Just In
- 1 hr ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 2 hrs ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 4 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗೆ ಕೊರೊನಾ
- News
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹಾಗೂ ಅಖಿಲೇಶ್ ಯಾದವ್ಗೆ ಕೊರೊನಾ
- Sports
ಐಪಿಎಲ್ 2021: ಅತಿ ದೊಡ್ಡ ಮೈಲಿಗಲ್ಲು ಮುಟ್ಟಲು ವಿರಾಟ್ ಕೊಹ್ಲಿ ಮತ್ತಷ್ಟು ಸನಿಹ
- Finance
ಸತತ 15ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
ಹೊಸ ಎಮಿಷನ್ ಜಾರಿ ನಂತರ ಬಿಎಸ್-6 ರ್ಯಾಪಿಡ್ ಸೆಡಾನ್ ಮಾದರಿಯ ಎಂಜಿನ್ ಆಯ್ಕೆಯಲ್ಲಿ ಹೊಸ ಬದಲಾವಣೆ ತಂದಿರುವ ಸ್ಕೋಡಾ ಕಂಪನಿಯು ಈ ವರ್ಷದ ಆರಂಭದಲ್ಲಿ ನ್ಯೂ ಜನರೇಷನ್ ಬಿಡುಗಡೆ ಮಾಡಬಹುದೆಂಬ ನೀರಿಕ್ಷೆಯಿತ್ತು. ಆದರೆ ನ್ಯೂ ಜನರೇಷನ್ ರ್ಯಾಪಿಡ್ ಬಿಡುಗಡೆ ಕುರಿತು ಸ್ಪಷ್ಟಪಡಿಸಿರುವ ಸ್ಕೋಡಾ ಕಂಪನಿಯು ಹೊಸ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಭಾರತದಲ್ಲಿ ರ್ಯಾಪಿಡ್ ಸೆಡಾನ್ ಮಾದರಿಯನ್ನು ಈ ಹಿಂದೆ 2011ರಲ್ಲಿ ಮೊದಲ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಾರಿಗೆ ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಇದುವರೆಗೂ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ. ಕಾಲ ಕಾಲಕ್ಕೆ ಕಾರಿನ ತಾಂತ್ರಿಕ ಅಂಶಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದ್ದರೂ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಇದುವರೆಗೂ ಬಿಡುಗಡೆ ಮಾಡದ ಸ್ಕೋಡಾ ಕಂಪನಿಯು ಹೊಸ ತಲೆಮಾರಿನ ರ್ಯಾಪಿಡ್ ಬಿಡುಗಡೆಯ ಯೋಜನೆ ಕೈಬಿಟ್ಟಿದೆ.

ಹೊಸ ತಲೆಮಾರಿನ ರ್ಯಾಪಿಡ್ ಮಾದರಿಯು 2021ರ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ ಎನ್ನುವ ಗ್ರಾಹಕರ ನೀರಿಕ್ಷೆಗೆ ಸ್ಕೋಡಾ ಕಂಪನಿಯು ನಿರಾಶೆ ಉಂಟುಮಾಡದ್ದು, ರ್ಯಾಪಿಡ್ ನ್ಯೂ ಜನರೇಷನ್ ಬದಲಾಗಿ ಮತ್ತೊಂದು ಹೊಚ್ಚ ಹೊಸ ಸೆಡಾನ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ತಿಳಿಸಿದೆ.

ಹಾಗೆಯೇ ಹೊಸ ಕಾರನ್ನು ಫೋಕ್ಸ್ವ್ಯಾಗನ್ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಸಿದ್ದಪಡಿಸಲಾದ ಎಂಕ್ಯೂಬಿ ಪ್ಲ್ಯಾಟ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ್ಯಾಪಿಡ್ ಮಾದರಿಗಿಂತಲೂ ಅತ್ಯುತ್ತಮ ಪ್ಲ್ಯಾಟ್ಫಾರ್ಮ್ ಮತ್ತು ಎಂಜಿನ್ ಪಡೆದುಕೊಳ್ಳುವ ಸುಳಿವು ನೀಡಲಾಗಿದೆ.

