ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಹಾಲಿವುಡ್ ನಟ ಡ್ವೇನ್ ಜಾನ್ಸನ್ ಅವರನ್ನು 'ದಿ ರಾಕ್' ಎಂದೂ ಕರೆಯುತ್ತಾರೆ. ಅವರು WWE ನಲ್ಲಿ ಕುಸ್ತಿಪಟು ಆಗಿದ್ದರು. ಅವರು ಈಗ ಹಾಲಿವುಡ್'ನಲ್ಲಿ ಜನಪ್ರಿಯರಾಗಿದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡ್ವೇನ್ ಜಾನ್ಸನ್ ತಮ್ಮ ಗ್ಯಾರೇಜ್‌ನಲ್ಲಿ ಹಲವು ಕಾರುಗಳನ್ನು ಹೊಂದಿದ್ದಾರೆ. ಇದರಲ್ಲಿ ಕೆಲವು ವಿಶಿಷ್ಟ ವಾಹನಗಳು ಸಹ ಸೇರಿವೆ ಎಂಬ ವಿಚಾರ ಅನೇಕ ಜನರಿಗೆ ತಿಳಿದಿದೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ವಿಶೇಷವೆಂದರೆ ಡ್ವೇನ್ ಜಾನ್ಸನ್ ತಮ್ಮ ಕಾರು ಸಂಗ್ರಹದಿಂದ ಕೆಲವರಿಗೆ ತಮ್ಮ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲೂ ಅವರ ಕುಟುಂಬಕ್ಕೆ ಹಾಗೂ ಅವರಿಗೆ ನಿಕಟವಾಗಿರುವವರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಾರಿ ಅವರು ತಮ್ಮ ಬಳಿಯಿದ್ದ ಆಸ್ಕರ್ ರೋಡ್ರಿಗಸ್‌ ಎಂಬುವವರಿಗೆ ತಮ್ಮ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಆಸ್ಕರ್ ರೋಡ್ರಿಗಸ್‌, ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಡ್ವೇನ್ ಜಾನ್ಸನ್ ತಮ್ಮ Instagram ಖಾತೆಯಲ್ಲಿ ಕೆಲವು ಚಿತ್ರಗಳನ್ನು ಶೇರ್ ಮಾಡಿದ್ದರು. ಇದರಲ್ಲಿ ಅವರು ರಾಷ್ಟ್ರಕ್ಕೆ ಆಸ್ಕರ್ ರೋಡ್ರಿಗಸ್‌ ಅವರು ನೀಡಿರುವ ಸೇವೆಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಅವರಿಗೆ ತಮ್ಮ ವೈಯಕ್ತಿಕ ಫೋರ್ಡ್ F-150 ಪಿಕ್-ಅಪ್ ಟ್ರಕ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಡ್ವೇನ್ ಅವರ ಹೊಸ ಚಿತ್ರ ದಿ ರೆಡ್ ನೋಟಿಸ್ ಸಿನಿಮಾದ ವಿಶೇಷ ಪ್ರದರ್ಶನದ ಸಂದರ್ಭದಲ್ಲಿ ಈ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಡ್ವೇನ್‌ರವರಿಂದ ಈ ಟ್ರಕ್ ಅನ್ನು ಸ್ವೀಕರಿಸಿದ ನಂತರ ಆಸ್ಕರ್ ರೋಡ್ರಿಗಸ್‌ ಭಾವುಕರಾದರು. ಫೋರ್ಡ್ ಕಂಪನಿಯ ಸಿಇಒ, ಜಿಮ್ ಫಾರ್ಲೆ ಕೂಡ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಶೇರ್ ಮಾಡಿದ್ದಾರೆ. ದಯೆ ಮುಖ್ಯವಾಗಿದೆ. ಉತ್ತಮ ಕೆಲಸ, DJ TheRock. ನಿಮ್ಮ ಸೇವೆಗೆ ಧನ್ಯವಾದಗಳು, ORodri240 ಇದು ಉತ್ತಮ ಟ್ರಕ್! # F150Raptor ಎಂದು ಅವರು ಪೋಸ್ಟ್ ಮಾಡಿದ್ದಾರೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಕಳೆದ 44 ವರ್ಷಗಳಲ್ಲಿ ಫೋರ್ಡ್ ಕಂಪನಿಯ F-150 ಅಮೇರಿಕಾದಲ್ಲಿ ಹೆಚ್ಚು ಮಾರಾಟವಾದ ಪಿಕ್ ಅಪ್ ಟ್ರಕ್ ಆಗಿದೆ ಎಂಬುದು ವಿಶೇಷ. ಫೋರ್ಡ್ ಕಂಪನಿಯು F-150 ಪಿಕ್ ಅಪ್ ಅನ್ನು - ರೆಗ್ಯುಲಾ ಪಿಕ್-ಅಪ್, ಸೂಪರ್‌ಕ್ರೂ ಹಾಗೂ ಸೂಪರ್‌ಕ್ಯಾಬ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. ಈ ಪಿಕ್ ಅಪ್ ಟ್ರಕ್ ಅನ್ನು ವಿವಿಧ ಗಾತ್ರಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಅಮೆರಿಕಾ ಮಾರುಕಟ್ಟೆಯಲ್ಲಿ Ford F-150 ಪಿಕ್ ಅಪ್ ಟ್ರಕ್'ನ ಆರಂಭಿಕ ಬೆಲೆ 29,290 ಡಾಲರ್'ಗಳಾಗಿದೆ. ಕಂಪನಿಯು ಈ ಪಿಕ್ ಅಪ್ ಟ್ರಕ್ ಅನ್ನು ಹಲವಾರು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ. ಇವುಗಳಲ್ಲಿ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಡೀಸೆಲ್ ಎಂಜಿನ್ ಹಾಗೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳು ಸೇರಿವೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಅಂದ ಹಾಗೆ ಡ್ವೇನ್'ರವರು ಈ ರೀತಿ ಉಡುಗೊರೆ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಇಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರು ಜನರ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಾರೆ. 2018ರಲ್ಲಿ ಡ್ವೇನ್ ತಮ್ಮ ತಾಯಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಮನೆಯೊಂದನ್ನು ನೀಡಿದ್ದರು. ರಾಕ್ ಎಸ್ಪೆರಾನ್ಜಾರವರಿಗೆ ಫೋರ್ಡ್ ಎಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಈ ಎಸ್‌ಯುವಿ ತನ್ನ ಸೇವೆಯ 10 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮದಲ್ಲಿರುವಾಗ ಉಡುಗೊರೆಯಾಗಿ ನೀಡಲಾಗಿತ್ತು. ಈ ಮಧ್ಯಮ ಗಾತ್ರದ ಎಸ್‌ಯುವಿಯಲ್ಲಿ 3.5 ಲೀಟರ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 285 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಡ್ವೇನ್ ತಮ್ಮ ಚಿಕ್ಕಪ್ಪನಿಗೆ ಫೋರ್ಡ್ F-150 ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಅವರ ಚಿಕ್ಕಪ್ಪ ಟೊಂಗಾ ಸಹ WWE ಕುಸ್ತಿಪಟು ಆಗಿದ್ದರು. ಅವರ ಚಿಕ್ಕಪ್ಪ ಡ್ವೇನ್ ರವರ ವೃತ್ತಿಜೀವನವನ್ನು ಆರಂಭಿಸಲು ನೆರವಾಗಿದ್ದರು. ಈ ಕಾರಣಕ್ಕೆ ಅವರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ಕ್ರಿಸ್ಮಸ್ ಉಡುಗೊರೆಯಾಗಿ ಫೋರ್ಡ್ F-150 ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಅಮೆರಿಕಾ ಮೂಲದ Ford Motor ಕಂಪನಿಯು ಸುಮಾರು 2 ಶತಕೋಟಿ ಡಾಲರ್‌ಗಳಷ್ಟು ನಷ್ಟವಾದ ಕಾರಣ ಹಾಗೂ ಮಾರಾಟವು ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತು. Ford Motor ಕಂಪನಿಯ ಈ ನಿರ್ಧಾರವು 4000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

