ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ದುಬಾರಿ ಇಂಧನ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲೂ ಇಂಧನ ಬಳಕೆಯನ್ನು ಕಡಿತಗೊಳಿಸಿ ಎಲೆಕ್ಟ್ರಿಕ್ ಮಾದರಿಗಳ ಬಳಕೆಯತ್ತ ಹೆಚ್ಚಿನ ಗಮನಹರಿಸಿದ್ದು, ವಾಹನ ಉದ್ಯಮದಲ್ಲೂ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಹೊಸ ಬದಲಾವಣೆಗೆ ಕಾರಣವಾಗಿವೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

2030ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಮಾತ್ರವೇ ಬಳಕೆ ಮಾಡುವ ನಿರ್ಣಯದೊಂದಿಗೆ ಹಲವಾರು ಹೊಸ ಬದಾವಣೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಕೃಷಿ ಚಟುವಟುವಟಿಕೆಗಳಲ್ಲೂ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಬಳಕೆಯು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಕೃಷಿ ಚಟುವಟಿಕೆಗಳನ್ನು ಲಾಭದಾಯಕಗೊಳಿಸುವತ್ತ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಈಗಾಗಲೇ ವಿವಿಧ ಟ್ರ್ಯಾಕ್ಟರ್ ಮಾದರಿಗಳನ್ನು ಎಲೆಕ್ಟ್ರಿಕ್ ಆವೃತ್ತಿಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಇದೀಗ ಇಂಟರ್‌ನ್ಯಾಷನಲ್ ಟ್ರ್ಯಾಕ್ಟರ್ಸ್ ಲಿಮಿಟೆಡ್ ಕಂಪನಿಯು ಸೊನಾಲಿಕಾ ಸಾಲಿಸ್ 5015 ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ ಮಾಡಿದೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ವಿವಿಧ ಕೃಷಿ ಚಟುವಟಿಕೆಗಳನ್ನು ಒಂದು ಮಾದರಿಯೊಂದಿಗೆ ನಿರ್ವಹಣೆ ಮಾಡಬಹುದಾದ ಟ್ರ್ಯಾಕ್ಟರ್ ಮಾದರಿ ಇದಾಗಿದ್ದು, ಹೈಬ್ರಿಡ್ ಎಂಜಿನ್‌ನೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆಯ ಮೂಲಕ ಹೆಚ್ಚಿನ ಮಟ್ಟದ ಲಾಭಾಂಶ ನೀರಿಕ್ಷೆ ಮಾಡಬಹುದಾಗಿದೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ 50 ಹೆಚ್‌ಪಿ ಪವರ್ ಹೊಂದಿರುವ ಸಾಲಿಸ್ 5015 ಹೈಬ್ರಿಡ್ ಟ್ರ್ಯಾಕ್ಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 7.21 ಲಕ್ಷ ಬೆಲೆ ಹೊಂದಿದ್ದು, ಮೂರು ವಿವಿಧ ಪ್ರತ್ಯೇಕ ಕೃಷಿ ಚಟುವಟಿಕೆಗಳನ್ನು ಒಂದೇ ಮಾದರಿಯ ಮೂಲಕ ನಿರ್ವಹಣಾ ಶಕ್ತಿ ಹೊಂದಿರುವುದಾಗಿ ಇಂಟರ್‌ನ್ಯಾಷನಲ್ ಟ್ರ್ಯಾಕ್ಟರ್ಸ್ ಲಿಮಿಟೆಡ್ ಕಂಪನಿಯು ಹೇಳಿಕೊಂಡಿದೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಸಾಲಿಸ್ 5015 ಹೈಬ್ರಿಡ್ ಟ್ರ್ಯಾಕ್ಟರ್ ಮಾದರಿಯ ಮತ್ತೊಂದು ಪ್ರಮುಖ ಫೀಚರ್ಸ್ ಅಂದರೆ ಅದು ಪವರ್ ಬೂಸ್ಟರ್ ಬಟನ್. ಈ ಮೂಲಕ ಟ್ರ್ಯಾಕ್ಟರ್ ಬಳಕೆಯ ಸಂದರ್ಭದಲ್ಲಿ ಹೆಚ್ಚಿನ ಮಟ್ಟದ ವೇಗವರ್ಧನೆಗಾಗಿ ಪವರ್ ಬೂಸ್ಟರ್ ಆಯ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಹಾಗೆಯೇ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ ಹೊಂದಿರುವ ಸಾಲಿಸ್ 5015 ಟ್ರ್ಯಾಕ್ಟರ್ ಮಾದರಿಯು ಸಿಕ್ರೊ ಕಂಟ್ರೊಲರ್ ಮೂಲಕ ನಿರಂತರ ವಿದ್ಯುತ್ ಪಸರಣ ಸೌಲಭ್ಯ ಹೊಂದಿದ್ದು, ಸ್ಟ್ಯಾಂಡರ್ಡ್ ಚಾರ್ಜರ್ ಸೌಲಭ್ಯದೊಂದಿಗೆ 3 ಗಂಟೆಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಹೊಸ ಟ್ರಾಕ್ಟರ್ ಸ್ವಯಂ-ಚಾರ್ಜಿಂಗ್ ಕಟ್-ಆಫ್ ಕಾರ್ಯವನ್ನು ಸಹ ಹೊಂದಿದ್ದು, ಅದು ಬ್ಯಾಟರಿಯ ದೀರ್ಘಾವಧಿಗೆ ಕಾರಣವಾಗುತ್ತದೆ. ಹೊಸ ಟ್ರ್ಯಾಕ್ಟರ್‌ನಲ್ಲಿ 'ಚಾರ್ಜಿಂಗ್ ಆನ್ ದಿ ಗೋ' ರೆಜೆನ್ ಚಾರ್ಜಿಂಗ್ ಸಿಸ್ಟಮ್ ಕೂಡಾ ಲಭ್ಯವಿದೆ.

