ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಇತ್ತೀಚೆಗೆ ವಾಹನ ವಿಮೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಹನವನ್ನು ಬಾಡಿಗೆಗೆ ತೆಗೆದುಕೊಂಡರೆ ವಾಹನದ ಥರ್ಡ್ ಪಾರ್ಟಿ ವಿಮಾ ರಕ್ಷಣೆಯನ್ನು ಸಹ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಈ ಸಂದರ್ಭದಲ್ಲಿ ವಾಹನವನ್ನು ಬಾಡಿಗೆಗೆ ಪಡೆದ ವ್ಯಕ್ತಿಯನ್ನು ವಾಹನದ ಮಾಲೀಕರೆಂದು ಪರಿಗಣಿಸಲಾಗುತ್ತದೆ. ವಾಹನವನ್ನು ಬಾಡಿಗೆಗೆ ಪಡೆದ ನಂತರ ಅಪಘಾತವಾದರೆ ವಿಮಾ ಕಂಪನಿಯು ಪರಿಹಾರವನ್ನು ನೀಡಬೇಕಾಗುತ್ತದೆ.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ವಾಹನಕ್ಕೆ ವಿಮೆ ಮಾಡಿಸಿ, ನಿಗಮವು ಅದನ್ನು ನಿಗದಿತ ಮಾರ್ಗದಲ್ಲಿ ಒಪ್ಪಂದದಡಿಯಲ್ಲಿ ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದಲ್ಲಿ, ವಿಮಾ ಕಂಪನಿಯು ಪರಿಹಾರವನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆಯೇ ಅಥವಾ ನಿಗಮ ಅಥವಾ ವಾಹನ ಮಾಲೀಕರು ಜವಾಬ್ದಾರಿಯನ್ನು ಹೊಂದಿರುತ್ತಾರೆಯೇ ಎಂಬ ಪ್ರಶ್ನೆ ಸುಪ್ರೀಂ ಕೋರ್ಟ್‌ನ ಮುಂದೆ ಎದುರಾಗಿತ್ತು.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ತೀರ್ಪು ನಿಡುವಾಗ ಸುಪ್ರೀಂ ಕೋರ್ಟ್ ಒಪ್ಪಂದದ ಪ್ರಕಾರ, ನಿಗಮವು ಆ ವಾಹನದ ಅಧಿಪತ್ಯದಲ್ಲಿರುವ ವಾಹನದ ಮಾಲೀಕರಂತಿದೆ ಎಂದು ಹೇಳಿದೆ. ವಾಹನದೊಳಗೆ ಡ್ರೈವರ್ ಅಥವಾ ಕಂಡಕ್ಟರ್ ಕೆಲಸ ಮಾಡುತ್ತಿರುತ್ತಾರೆ.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಅಂತಹ ಸಂದರ್ಭದಲ್ಲಿ ವಾಹನದ ಜೊತೆಗೆ ವಿಮಾ ಪಾಲಿಸಿಯೂ ವರ್ಗಾವಣೆಯಾಗಿದೆ ಎಂದು ಪರಿಗಣಿಸಲಾಗುತ್ತದೆ. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದೊಂದಿಗೆ ವಾಹನ ಮಾಲೀಕರ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣವು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಒಪ್ಪಂದದ ಪ್ರಕಾರ ವಾಹನ ಮಾಲೀಕರು ಬಸ್ ಅನ್ನು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬಾಡಿಗೆಗೆ ನೀಡಿದ್ದರು. ಬಸ್ ಮಾಲೀಕರು ಬಾಡಿಗೆ ಅವಧಿಯಲ್ಲಿ ವಿಮೆ ಪಡೆದಿದ್ದರು. ಈ ಬಸ್ 25 ಆಗಸ್ಟ್ 1998 ರಂದು ಅಪಘಾತಕ್ಕೀಡಾಯಿತು.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಈ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಅವರ ಕುಟುಂಬ ಸದಸ್ಯರು ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿ,ಪರಿಹಾರವನ್ನು ಕೋರಿದ್ದರು.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ನ್ಯಾಯಮಂಡಳಿ ವಿಮಾ ಕಂಪನಿಗೆ ರೂ.1.82 ಲಕ್ಷಗಳ ಪರಿಹಾರವನ್ನು ಮೃತರ ಮುಂದಿನ ರಕ್ತಸಂಬಂಧಿಗಳಿಗೆ 6% ಬಡ್ಡಿಯೊಂದಿಗೆ ಪಾವತಿಸಲು ಆದೇಶಿಸಿತು. ಆದರೆ, ವಿಮಾ ಕಂಪನಿಯು ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು ಬಾಡಿಗೆಗೆ ಬಸ್ ಓಡಿಸುತ್ತಿರುವುದರಿಂದ ವಿಮಾ ಕಂಪನಿಯು ಮೂರನೇ ವ್ಯಕ್ತಿಗೆ ಪರಿಹಾರವನ್ನು ಪಾವತಿಸಲು ಹೊಣೆಗಾರನಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಅಲಹಾಬಾದ್ ಹೈ ಕೋರ್ಟ್ ಆದೇಶದ ವಿರುದ್ಧ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಬುಧವಾರ ಈ ಪ್ರಕರಣದ ತೀರ್ಪು ನೀಡಿದೆ.

ಬಾಡಿಗೆ ವಾಹನಗಳ ವಿಮೆ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಯಾವುದೇ ಕಂಪನಿ ಅಥವಾ ನಿಗಮವು ಮಾಲಿಕರಿಂದ ವಾಹನವನ್ನು ಬಾಡಿಗೆಗೆ ತೆಗೆದುಕೊಂಡರೆ, ವಾಹನದ ಜೊತೆಗೆ, ಅದರ ಮೂರನೇ ವ್ಯಕ್ತಿಯ ವಿಮೆಯನ್ನು ಸಹ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದರಿಂದ ಒಪ್ಪಂದದ ಅವಧಿಯಲ್ಲಿ ವಾಹನವು ಅಪಘಾತಕ್ಕೀಡಾದರೆ ವಿಮಾ ಕಂಪನಿಯು ಪರಿಹಾರವನ್ನು ಪಾವತಿಸಲು ಹೊಣೆಗಾರನಾಗ ಬೇಕಾಗುತ್ತದೆ.

Most Read Articles

Kannada
English summary
Supreme Court delivers historical judgement about third party insurance on rented cars and buses. Read in Kannada.
Story first published: Friday, July 23, 2021, 20:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X