ಭಾರತದಲ್ಲಿ ಮಾರಾಟವಾಗುವ ತನ್ನ ಜನಪ್ರಿಯ ಮಾದರಿಗಳಾದ Ford Figo, Ford Freestyle ಕಾರುಗಳ ಉತ್ಪಾದನೆಯನ್ನು ತ್ವರಿತವಾಗಿ ಕಡಿಮೆ ಮಾಡುವುದಾಗಿ ಕಂಪನಿಯ ಟಾಪ್ ಮ್ಯಾನೇಜ್ ಮೆಂಟ್ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಭಾರತದಲ್ಲಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ Ford Motor ಕಂಪನಿಯ ಭಾರತೀಯ ಘಟಕವು ಈ ನಿರ್ಧಾರವನ್ನು ತೆಗೆದು ಕೊಂಡಿದೆ ಎಂದು ಹೇಳಲಾಗಿದೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

Ford Motor ಕಂಪನಿಯು ಭಾರತದಲ್ಲಿ ಕಡಿಮೆ ಮಾರಾಟ ಪ್ರಮಾಣ, ರಫ್ತು ಹಾಗೂ ಹೊಸ ಉತ್ಪನ್ನಗಳ ಕೊರತೆಯಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. Ford Motor ಕಂಪನಿಯು 2017 ರಲ್ಲಿ ಭಾರತದಲ್ಲಿ ತನ್ನಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ General Motors ಕಂಪನಿಯ ಹಾದಿಯನ್ನು ಹಿಡಿದಿದೆ.

ನೌಕಪಡೆ ಅಧಿಕಾರಿಗೆ ದುಬಾರಿ ಬೆಲೆಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ರಾಕ್ ಖ್ಯಾತಿಯ ನಟ

Ford ಕಂಪನಿಯು ಭಾರತದಲ್ಲಿ ತನ್ನ ಉತ್ಪನ್ನಗಳ ಸೇವೆಯನ್ನು ಮುಂದುವರಿಸಲಿದೆ. Ford Motor ಕಂಪನಿಯು ಭಾರತದಲ್ಲಿ ತನ್ನ Ford Mustang ಹಾಗೂ Ford Endeavour ಕಾರುಗಳ ಮಾರಾಟವನ್ನು ಸ್ಟಾಕ್ ಇರುವವರೆಗೂ ಮುಂದುವರೆಸುವುದಾಗಿ ತಿಳಿಸಿದೆ. ಕಂಪನಿಯು ಕಳೆದ ಒಂದೆರಡು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ 1 ಬಿಲಿಯನ್ ಡಾಲರ್ ನಿಂದ 1.5 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದೆ.

Most Read Articles

Kannada
English summary
Rock fame actor gifts ford f 150 raptor to navy veteran video details
Story first published: Tuesday, November 30, 2021, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X