ಕೇವಲ ರೂ. 1 ಪಾವತಿಸಿ ರಿವೋಸ್ ಬೋಲ್ಟ್ ಚಾರ್ಜಿಂಗ್ ಪಾಯಿಂಟ್ ಪಡೆಯಿರಿ..

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯವು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಇವಿ ಚಾರ್ಜಿಂಗ್ ಸೌಲಭ್ಯವನ್ನು ಸುಧಾರಿಸಲು ಬೆಂಗಳೂರು ಮೂಲದ ರಿವೋಸ್ ಕಂಪನಿಯು ಹೊಸ ಮಾದರಿಯ ಚಾರ್ಜಿಂಗ್ ಸೌಲಭ್ಯವನ್ನು ಪರಿಚಯಿಸಿದೆ.

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ ವಿನೂತನ ಮಾದರಿಯ ಬೋಲ್ಟ್ ಇವಿ ಚಾರ್ಜಿಂಗ್ ಪಾಯಿಂಟ್ ಸೌಲಭ್ಯವನ್ನು ಆರಂಭಿಸಲಾಗಿದ್ದು, ರಿವೋಸ್(REVOS)ಇಂಡಿಯಾ ಕಂಪನಿಯ ಅಭಿವೃದ್ದಿಪಡಿಸಿರುವ ಹೊಸ ಬೋಲ್ಟ್ ಇವಿ ಚಾರ್ಜರ್ ಸೌಲಭ್ಯವು ಭಾರತದ ಮೊದಲ ಮತ್ತು ಅತಿ ದೊಡ್ಡ ಪೀರ್-ಟು-ಪೀರ್ ಚಾರ್ಜಿಂಗ್ ನೆಟ್‌ವರ್ಕ್ ಸೌಲಭ್ಯವಾಗಿದೆ.

ಬೋಲ್ಟ್ ಇವಿ ಚಾರ್ಜರ್ ಸೌಲಭ್ಯವು ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರ ಚಾರ್ಜಿಂಗ್ ಸೌಲಭ್ಯಗಳಿಂತಲೂ ವಿಭಿನ್ನ ಪರಿಕಲ್ಪನೆಯೊಂದಿಗೆ ಆರಂಭಗೊಂಡಿದ್ದು, ರಿವೋಸ್ ಬೋಲ್ಟ್ ಇವಿ ಚಾರ್ಜಿಂಗ್ ಪಾಯಿಂಟ್ ಪಡೆದುಕೊಳ್ಳಲು ಅತಿ ಸುಲಭ ಪ್ರಕ್ರಿಯೆ ಒಳಗೊಂಡಿದೆ.

ಹೊಸ ಚಾರ್ಜಿಂಗ್ ಸೌಲಭ್ಯವನ್ನು ಜನಪ್ರಿಯಗೊಳಿಸಲು ಮುಂದಾಗಿರುವ ರಿವೋಸ್ ಕಂಪನಿಯು ಈ ವರ್ಷದ ಡಿಸೆಂಬರ್ ಒಳಗಾಗಿ ಬೋಲ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿಕೊಳ್ಳುವ ಬಳಕೆದಾರರಿಂದ ಕೇವಲ ರೂ. 1 ರೂಪಾಯಿ ಪಡೆದು ಹೊಸ ಚಾರ್ಜಿಂಗ್ ಸೌಲಭ್ಯವನ್ನು ಅಳವಡಿಸಲಿದೆ.

ಬೋಲ್ಟ್ ಚಾರ್ಜಿಂಗ್ ನಿಲ್ದಾಣವನ್ನು ಅಳವಡಿಸಿಕೊಳ್ಳಲು ಬಯಸುವ ಬಳಕೆದಾರರು ರಿವೋಸ್ ಆ್ಯಪ್ ಮೂಲಕ ಚಾರ್ಜಿಂಗ್ ಸೌಲಭ್ಯವನ್ನು ಸ್ವಂತಕ್ಕೆ ಅಥವಾ ಖಾಸಗಿ ವಾಹನ ಮಾಲೀಕರಿಗೂ ಚಾರ್ಜಿಂಗ್ ಸೌಲಭ್ಯ ಒದಗಿಸುವ ಮೂಲಕ ಆದಾಯ ಗಳಿಕೆಗೆ ಅವಕಾಶ ನೀಡುತ್ತದೆ.

Most Read Articles

Kannada
English summary
Revos bolt ev charging point installation detail video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X