2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಸ್ಕೋಡಾ ಇಂಡಿಯಾ ಕಂಪನಿಯು 2.0 ಯೋಜನೆ ಅಡಿಯಲ್ಲಿ ರೀಬ್ಯಾಡ್ಜಿಂಗ್ ಮೂಲಕ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದ್ದು, ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಕಾರು ಮಾರಾಟ ಮಳಿಗೆಗಳ ವಿಸ್ತರಣೆ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಭಾರತದ ಪ್ರಮುಖ ಮಾಹಾನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿರುವ ಸ್ಕೋಡಾ ಕಂಪನಿಯು 2021ರ ಅಂತ್ಯಕ್ಕೆ ಹೊಸದಾಗಿ 30 ಶೋರೂಂಗಳ ಮೂಲಕ 150 ಶೋರೂಂ ಗುರಿತಲುಪುವ ಸಿದ್ದತೆಯಲ್ಲಿದ್ದು, ಹೊಸ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದರಿಂದ 2022ರ ವೇಳೆಗೆ ಒಟ್ಟು 225 ಮಾರಾಟ ಮಳಿಗೆಗಳೊಂದಿಗೆ 100 ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯ ತೆರೆಯುವ ಭರವಸೆ ನೀಡಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಹೊಸ ಮಾರಾಟ ಮಳಿಗೆಗಳನ್ನು ಮಾರಾಟ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳನ್ನು ಒದಗಿಸಲು ಗುರಿಹೊಂದಿರುವುದಾಗಿ ಹೇಳಿಕೊಂಡಿರುವ ಸ್ಕೋಡಾ ಕಂಪನಿಯು ಹೊಸ ಮಾರಾಟ ಮಳಿಗೆಗಳನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಹೊಸ ಯೋಜನೆಗೆ ಪೂರಕವಾಗಿ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಬ್ರಾಂಡ್ ಅನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರು ಮಾರಾಟ ಮಳಿಗೆಗಳ ಉನ್ನತೀಕರಣ ಮತ್ತು ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ.120 ಕೋಟಿಗೂ ಅಧಿಕ ಖರ್ಚು ಮಾಡಲಾಗುತ್ತಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಕಾರು ಮಾರಾಟ ಶೋರೂಂಗಳ ನವೀಕರಣವು ಭಾರತದಲ್ಲಿ ಇದುವರೆಗೂ ಮಾಡಲಾದ ಅತಿ ದೊಡ್ಡ ನವೀಕರಣವಾಗಿದ್ದು, ಸ್ಕೋಡಾ ಕಂಪನಿಯು ತನ್ನ ಹೊಸ ಕಾರ್ಪೋರೆಟ್ ಐಡೆಂಟಿಟಿ ಹಾಗೂ ಡಿಸೈನ್ (ಸಿ‍ಐ‍‍ಸಿ‍‍ಡಿ) ಅನುಸಾರ ತನ್ನ ಶೋರೂಂಗಳನ್ನು ನವೀಕರಿಸುತ್ತಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಇನ್ನು ಸ್ಕೋಡಾ ಕಂಪನಿಯು ಸದ್ಯ ರ‍್ಯಾಪಿಡ್ ಸೆಡಾನ್, ಕರೋಕ್ ಎಸ್‌ಯುವಿ, ಸೂಪರ್ಬ್ ಸೆಡಾನ್, ಆಕ್ಟಿವಿಯಾ ಸೆಡಾನ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳಷ್ಟೇ ಬಿಡುಗಡೆ ಮಾಡಿರುವ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಆರಂಭದಲ್ಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕುಶಾಕ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.59 ಲಕ್ಷ ಬೆಲೆ ಹೊಂದಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

2022ಕ್ಕೆ ದೇಶದ ಪ್ರಮುಖ 100 ನಗರಗಳಲ್ಲಿ ಮಾರಾಟ ಸೌಲಭ್ಯ ವಿಸ್ತರಿಸಲಿದೆ ಸ್ಕೋಡಾ ಇಂಡಿಯಾ

ಕುಶಾಕ್ ಕಾರು ಮಾದರಿಯು ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಸೇಫ್ಟಿ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Plans To Expand Their Sales And After Sales Facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X