ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಇವಿ ಅನಾವರಣಗೊಳಿಸಿದ ಸ್ಕೋಡಾ

ಜೆಕ್ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದೆ.

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಯುರೋಪ್ ಮಾರುಕಟ್ಟೆಗಾಗಿ ಈಗಾಗಲೇ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಬಿಡುಗಡೆಯ ಕುರಿತಂತೆ ನೆಮ್ ಪ್ಲೇಟ್ ಟೀಸರ್ ಒಂದನ್ನು ಬಿಡುಗಡೆ ಮಾಡಿರುವ ಸ್ಕೋಡಾ ಕಂಪನಿಯು ಇದೀಗ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದೆ. ಸ್ಕೋಡಾ ಹೊಸ ಇವಿ ಕಾರು ಎನ್ಯಾಕ್(ENYAQ) ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಲಾಂಗ್ ವೀಲ್ಹ್ ಬೆಸ್‌ನೊಂದಿಗೆ ಹೊಸ ಕ್ರಾಸ್ ಓವರ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳ್ಳಲಿದೆ

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಮಾಹಿತಿಗಳ ಪ್ರಕಾರ, ಹೊಸ ಎನ್ಯಾಕ್ ಕಾರು ಮುಂಬರುವ ಮಾರ್ಚ್ ವೇಳೆಗೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಭಾರತದಲ್ಲಿ ಈ ಹೊಸ ಕಾರು 2022ರ ವೇಳೆಗೆ ಬಿಡುಗಡೆಗೊಳ್ಳುವ ನೀರಿಕ್ಷೆಯಿದೆ.

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಆಧುನಿಕ ತಂತ್ರಜ್ಞಾನ ಪ್ರೇರಿತ ಹಲವು ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಎನ್ಯಾಕ್ ಎಸ್‌ಯುವಿ ಕಾರು ಡೈನಾಮಿಕ್ ಡಿಸೈನ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಣೆ ಹೊಂದಿದೆ.

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಎಸ್‌ಯುವಿ ಕಾರುಗಳಲ್ಲೇ ಹೊಸ ಮಾದರಿಯ ವಿನ್ಯಾಸ ಹೊಂದಿರುವ ಎನ್ಯಾಕ್ ಕಾರು 4,648-ಎಂಎಂ ಉದ್ದ, 1,877-ಎಂಎಂ ಅಗಲ, 1,618-ಎಂಎಂ ಎತ್ತರದೊಂದಿಗೆ ಉತ್ತಮ ಒಳಾಂಗಣ ವಿನ್ಯಾಸ ಹೊಂದಿದ್ದು, ಹೊಸ ಕಾರು ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದೆ.

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಎನ್ಯಾಕ್ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 60 ಐವಿ, 80 ಐವಿ, 80ಎಕ್ಸ್ ಐವಿ ಮತ್ತು ಸ್ಪೋರ್ಟ್‌ಲೈನ್ ವೆರಿಯೆಂಟ್‌ಗಳಲ್ಲಿ ಬಿಡುಗಡೆಗೊಳ್ಳಲಿದ್ದು, 60ಐವಿ ಕಾರಿನಲ್ಲಿ 62kWh, 80 ಐವಿ ಕಾರಿನಲ್ಲಿ 82kWh 80ಎಕ್ಸ್ ಐವಿ(ಆಲ್ ವೀಲ್ಹ್ ಡ್ರೈವ್) ಕಾರಿನಲ್ಲಿ 82kWh ಮತ್ತು ಹೈ ಎಂಡ್ ಮಾದರಿಯಾದ ಸ್ಪೋರ್ಟ್‌ಲೈನ್‌ನಲ್ಲಿ 82kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಹೊಸ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯಾದ 60 ಐವಿ ಮಾದರಯು 389ಕಿ.ಮೀ, ಮಧ್ಯಮ ಕ್ರಮಾಂಕದ ಕಾರು ಮಾದರಿಗಳಾದ 80 ಐವಿ 509 ಕಿ.ಮೀ ಮತ್ತು 80ಎಕ್ಸ್ ಐವಿ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 459ಕಿ.ಮೀ ಮೈಲೇಜ್ ನೀಡುತ್ತವೆ.

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಹೈ ಎಂಡ್ ಮಾದರಿಯಲ್ಲಿ ಸ್ಪೋರ್ಟ್‌ಲೈನ್ ಮಾದರಿಯು ಉಳಿದ ಮೂರು ಮಾದರಿಗಿಂತಲೂ ವಿಭಿನ್ನವಾದ ವಿನ್ಯಾಸ ಮತ್ತು ಹೆಚ್ಚುವರಿ ಪರ್ಫಾಮೆನ್ಸ್‌ನೊಂದಿಗೆ ಪ್ರತಿ ಚಾರ್ಚ್‌ಗೆ 500 ಕಿ.ಮೀ ಅಧಿಕ ಮೈಲೇಜ್ ಹಿಂದಿರುಗಿಸಲಿದ್ದು, ಮೊದಲ ಮೂರು ಮಾದರಿಗಳಿಂತಲೂ ಹೈ ಎಂಡ್ ಮಾದರಿಯು ಹೆಚ್ಚಿನ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಎನ್ಯಾಕ್ ಸ್ಪೋರ್ಟ್‌ಲೈನ್ ಅನಾವರಣಗೊಳಿಸಿದ ಸ್ಕೋಡಾ

ಸ್ಪೋರ್ಟ್‌ಲೈನ್ ರೂಪಾಂತರವನ್ನು ವಿಶೇಷವಾಗಿ ಅಧಿಕ ಮಟ್ಟದ ಪ್ರೀಮಿಯಂ ಫೀಚರ್ಸ್, ಉತ್ತಮ ಪರ್ಫಾಮೆನ್ಸ್ ಜೊತೆಗೆ ಹೆಚ್ಚಿನ ಮಟ್ಟದ ಮೈಲೇಜ್‌ಗಾಗಿ ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಕಾರು ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Revealed New Enyaq Sportline IV Electric Crossover With Improved 500 Km Range. Read in Kannada.
Story first published: Friday, February 19, 2021, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X