ಕುಶಾಕ್ ಎಸ್‌ಯುವಿ ಮಾದರಿಯೊಂದಿಗೆ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಸ್ಕೋಡಾ ಇಂಡಿಯಾ(skoda India) ಕಂಪನಿಯು ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದು, ಕಂಪನಿಯ ಕಾರು ಮಾರಾಟದಲ್ಲಿ ಹೊಚ್ಚ ಹೊಸ ಕುಶಾಕ್(kushaq) ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಹತ್ವದ ಪಾತ್ರ ವಹಿಸುತ್ತಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ಕಳೆದ ತಿಂಗಳು ನವೆಂಬರ್ ಅವಧಿಯ ಕಾರು ಮಾರಾಟದಲ್ಲಿ ಕಳೆದ ವರ್ಷದ ನವೆಂಬರ್ ಅವಧಿಗಿಂತಲೂ ಶೇ. 108ರಷ್ಟು ಬೆಳವಣಿಗೆ ಸಾಧಿಸಿದ್ದು, ಕಂಪನಿಯ ಹೊಸ ಕಾರು ಮಾರಾಟದಲ್ಲಿ ಕುಶಾಕ್ ಮಾದರಿಯೇ ಅಗ್ರಸ್ಥಾನದಲ್ಲಿದೆ. ಕಳೆದ ತಿಂಗಳು ಸ್ಕೋಡಾ ಕಂಪನಿಯು 2300 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ಅವಧಿಯಲ್ಲಿ ಕೇವಲ 1,056 ಯುನಿಟ್ ಕಾರುಗಳು ಮಾರಾಟವಾಗಿದ್ದವು.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಉತ್ತಮ ಬೇಡಿಕೆಯೊಂದಿಗೆ ಸ್ಕೋಡಾ ಕಂಪನಿಗೆ ಉತ್ತಮ ಬೇಡಿಕೆಯನ್ನು ತಂದುಕೊಡುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಕಂಪನಿಗೆ ಇದೀಗ ಕುಶಾಕ್ ಕಾರು ಮರುಜೀವ ನೀಡಿದೆ ಎಂದರೆ ತಪ್ಪಾಗುವುದಿಲ್ಲ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ರ‍್ಯಾಪಿಡ್ ಸೆಡಾನ್ ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳ ಮಾರಾಟದಲ್ಲಿ ಸೀಮಿತ ಬೇಡಿಕೆ ಹೊಂದಿರುವ ಸ್ಕೋಡಾ ಕಂಪನಿಯು ಕುಶಾಕ್ ಮಾದರಿಯ ಬಿಡುಗಡೆಯ ಮೂಲಕ ಕಂಪನಿಯ ದಿಕ್ಕನ್ನೇ ಬದಲಿಸಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಮತ್ತಷ್ಟು ಹೊಸ ಕಾರುಗಳ ಮಾರಾಟ ಮಾಡುವ ಯೋಜನೆಯಲ್ಲಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಫೋಕ್ಸ್‌ವ್ಯಾಗನ್ ಕಂಪನಿಯ ಜೊತೆಗೆ ಸಹಭಾಗಿತ್ವದಲ್ಲಿ ಹೊಸ ಕಾರುಗಳನ್ನು ಅಭಿವೃದ್ದಿಗೊಳಿಸುತ್ತಿರುವ ಸ್ಕೋಡಾ ಕಂಪನಿಯು ಮಧ್ಯಮ ಗಾತ್ರದ ಐಷಾರಾಮಿ ಕಾರುಗಳ ಮಾರಾಟವನ್ನು ಹೊಂದಿದ್ದು, ರ‍್ಯಾಪಿಡ್ ನಂತರ ಕುಶಾಕ್ ಮಾದರಿಯನ್ನು ಆಕರ್ಷಕ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುತ್ತಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಸ್ಕೋಡಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯ ಮೂಲಕ ಗ್ರಾಹಕರ ಆಯ್ಕೆಯನ್ನೇ ಬದಲಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಕಂಪನಿಯು ಸಿ ಸೆಗ್ಮೆಂಟ್ ಸೆಡಾನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಗಿತಗೊಳಿಸಿ ರ‍್ಯಾಪಿಡ್‌ಗಿಂತಲೂ ಉತ್ತಮ ವಿನ್ಯಾಸದ ಸ್ಲಾವಿಯಾ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಸ್ಕೋಡಾ ರ‍್ಯಾಪಿಡ್ ಮಾತ್ರವಲ್ಲದೆ ಫೋಕ್ಸ್‌‌ವ್ಯಾಗನ್ ವೆಂಟೊ ಕಾರು ಮಾದರಿಯು ಕೂಡಾ ಮಾರಾಟದಿಂದ ಸ್ಥಗಿತಗೊಳ್ಳುತ್ತಿದ್ದು, ರ‍್ಯಾಪಿಡ್ ಮತ್ತು ವೆಂಟೊ ಸ್ಥಾನಕ್ಕೆ ಹೊಸ ವಿನ್ಯಾಸ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆ ಹೊಸ ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿವೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಉತ್ಪಾದನೆಯಿಂದ ಸ್ಥಗಿತಗೊಳಿಸುತ್ತಿರುವ ಬಗ್ಗೆ ಸ್ಕೋಡಾ ಇಂಡಿಯಾ ಮುಖ್ಯಸ್ಥರೇ ಮಾಹಿತಿ ಹಂಚಿಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ರ‍್ಯಾಪಿಡ್ ಸ್ಥಾನದಲ್ಲಿ ಸಂಪೂರ್ಣ ಹೊಸ ಮಾದರಿಯಾದ ಸ್ಲಾವಿಯಾ ಮಾರಾಟಗೊಳ್ಳಲಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಹೊಸ ಕಾರು ಕುಶಾಕ್ ಮಾದರಿಯಲ್ಲೇ ಸ್ಲಾವಿಯಾ ಕೂಡಾ ಹೊಸ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವ ತವಕದಲ್ಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಸೆಡಾನ್ ಮಾರಾಟದಲ್ಲಿ ಎರಡು ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕುಶಾಕ್ ಮಾದರಿಯು ಈಗಾಗಲೇ ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಸುಮಾರು 15 ಸಾವಿರ ಬುಕ್ಕಿಂಗ್‌ ಗುರಿತಲುಪಿದ್ದು, ಹೊಸ ಕಾರು ವಿತರಣೆ ಆರಂಭಿಸಿದ ನಂತರ ಇದುವರೆಗೆ ಸುಮಾರು 8 ಸಾವಿರಕ್ಕೂ ಹೆಚ್ಚು ಯುನಿಟ್ ಗ್ರಾಹಕರ ಕೈಸೇರಿವೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಬುಕ್ಕಿಂಗ್ ಆಧಾರದ ಹೊಸ ಕುಶಾಕ್ ಕಾರು ವಿತರಣೆ ಆರಂಭಿಸಿರುವ ಸ್ಕೋಡಾ ಕಂಪನಿಯು ಹೊಸ ಕಾರಿನೊಂದಿಗೆ ಮತ್ತಷ್ಟು ಹೊಸ ಮಾರಾಟ ಮಳಿಗೆಗಳಿಗೂ ಚಾಲನೆ ನೀಡುತ್ತಿದ್ದು, ಹೊಸ ಮಾರಾಟ ಮಳಿಗೆಗಳೊಂದಿಗೆ ಕುಶಾಕ್ ಕಾರಿಗೆ ಇನ್ನು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ದೇಶಾದ್ಯಂತ ಪ್ರಮುಖ ನಗರಗಳಲ್ಲಿ 150 ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಸ್ಕೋಡಾ ಕಂಪನಿಯು ಮುಂದಿನ ಎರಡು ವರ್ಷದೊಳಗೆ 75 ಹೊಸ ಮಾರಾಟ ಮಳಿಗೆಗಳೊಂದಿಗೆ 225 ಮಾರಾಟ ಮಳಿಗೆ ಹೊಂದುವ ಗುರಿಹೊಂದಿದ್ದು, ಹೊಸ ಮಾರಾಟ ಮಳಿಗೆಗಳು ಕುಶಾಕ್ ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗುತ್ತಿವೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಕೋಡಾ

ಕುಶಾಕ್ ಮಾದರಿಯು ಸದ್ಯ ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಶೀಘ್ರದಲ್ಲೇ ಮಾಂಟೆ ಕಾರ್ಲೊ ಮಾದರಿಯು ಸಹ ಬಿಡುಗಡೆಯಾಗಲಿದೆ. ಹೊಸ ವೆರಿಯೆಂಟ್ ಸ್ಟೈಲ್ ಮಾದರಿಗಿಂತಲೂ ತುಸು ದುಬಾರಿ ಬೆಲೆಯೊಂದಿಗೆ ಹೆಚ್ಚುವರಿಯಾಗಿ ಹೊಸ ಬಣ್ಣದ ಆಯ್ಕೆ ಜೊತೆ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ರೂಫ್ ಲೈನರ್ ಸೇರಿದಂತೆ ಮತ್ತಷ್ಟು ಹೊಸ ಫೀಚರ್ಸ್ ಹೊಂದಿರಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda kushaq suv getting high demand in november 2021 sales report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X