ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ತನ್ನ ಹೊಸ ಸೂಪರ್ಬ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.31.99 ಲಕ್ಷಗಳಾಗಿದೆ. ಹೊಸ ಸ್ಕೋಡಾ ಸೂಪರ್ಬ್ ಕಾರ್ ಅನ್ನು ಟ್ರಿಮ್ ಸ್ಪೋರ್ಟ್ ಲೈನ್ ಹಾಗೂ ಎಲ್ ಅಂಡ್ ಕೆ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಹೊಸ ಮಾದರಿಯಲ್ಲಿ ವಿನ್ಯಾಸ, ಹೆಚ್ಚುವರಿ ಫೀಚರ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಸ್ಕೋಡಾ ಸೂಪರ್ಬ್ ಕಾರು ಹೊಸ ಸ್ಟೀಯರಿಂಗ್ ವ್ಹೀಲ್, ಸ್ಪೋರ್ಟ್ ಲೈನ್ ​​ಬ್ಯಾಡ್ಜಿಂಗ್, ವರ್ಚುವಲ್ ಕಾಕ್ ಪಿಟ್'ಗಳನ್ನು ಹೊಂದಿದೆ. ಈ ಎರಡೂ ಮಾದರಿಗಳು ಯುಎಸ್‌ಬಿ-ಸಿ ಪೋರ್ಟ್ ಅಪ್ ಫ್ರಂಟ್, ಎಂಐಬಿ 3 ಎಂಟು ಇಂಚಿನ ಟಚ್‌ಸ್ಕ್ರೀನ್ ಹಾಗೂ ಅಪ್ ಡೇಟ್ ಮಾಡಲಾದ ಹೊಸ ಇಂಟರ್ ಫೇಸ್'ಗಳನ್ನು ಹೊಂದಿವೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಇದರ ಜೊತೆಗೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ನ್ಯಾವಿಗೇಷನ್ ಸಿಸ್ಟಂ, ಎಸ್ ಡಿ ಕಾರ್ಡ್ ಸಪೋರ್ಟ್, ಹ್ಯಾಂಡ್ಸ್ ಫ್ರೀ ಪಾರ್ಕ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ವೈರ್ ಲೆಸ್ ಚಾರ್ಜಿಂಗ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಹೊಸ ಕಾರು ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌, ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಪಾರ್ಕ್ ಅಸಿಸ್ಟ್, ಲೆದರ್ ಸೀಟ್ ಅಪ್ ಹೊಲೆಸ್ಟರಿ, ವೈರ್‌ಲೆಸ್ ಚಾರ್ಜಿಂಗ್, ಐಛ್ಛಿಕ ವರ್ಚುವಲ್ ಕಾಕ್‌ಪಿಟ್'ಗಳನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಎಲ್ ಅಂಡ್ ಕೆ ಮಾದರಿಯು ಸ್ಟೋನ್ ಬೀಜ್, ಬ್ರೌನ್ ಲೆದರ್ ಅಪ್ ಹೊಲೆಸ್ಟರಿಗಳನ್ನು ಹೊಂದಿದೆ. ಇನ್ನು ಸ್ಪೋರ್ಟ್‌ಲೈನ್ ಕಾರ್ಬನ್ ಮಾದರಿಯು ಹೊಸ 3 ಸ್ಪೋಕ್ ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್, ಪ್ಯಾಡಲ್ ಶಿಫ್ಟ್, ಕಪ್ಪು ಬಣ್ಣದ ಅಲ್ಕಾಂಟರಾ ಸ್ಪೋರ್ಟ್ಸ್ ಸೀಟ್'ಗಳನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಹೊಸ ಸ್ಕೋಡಾ ಸೂಪರ್ಬ್'ನಲ್ಲಿರುವ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲೈಸೇಶನ್ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಏಳು-ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ಜನವರಿ 1ರಿಂದ ಜಾರಿಗೆ ಬರುವಂತೆ ಎಲ್ಲಾ ಕಾರುಗಳ ಬೆಲೆಯನ್ನು 2.5%ನಷ್ಟು ಏರಿಕೆ ಮಾಡಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಸ್ಕೋಡಾ ಕಂಪನಿ ಹೇಳಿದೆ. ಜಾಗತಿಕ ವಿನಿಮಯ ದರದಲ್ಲಿನ ಏರಿಳಿತದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಉತ್ಪಾದನಾ ವೆಚ್ಚವು ಏರಿಕೆಯಾಗಿದೆ ಎಂದು ಸ್ಕೋಡಾ ಕಂಪನಿ ತಿಳಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸೂಪರ್ಬ್ ಕಾರ್ ಬಿಡುಗಡೆಗೊಳಿಸಿದ ಸ್ಕೋಡಾ

ಹೊಸ ಸ್ಕೋಡಾ ಸೂಪರ್ಬ್ ಕಾರ್ ಅನ್ನು ಡೀಲರ್'ಗಳಿಗೆ ತಲುಪಿಸಲಾಗಿದೆ. ಹೊಸ ವರ್ಷದ ಆರಂಭದಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿರುವ ಸ್ಕೋಡಾ ಕಂಪನಿಯು ಈ ವರ್ಷ ಹಲವು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Skoda launches new Superb car in India, features and other details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X