ಹೊಸ ಸೆಡಾನ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇರಲಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಸ್ಕೋಡಾ ಇಂಡಿಯಾ ಮುಖ್ಯಸ್ಥ ಜಾಕ್ ಹೊಲಿಸ್ ಅವರು, ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಎಂಕ್ಯೂಬಿ ಪ್ಲ್ಯಾಟ್ಫಾರ್ಮ್ ನಿರ್ಮಾಣವಾಗುತ್ತಿರುವ ಹೊಸ ಸೆಡಾನ್ ಕಾರು ಮಾದರಿಯು 2021ರ ಕೊನೆಯಲ್ಲಿ ಬಿಡುಗಡೆಯಾಗುವುದಾಗಿ ಮಾಹಿತಿ ನೀಡಲಾಗಿದ್ದು, ಹೊಸ ಕಾರಿನ ಮೂಲಕ ಹೋಂಡಾ ಸಿಟಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಹೊಸ ಕಾರು ಮಾದರಿ ಬಿಡುಗಡೆಯ ತನಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ರ್ಯಾಪಿಡ್ ಖರೀದಿಗೆ ಲಭ್ಯವಿರಲಿದ್ದು, ಹೊಸ ಸೆಡಾನ್ ಬಿಡುಗಡೆಯ ನಂತರ ರ್ಯಾಪಿಡ್ ಮಾರಾಟವು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಹೊಸ ಕಾರನ್ನು ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಮಾಹಿತಿ ಹೊರತಾಗಿ ಹೊಸ ಕಾರಿನ ಯಾವುದೇ ತಾಂತ್ರಿಕ ಅಂಶಗಳನ್ನು ಹಂಚಿಕೊಳ್ಳದ ಸ್ಕೋಡಾ ಕಂಪನಿಯು ರ್ಯಾಪಿಡ್ ಮಾದರಿಗಿಂತಲೂ ಹೆಚ್ಚು ಬಲಿಷ್ಠ ಮಾದರಿಯಾಗಿರಲಿದೆ ಎನ್ನುವ ಸುಳಿವು ನೀಡಿದ್ದಾರೆ.

ಇನ್ನು ಬಿಎಸ್-6 ಎಮಿಷನ್ನಿಂದಾಗಿ ರ್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೊಸ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

1.0-ಲೀಟರ್(999 ಸಿಸಿ) ಟಿಎಸ್ಐ ಟರ್ಬೊ ಪೆಟ್ರೋಲ್ ಮಾದರಿಯು ಉತ್ತಮ ಪರ್ಫಾಮೆನ್ಸ್ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ಗೆ ಮ್ಯಾನುವಲ್ ಮಾದರಿಯು ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು 16.24 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.
MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಹೊಸ ರ್ಯಾಪಿಡ್ ಕಾರಿನಲ್ಲಿ ಎಂಜಿನ್ ಬದಲಾವಣೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯೆಂತೆ ಮುಂದುವರಿಸಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 8-ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಸ್ಕಫ್ ಪ್ಲೇಟ್, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ವೀಲ್ಹ್, ಎಲ್ಇಡಿ ಲೈಟ್ಗಳು, ಲೆದರ್ ಸೀಟ್ಗಳು ಪ್ರಮುಖ ಆಕರ್ಷಣೆಯಾಗಿದೆ.

ಹಾಗೆಯೇ ಪ್ರಯಾಣಿಕ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, 4 ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ವ್ಯೂ ಕ್ಯಾಮೆರಾ ಮತ್ತು ಸೆನ್ಸಾರ್, ಬ್ರೇಕ್ ಅಸಿಸ್ಟ್ ಮತ್ತು 16-ಇಂಚಿನ ಅಲಾಯ್ ವೀಲ್ಹ್ನೊಂದಿಗೆ ಪ್ರಮುಖ ಆರು ಬಣ್ಣಗಳ ಆಯ್ಕೆ ಹೊಂದಿದ್ದರೂ ಕೂಡಾ ಪ್ರತಿ ಸ್ಪರ್ಧಿ ಮಾದರಿಗಳಿಗೆ ಹೋಲಿಕೆ ಮಾಡಿದರೆ ರ್ಯಾಪಿಡ್ ಸಾಕಷ್ಟು ಬದಲಾವಣೆಯ ಅವಶ್ಯಕತೆಯಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಇದೇ ಕಾರಣಕ್ಕೆ ರ್ಯಾಪಿಡ್ ಕಾರು ಮಾದರಿಯನ್ನು ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡುವ ಸಂಬಂಧ ಹೊಸ ಬ್ರಾಂಡ್ ಸೆಡಾನ್ ಮಾದರಿಯನ್ನೇ ಬಿಡುಗಡೆಗೆ ಮುಂದಾಗಿರುವ ಸ್ಕೋಡಾ ಕಂಪನಿಯು ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.