲ್ಲಿ ಸುರಕ್ಷಿತ ಕಾರುಗಳ ಅಭಿವೃದ್ದಿಗಾಗಿ #SAFERCARSFORINDIA ಅಭಿಯಾನ ಕೈಗೊಂಡಿರುವ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಹಲವಾರು ಜನಪ್ರಿಯ ಕಾರುಗಳ ಕಳಪೆ ಗುಣಮಟ್ಟವನ್ನು ಈಗಾಗಲೇ ಬಯಲು ಮಾಡಲಾಗಿದ್ದು, ಬಜೆಟ್ ಬೆಲೆಯಲ್ಲೂ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಹೊಂದಿರುವ ಟ್ರೈಬರ್ ಕಾರು ಅಪಘಾತಗಳ ಸಂದರ್ಭದಲ್ಲಿ ಮುಂಭಾಗದ ಪ್ರಯಾಣಿಕರಿಗೆ ಉತ್ತಮ ಸುರಕ್ಷತೆ ನೀಡಬಲ್ಲದು.

ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‍ಎಕ್ಸ್‌ಟಿ, ಆರ್‌ಎಕ್ಸ್‌ಜೆಡ್ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿರುವ ಟ್ರೈಬರ್ ಕಾರು ಮಾದರಿಯು ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.65 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ರೆನಾಲ್ಟ್ ಟ್ರೈಬರ್

ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Most Read Articles

Kannada
English summary
Renault Triber Gets 4-Star Safety Rating In Global NCAP Crash Tests. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X