ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ದಶಕಗಳ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಬಿಡುಗಡೆಯಾಗುತ್ತಿರುವ ಕಾರುಗಳು ಹೆಚ್ಚು ಅಡ್ವಾನ್ಸ್ ಆಗಿವೆ. ಈಗ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ವಿವಿಧ ಅತ್ಯಾಧುನಿಕ ಫೀಚರ್'ಗಳನ್ನು ಕಾಣಬಹುದು. ಈ ಫೀಚರ್'ಗಳು ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಹೆಚ್ಚು ನೆರವಾಗುತ್ತವೆ. ಈ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಆದರೆ ಕೆಲವು ಕಾರುಗಳಲ್ಲಿ ಅಗತ್ಯವಿಲ್ಲದಿದ್ದರೂ ಕೆಲವು ಫೀಚರ್'ಗಳನ್ನು ಒದಗಿಸಲಾಗಿದೆ. ಕಾರು ತಯಾರಕ ಕಂಪನಿಗಳು ಈ ಫೀಚರ್'ಗಳನ್ನು ನೀಡುವುದನ್ನು ತಪ್ಪಿಸಿದರೆ ಕಾರಿನ ಬೆಲೆ ಕೊಂಚ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಕಾರುಗಳಲ್ಲಿರುವ ಅನಗತ್ಯ ಫೀಚರ್'ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ನಕಲಿ ಪ್ಲಾಸ್ಟಿಕ್ ರೂಫ್ ರೇಲ್

ರೂಫ್ ರೇಲ್'ಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂಬುದು ನಮಗೆ ತಿಳಿದಿದೆ. ಕಾರುಗಳ ರೂಫ್ ಮೇಲೆ ಸಾಮಗ್ರಿಗಳನ್ನು ಸಾಗಿಸಲು ರೂಫ್ ರೇಲ್'ಗಳನ್ನು ಬಳಸಲಾಗುತ್ತದೆ. ಆದರೆ ಕೆಲವು ಕಂಪನಿಗಳು ತಮ್ಮ ಕಾರುಗಳಲ್ಲಿ ನಕಲಿ ಪ್ಲಾಸ್ಟಿಕ್ ರೂಫ್ ರೇಲ್ ಗಳನ್ನು ನೀಡುತ್ತವೆ. ಕಾರನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಹೀಗೆ ಮಾಡಲಾಗುತ್ತದೆ. ಈ ರೂಫ್ ರೇಲ್'ಗಳಿಂದ ಯಾವುದೇ ಪ್ರಯೋಜನವಿಲ್ಲ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ನಕಲಿ ಎಕ್ಸಾಸ್ಟ್ ಪೈಪ್ಸ್

ಕಾರುಗಳ ಆಕರ್ಷಣೆಯನ್ನು ಹೆಚ್ಚಿಸಲು ನಕಲಿ ಎಕ್ಸಾಸ್ಟ್ ಪೈಪ್ ಗಳನ್ನು ನೀಡಲಾಗುತ್ತದೆ. ಇವುಗಳಿಂದ ಯಾವುದೇ ಉಪಯೋಗವಿಲ್ಲ. ಕೆಲವು ಕಾರು ಕಂಪನಿಗಳು ತಮ್ಮ ಕಾರುಗಳು ಸುಂದರವಾಗಿ ಕಾಣಲಿ ಎಂದು ನಕಲಿ ಎಕ್ಸಾಸ್ಟ್ ಪೈಪ್ ಗಳನ್ನು ನೀಡುತ್ತವೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಸ್ಥಿರ ಹೆಡ್‌ರೆಸ್ಟ್‌ ಹೊಂದಿರುವ ಸೀಟುಗಳು

ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುವುದು ಕಾರು ತಯಾರಕ ಕಂಪನಿಗಳ ಪ್ರಮುಖ ಕರ್ತವ್ಯವಾಗಿದೆ. ಇದರ ಭಾಗವಾಗಿ, ಕಾರು ತಯಾರಕ ಕಂಪನಿಗಳು ಸ್ಥಿರವಾದ ಹೆಡ್‌ರೆಸ್ಟ್‌ ಹೊಂದಿರುವ ಸೀಟುಗಳನ್ನು ನೀಡುತ್ತವೆ. ಈ ಫೀಚರ್ ಅನ್ನು ಈಗ ಬಿಡುಗಡೆಯಾಗುತ್ತಿರುವ ಬಜೆಟ್ ಬೆಲೆಯ ಸಾಕಷ್ಟು ಕಾರುಗಳಲ್ಲಿ ಕಾಣಬಹುದು.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಆದರೆ ಸ್ಥಿರ ಹೆಡ್ ರೆಸ್ಟ್ ಇರುವ ಸೀಟುಗಳು ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುವುದಿಲ್ಲ ಎಂಬುದು ಸತ್ಯ. ಕಾರು ತಯಾರಕ ಕಂಪನಿಗಳು ಸ್ಟಾಂಡರ್ಡ್ ಹೆಡ್‌ರೆಸ್ಟ್‌ಗಳ ಬದಲು ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ನೀಡಬಹುದು. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಕಾಂಪ್ಯಾಕ್ಟ್ ಎಸ್‌ಯು‌ವಿಗಳಲ್ಲಿ 3 ನೇ ಸಾಲಿನ ಸೀಟುಗಳು

ಕಾಂಪ್ಯಾಕ್ಟ್ ಎಸ್‌ಯು‌ವಿಗಳಲ್ಲಿ 3 ನೇ ಸಾಲಿನಲ್ಲಿ ಸೀಟುಗಳನ್ನು ನೀಡುವುದು ಅನಗತ್ಯ ಸಂಗತಿಯಾಗಿದೆ. ಇದರಿಂದ ಮೂರನೇ ಸಾಲಿನಲ್ಲಿ ಲೆಗ್ ರೂಂ ಪ್ರಮಾಣ ಕಡಿಮೆಯಾಗುತ್ತದೆ. ಈ ಸಾಲಿನಲ್ಲಿರುವ ಸೀಟುಗಳು ಕಡಿಮೆ ಎತ್ತರವಿರುವವರಿಗೆ ಸೂಕ್ತವಾಗಿವೆ. ಕಡಿಮೆ ಎತ್ತರವನ್ನು ಹೊಂದಿರುವವರಿಗೆ 3 ನೇ ಸಾಲಿನ ಆಸನಗಳನ್ನು ಒದಗಿಸುವುದರಿಂದ ಕಾರಿನ ಒಟ್ಟಾರೆ ಜಾಗ ಕಡಿಮೆಯಾಗುತ್ತದೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಪಿಯಾನೋ ಬಣ್ಣದ ಫಲಕಗಳು

ಕೆಲವು ಕಾರುಗಳಲ್ಲಿ ವಿನಾ ಕಾರಣ ಪಿಯಾನೋ ಬಣ್ಣದ ಫಲಕಗಳನ್ನು ನೀಡಲಾಗುತ್ತದೆ. ಪಿಯಾನೋ ಬಣ್ಣದ ಫಲಕಗಳನ್ನು ಹೊಂದಿರುವ ಕಾರುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದರ ಬದಲು ಮ್ಯಾಟ್ ಫಿನಿಶ್ ಪ್ಯಾನಲ್'ಗಳನ್ನು ನೀಡಬಹುದು.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಇನ್ನು ಈಗ ಬಿಡುಗಡೆಯಾಗುತ್ತಿರುವ Tata Nexon, Hyundai Venue, Kia Seltos, BMW X 3, Mercedes Benz ನಂತಹ ಕಾರುಗಳಲ್ಲಿ ಒಂದು ಸಾಮಾನ್ಯ ಸಂಗತಿಯನ್ನು ಗಮನಿಸಬಹುದು. ಈ ಸಾಮಾನ್ಯ ಸಂಗತಿ ಪ್ಲಾಸ್ಟಿಕ್ ಕ್ಲಾಡಿಂಗ್ ಆಗಿದೆ. ಈ ಕಾರುಗಳಲ್ಲಿ ಮಾತ್ರವಲ್ಲದೆ ಈಗ ಬಹುತೇಕ ಎಲ್ಲಾ ಎಸ್‌ಯು‌ವಿಗಳಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ನೀಡುವುದು ಸಾಮಾನ್ಯವಾಗಿದೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಸಾಮಾನ್ಯವಾಗಿ ಜಗತ್ತಿನ ಪ್ರತಿಯೊಂದು ದೇಶವೂ ಒಂದೊಂದು ರೀತಿಯ ಆಟೋಮೊಬೈಲ್ ಟ್ರೆಂಡ್‌ಗಳನ್ನು ಹೊಂದಿರುತ್ತದೆ. ಯುರೋಪಿನ ಗ್ರಾಹಕರು ಕಾರುಗಳ ಐಷಾರಾಮಿ ಫೀಚರ್ ಗಳಿಗೆ ಹೆಚ್ಚು ಗಮನ ನೀಡುತ್ತಾರೆ. ಇನ್ನು ಭಾರತೀಯ ಗ್ರಾಹಕರು ಮೈಲೇಜ್ ಜೊತೆಗೆ ಕಾರುಗಳ ವಿನ್ಯಾಸ ಹಾಗೂ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಕಾರುಗಳನ್ನು ಆಕರ್ಷಕವಾಗಿಸಲು ಕಾರು ತಯಾರಕ ಕಂಪನಿಗಳು ವಿವಿಧ ತಂತ್ರಗಳನ್ನು ಬಳಸುತ್ತವೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಇವುಗಳಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಸಹ ಒಂದು. ಈ ಪ್ಲಾಸ್ಟಿಕ್ ಕ್ಲಾಡಿಂಗ್ ಗಳನ್ನು ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಎಲ್ಲಾ ಎಸ್‌ಯು‌ವಿಗಳ ಸೈಡ್ ನಲ್ಲಿ ನೀಡಲಾಗುತ್ತದೆ. ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಯಾವ ಕಾರಣಕ್ಕೆ ನೀಡಲಾಗುತ್ತದೆ. ಇವುಗಳಿಂದಾಗುವ ಅನುಕೂಲಗಳೇನು, ಅನಾನುಕೂಲಗಳೇನು ಎಂಬುದನ್ನು ನೋಡುವುದಾದರೆ...

