ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ಕುಶಾಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಕುಶಾಕ್ ಎಸ್‍ಯುವಿಯು 2020ರ ಆಟೋ ಎಕ್ಸ್‌ಪೋದಲ್ಲಿ ವಿಷನ್ ಇನ್ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಮಾದರಿಯಾಗಿದೆ.

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಈ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿಯು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಬಹುದು. ಇದೀಗ ಸ್ಕೋಡಾ ಕಂಪನಿಯು ಪುಣೆ ಬಳಿಯ ಚಕನ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಕುಶಾಕ್ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿಯು ಎಂಕ್ಯೂಬಿ ಎ ಪ್ಲ್ಯಾಟ್‌ಫಾರ್ಮ್‌ ಅಡಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ.

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಕುಶಾಕ್ ಸ್ಥಳೀಯವಾಗಿ ತಯಾರಿಸಿದ ಎರಡು ಟಿಎಸ್‌ಐ ಪೆಟ್ರೋಲ್ ಎಂಜಿನ್‌ಗಳನ್ನು ಒಳಗೊಂಡಿದೆ. ಇದರಲ್ಲಿ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಇದರೊಂದಿಗೆ 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗುವುದು ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಆಯ್ಕೆಯಾಗಿ ನೀಡಲಾಗುತ್ತದೆ. ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಸ್ಕೋಡಾ ಕುಶಾಕ್ ಎಸ್‍ಯುವಿ ಭಾರತ 2.0 ಯೋಜನೆಯಿಂದ ಹೊರಬರುವ ಮೊದಲ ಮಾದರಿಯಾಗಿದೆ. ಇದರ ಕುಶಾಕ್ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದರ ಅರ್ಥ ರಾಜ ಅಥವಾ ಚಕ್ರವರ್ತಿ ಎಂಬುದಾಗಿದೆ. ಈ ಕುಶಾಕ್ ಎಸ್‌ಯುವಿಯಲ್ಲಿ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಇದರಲ್ಲಿ ದೊಡ್ಡದಾದ ಗ್ರಿಲ್ ಮತ್ತು ಬಲಿಷ್ಠ ವಿನ್ಯಾಸದ ಬಂಪರ್, ಡ್ಯುಯಲ್ ಹೆಡ್‍‍ಲ್ಯಾಂಪ್‍, ಎಲ್ಇಡಿ ಡಿಆರ್‌ಎಲ್ಎಸ್, ಏರ್ ಇನ್‍‍ಟೆಕ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಸ್ಕಫ್ ಪ್ಲೇಟ್‍ ಹೊಂದಿದೆ, ಇನ್ನು ಈ ಎಸ್‍ಯುವಿಯಲ್ಲಿ 17-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ವೀಂಡೋಗಳ ಸುತ್ತಲೂ ಕ್ರೋಮ್ ಸ್ಟ್ರೀಪ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್, ರೂಫ್ ಮೌಟೆಂಡ್ ಸ್ಪಾಯ್ಲರ್, ಎಲ್ಇಡಿ ಸ್ಟಾಪ್ ಲ್ಯಾಂಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಇನ್ನು ಇದರ ಒಳಭಾಗದಲ್ಲಿ ಮಲ್ಟಿ ಲೆಯರ್ಡ್ ಡ್ಯಾಶ್‍‍‍ಬೋರ್ಡ್ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುವ ಆ್ಯಂಬಿಯೆಂಟ್ ಲೈಟಿಂಗ್ಸ್, ಆರಾಮದಾಯಕ ವೆಂಟೆಲೆಟೆಡ್ ಆಸನಗಳು, ಸೆಂಟರ್ ಕನ್ಸೊಲ್, 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಮಲ್ಟಿ ಫಂಕ್ಷನಲ್ ಟು ಸ್ಪೋಕ್ ಸ್ಟಿರಿಂಗ್ ವೀಲ್ಹ್ ಹೊಂದಿದೆ.

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಇದರೊಂದಿಗೆ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ಸಿ ಫೋರ್ಟ್ ವೈರ್‌ಲೆಸ್ ಚಾರ್ಜರ್ ಸೌಲಭ್ಯ ಸೇರಿದಂತೆ ಸುರಕ್ಷತೆಗಾಗಿ ಬೆಸ್ ವೆರಿಯೆಂಟ್‌ನಲ್ಲಿ 4 ಏರ್‌ಬ್ಯಾಗ್, ಟಾಪ್ ಎಂಡ್ ಮಾದರಿಯಲ್ಲಿ 6 ಏರ್‌ಬ್ಯಾಗ್ ಸೌಲಭ್ಯಗಳಿವೆ.

ಭಾರತದಲ್ಲಿ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿ ಉತ್ಪಾದನೆ ಆರಂಭ

ಇನ್ನು ಈ ಹೊಸ ಸ್ಕೋಡಾ ಕುಶಾಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Skoda Kushaq Production Begins. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X