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಸಾಲಿಸ್ 5015 ಹೈಬ್ರಿಡ್ ಮಾದರಿಯಲ್ಲಿ ಸ್ಮಾರ್ಟ್ ಎಲ್ಇಡಿ ಡಿಸ್ಪ್ಲೇ ಅನ್ನು ಸಹ ಹೊಂದಿದ್ದು, ಅದು ಬಳಕೆದಾರರಿಗೆ ಚಾರ್ಜಿಂಗ್ ಲಭ್ಯತೆ ಮಾಹಿತಿ ಸೇರಿದಂತೆ ಹಲವಾರು ತಾಂತ್ರಿಕ ಮಾಹಿತಿಗಳನ್ನು ಒಂದೇ ಸೂರಿನಡಿಯಲ್ಲಿ ಮಾಹಿತಿ ಒದಗಿಸುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ

ಇಂಟರ್‌ನ್ಯಾಷನಲ್ ಟ್ರ್ಯಾಕ್ಟರ್ಸ್ ಲಿಮಿಟೆಡ್ ಕಂಪನಿಯು ಹೊಸ ಹೈಬ್ರಿಡ್ ಟ್ರ್ಯಾಕ್ಟರ್ ಮಾದರಿಯನ್ನು ಜಪಾನಿನ ಪಾಲುದಾರ ಕಂಪನಿ ಯನ್ಮಾರ್ ಅಗ್ರಿಬ್ಯುಸಿನೆಸ್ ಕಂಪನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದು, ಸಾಲಿಸ್ ಯನ್ಮಾರ್ ಶ್ರೇಣಿಯ ಟ್ರಾಕ್ಟರ್ ಅನ್ನು ಐಟಿಎಲ್ ಕಂಪನಿಯು ಪಂಜಾಬ್‌ನಲ್ಲಿರುವ ಹೋಶಿಯಾರ್‌ಪುರದಲ್ಲಿರುವ ಸೊನಾಲಿಕಾ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಕೈಗೊಳ್ಳುತ್ತಿದೆ.

Most Read Articles

Kannada
English summary
Solis 5015 Hybrid Tractor Launched In India. Read in Kannada.
Story first published: Wednesday, April 14, 2021, 20:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X