ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಸುಮಾರು ಮೂರು ದಶಕಗಳಿಂದ ಚಿತ್ರರಂಗದಲ್ಲಿರುವ ಶಾರುಖ್ ಖಾನ್ ಸಿನಿಮಾದಂತೆಯೇ ವಾಹನಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ.

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಅವರು ದುಬಾರಿ ಸ್ಪೋರ್ಟ್ಸ್‌ಕಾರ್‌ಗಳನ್ನು ಚಾಲನೆ ಮಾಡುವುದಿಲ್ಲವಾದರೂ ಎಸ್‌ಯು‌ವಿಗಳ ಬಗ್ಗೆ ಒಲವನ್ನು ಹೊಂದಿದ್ದಾರೆ. ಅವರು ತಮ್ಮ ಗ್ಯಾರೇಜ್‌ನಲ್ಲಿ ಹಲವು ಎಸ್‌ಯು‌ವಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿ ಓಮ್ನಿ ಶಾರುಖ್ ಖಾನ್ ಅವರ ಮೊದಲ ಕಾರು. ಈ ಕಾರ್ ಅನ್ನು ಅವರು ತಮ್ಮ ತಾಯಿಯಿಂದ ಉಡುಗೊರೆಯಾಗಿ ಪಡೆದರು.

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಅವರ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಬಿಎಂಡಬ್ಲ್ಯು ಸೇರಿದಂತೆ ಹಲವಾರು ಕಾರುಗಳಿವೆ. ಇದರ ಹೊರತಾಗಿಯೂ ಅವರ ಬಳಿ ಹಲವು ಕಾರುಗಳಿವೆ. ಕೆಲವು ವರ್ಷಗಳ ಹಿಂದೆ ಶಾರುಖ್ ಖಾನ್ ಚಾಲನೆ ಮಾಡುತ್ತಿದ್ದ ಮಿಟ್ಸುಬಿಷಿ ಪಜೆರೊ ಎಸ್‌ಎಫ್‌ಎಕ್ಸ್ ಕಾರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಮಿಟ್ಸುಬಿಷಿ ಪಜೆರೊ ಎಸ್‌ಎಫ್‌ಎಕ್ಸ್‌ ಕಾರ್ ಅನ್ನು ಶಾರುಖ್ ಖಾನ್ ಚಾಲನೆ ಮಾಡುತ್ತಿರುವ ಅಪರೂಪದ ವೀಡಿಯೋ ಇತ್ತೀಚೆಗೆ ಹೊರ ಬಂದಿದೆ. ಈ ವೀಡಿಯೊವನ್ನು ವೈಲ್ಡ್ ಫಿಲ್ಮ್ಸ್ ಇಂಡಿಯಾ ಅಪ್ ಲೋಡ್ ಮಾಡಿದೆ.

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಆಮದು ಮಾಡಿಕೊಳ್ಳಲಾದ ಮಿಟ್ಸುಬಿಷಿ ಪಜೆರೊ ಎಸ್‌ಎಫ್‌ಎಕ್ಸ್‌ ಕಾರ್ ಅನ್ನು ಶಾರುಖ್ ಖಾನ್ ಬೇರೊಬ್ಬರಿಂದ ಖರೀದಿಸಿದ್ದಾರೆ ಎಂಬುದನ್ನು ಈ ವೀಡಿಯೊದಿಂದ ತಿಳಿಯಬಹುದು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಆ ಸಮಯದಲ್ಲಿ ಭಾರತದಲ್ಲಿ ಕೇವಲ ಬೆರಳಣಿಕೆಯಷ್ಟು ಮಿಟ್ಸಿಬಿಷಿ ಪಜೆರೊ ಕಾರುಗಳಿದ್ದವು. ಈ ಎಸ್‌ಯು‌ವಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲು ಆಮದು ಮಾಡಿಕೊಳ್ಳಲಾಗಿತ್ತು.

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಈ ಎಸ್‌ಯು‌ವಿ ಆ ಸಮಯದಲ್ಲಿ ಶ್ರೀಮಂತರ ಹಾಗೂ ಸೆಲೆಬ್ರಿಟಿಗಳ ನೆಚ್ಚಿನ ಕಾರ್ ಆಗಿತ್ತು. ಮಿಟ್ಸುಬಿಷಿ ಪಜೆರೊ ಲ್ಯಾಂಡ್ ಕ್ರೂಸರ್'ನಂತೆಯೇ ಇತ್ತು. ಆ ಸಮಯದಲ್ಲಿ ಮಿಟ್ಸುಬಿಷಿ ಪಜೆರೊ ಎಸ್‌ಎಫ್‌ಎಕ್ಸ್ ಅನ್ನು ನೇರವಾಗಿ ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಜಪಾನ್‌ನಲ್ಲಿಯೂ ಭಾರತದಂತೆಯೇ ರಸ್ತೆಯ ಎಡಭಾಗದಲ್ಲಿ ವಾಹನಗಳನ್ನು ಚಾಲನೆ ಮಾಡುವುದರಿಂದ ಮಿಟ್ಸುಬಿಷಿ ಪಜೆರೊ ಎಸ್‌ಎಫ್‌ಎಕ್ಸ್ ಅನ್ನು ಆಮದುಮಾಡಿಕೊಳ್ಳುವುದು ದೊಡ್ಡ ವಿಷಯವಾಗಿರಲಿಲ್ಲ.

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಮಿಟ್ಸುಬಿಷಿ ಕಂಪನಿಯು ಬಿಡುಗಡೆಗೂ ಮುನ್ನ ಹಲವು ಪಜೆರೊ ಎಸ್‌ಎಫ್‌ಎಕ್ಸ್'ಗಳನ್ನು ಭಾರತಕ್ಕೆ ರಫ್ತು ಮಾಡಿತ್ತು. ಮಿಟ್ಸುಬಿಷಿ ಕಂಪನಿಯು ಅಂತಿಮವಾಗಿ ಪಜೆರೊ ಎಸ್‌ಎಫ್‌ಎಕ್ಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಒರಟು ನೋಟ ಹಾಗೂ ವಿಶ್ವಾಸಾರ್ಹತೆಯಿಂದಾಗಿ ಈ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು. ಬಿಡುಗಡೆಯಾದ ನಂತರ ಪಜೆರೊ ಎಸ್‌ಎಫ್‌ಎಕ್ಸ್ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿತ್ತು.

ವೈರಲ್ ಆದ ಬಾಲಿವುಡ್ ಬಾದ್ ಷಾ ಎಸ್‌ಯು‌ವಿ ಚಾಲನೆ ಹಳೆ ವೀಡಿಯೊ

ಪಜೆರೊ ಎಸ್‌ಎಫ್‌ಎಕ್ಸ್ ಎಸ್‌ಯುವಿಯಲ್ಲಿ 2.8-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 280 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಚಿತ್ರ ಕೃಪೆ: ವೈಲ್ಡ್ ಫಿಲ್ಮ್ಸ್ ಇಂಡಿಯಾ

Most Read Articles

Kannada
English summary
Shahrukh Khan Mitsubishi Pajero SFX driving old video goes viral. Read in Kannada.
Story first published: Monday, May 10, 2021, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X