ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಸ್ಕೋಡಾ ಇಂಡಿಯಾ ಕಂಪನಿಯು ಬಿಎಸ್ 6 ಎಮಿಷನ್ ಜಾರಿ ನಂತರ ಹೊಸ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿದ್ದು, ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಸ್ಕೋಡಾ ಕಂಪನಿಯು ಸದ್ಯ ಪೆಟ್ರೋಲ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಹೊಸ ಕಾರುಗಳನ್ನು ಹೊಸ ಎಮಿಷನ್‌ಗೆ ಅನುಗುಣವಾಗಿ ಉನ್ನತೀಕರಿಸಿ ಬಿಡುಗಡೆ ಮಾಡಿರುವ ಸ್ಕೋಡಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ರ‍್ಯಾಪಿಡ್ ಸೆಡಾನ್ ಮಾದರಿಯಲ್ಲಿ ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಆವೃತ್ತಿಯನ್ನು ಹೊಸ ಕುಶಾಕ್ ಕಾರು ಬಿಡುಗಡೆಯ ನಂತರವಷ್ಟೇ ಮಾರುಕಟ್ಟೆಗೆ ಪರಿಚಯಿಸುವ ಸಿದ್ದತೆಯಲ್ಲಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

2021-22ರ ಅವಧಿಗಾಗಿ ಒಟ್ಟು ನಾಲ್ಕು ಹೊಸ ಕಾರುಗಳನ್ನು ಪರಿಚಯಿಸುತ್ತಿರುವುದಾಗಿ ಹೇಳಿಕೊಂಡಿರುವ ಸ್ಕೋಡಾ ಕಂಪನಿಯು ಮೊದಲ ಹಂತದಲ್ಲಿ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಹೊಸ ಕಾರುಗಳಲ್ಲಿ ರ‍್ಯಾಪಿಡ್ ಸೆಡಾನ್ ಮಾದರಿಯ ಸಿಎನ್‌ಜಿ ಆವೃತ್ತಿಯು ಸಹ ಒಂದಾಗಿದ್ದು, ಸದ್ಯ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಉತ್ತಮ ಮೈಲೇಜ್ ನೀಡುವ ಸಿಎನ್‌ಜಿ ಆವೃತ್ತಿಯಲ್ಲೂ ಖರೀದಿಗೆ ಲಭ್ಯವಿರಲಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ರ‍್ಯಾಪಿಡ್ ಸಿಎನ್‌ಜಿ ಬಿಡುಗಡೆ ಕುರಿತಂತೆ ಸ್ಕೋಡಾ ಇಂಡಿಯಾ ಮುಖ್ಯಸ್ಥರೇ ಸ್ಪಷ್ಟನೆ ನೀಡಿದ್ದು, ಹೊಸ ಕಾರು ಬಿಡುಗಡೆಯ ಹಂತದಲ್ಲಿದ್ದು, ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿರುವುದಾಗಿ ತಿಳಿದ್ದಾರೆ. ಹೀಗಾಗಿ ಸ್ಕೋಡಾ ಕಾರುಗಳು ಸಿಎನ್‌ಜಿ ಮಾದರಿಯಲ್ಲೂ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಇನ್ನು ಭಾರತದಲ್ಲಿ ರ‍್ಯಾಪಿಡ್ ಸೆಡಾನ್ ಮಾದರಿಯನ್ನು ಈ ಹಿಂದೆ 2011ರಲ್ಲಿ ಮೊದಲ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಾರಿಗೆ ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಇದುವರೆಗೂ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ. ಕಾಲ ಕಾಲಕ್ಕೆ ಕಾರಿನ ತಾಂತ್ರಿಕ ಅಂಶಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದ್ದರೂ ಹೊಸ ತಲೆಮಾರಿನ ಆವೃತ್ತಿಯನ್ನು ಇದುವರೆಗೂ ಬಿಡುಗಡೆ ಮಾಡದ ಸ್ಕೋಡಾ ಕಂಪನಿಯು ಹೊಸ ತಲೆಮಾರಿನ ರ‍್ಯಾಪಿಡ್ ಬಿಡುಗಡೆಯ ಯೋಜನೆ ಕೈಬಿಟ್ಟಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಹೊಸ ತಲೆಮಾರಿನ ರ‍್ಯಾಪಿಡ್ ಮಾದರಿಯು 2021ರ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ ಎನ್ನುವ ಗ್ರಾಹಕರ ನೀರಿಕ್ಷೆಗೆ ಸ್ಕೋಡಾ ಕಂಪನಿಯು ನಿರಾಶೆ ಉಂಟುಮಾಡಿದ್ದು, ರ‍್ಯಾಪಿಡ್ ನ್ಯೂ ಜನರೇಷನ್ ಬದಲಾಗಿ ಮತ್ತೊಂದು ಹೊಚ್ಚ ಹೊಸ ಸೆಡಾನ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ತಿಳಿಸಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಹಾಗೆಯೇ ಹೊಸ ಕಾರನ್ನು ಫೋಕ್ಸ್‌ವ್ಯಾಗನ್ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಸಿದ್ದಪಡಿಸಲಾದ ಎಂಕ್ಯೂಬಿ ಪ್ಲ್ಯಾಟ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಮಾದರಿಗಿಂತಲೂ ಅತ್ಯುತ್ತಮ ಪ್ಲ್ಯಾಟ್‌ಫಾರ್ಮ್ ಮತ್ತು ಎಂಜಿನ್ ಪಡೆದುಕೊಳ್ಳುವ ಸುಳಿವು ನೀಡಲಾಗಿದೆ.

MOST READ: ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಆಯ್ಕೆ ಸಹ ಇರಲಿದ್ದು, ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ನಿರ್ಮಾಣವಾಗುತ್ತಿರುವ ಹೊಸ ಸೆಡಾನ್ ಕಾರು ಮಾದರಿಯು 2021ರ ಕೊನೆಯಲ್ಲಿ ಬಿಡುಗಡೆಯಾಗುವ ಮಾಹಿತಿಯಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಹೊಸ ಕಾರು ಮಾದರಿ ಬಿಡುಗಡೆಯ ತನಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ರ‍್ಯಾಪಿಡ್ ಖರೀದಿಗೆ ಲಭ್ಯವಿರಲಿದ್ದು, ಹೊಸ ಸೆಡಾನ್ ಬಿಡುಗಡೆಯ ನಂತರ ರ‍್ಯಾಪಿಡ್ ಮಾರಾಟವು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

ಬಿಎಸ್-6 ಎಮಿಷನ್‌ನಿಂದಾಗಿ ರ‍್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೊಸ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

ಸಿಎನ್‌ಜಿ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ‍್ಯಾಪಿಡ್ ಸೆಡಾನ್

1.0-ಲೀಟರ್(999 ಸಿಸಿ) ಟಿಎಸ್ಐ ಟರ್ಬೊ ಪೆಟ್ರೋಲ್ ಮಾದರಿಯು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು 16.24 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Rapid CNG Variant Coming To India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X