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ವಿವಿಧ ಆಕಾರ ಹಾಗೂ ಗಾತ್ರಗಳನ್ನು ಹೊಂದಿರುತ್ತವೆ. ಕಾರುಗಳನ್ನು ಆಕರ್ಷಕವಾಗಿಸಲು ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ನೀಡಲಾಗುತ್ತದೆ. ಕಾರುಗಳು ನಿಜವಾಗಿಯೂ ಇರುವುದಕ್ಕಿಂತ ಹೆಚ್ಚು ಶಕ್ತಿಯುತವಾಗಿ ಹಾಗೂ ಹೆಚ್ಚು ಬಾಳಿಕೆ ಬರುವಂತೆ ಮಾಡಲು ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಬಳಸಲಾಗುತ್ತದೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಪ್ಲಾಸ್ಟಿಕ್ ಕ್ಲಾಡಿಂಗ್‌ಗಳು ಕಾರಿನ ಉತ್ಪಾದನಾ ವೆಚ್ಚವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ನೆರವಾಗುತ್ತವೆ. ಪ್ಲಾಸ್ಟಿಕ್ ಕ್ಲಾಡಿಂಗ್‌ಗಳ ಬೆಲೆ ಕಡಿಮೆಯಾದ ಕಾರಣ ಕಾರುಗಳ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. ಇದರಿಂದ ಗ್ರಾಹಕರು ಕಾರು ಖರೀದಿ ವೇಳೆ ಹೆಚ್ಚು ಹಣ ನೀಡುವುದು ತಪ್ಪುತ್ತದೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಹಾಗೆಯೇ ಕಾರು ರಗಡ್ ಆಗಿ ಕಾಣಿಸುತ್ತದೆ. ಕಾರು ತಯಾರಕ ಕಂಪನಿಗಳು ಕಾರುಗಳ ಹೊರಭಾಗದಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಒದಗಿಸುವ ಪ್ರಯೋಜನಗಳನ್ನು ನಿಧಾನವಾಗಿ ಕಂಡು ಕೊಳ್ಳುತ್ತಿವೆ. ಸೆಡಾನ್ ಮಾದರಿಯ ಕಾರುಗಳಲ್ಲಿಯೂ ಈ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳನ್ನು ಗಮನಿಸಬಹುದು. ಪ್ಲಾಸ್ಟಿಕ್ ಕ್ಲಾಡಿಂಗ್ ಅಳವಡಿಸುವುದರಿಂದ ಹಲವಾರು ಪ್ರಯೋಜನಗಳಿವೆ.

ಆಧುನಿಕ ಕಾರುಗಳಲ್ಲಿ ನೀಡಲಾಗುವ ಕೆಲವು ಅನಗತ್ಯ ಫೀಚರ್'ಗಳಿವು

ಮೊದಲ ಅನುಕೂಲವೆಂದರೆ ಕಡಿಮೆ ವೆಚ್ಚದಲ್ಲಿ ಕಾರು ಆಕರ್ಷಕವಾಗಿ ಕಾಣಿಸುತ್ತದೆ. ಹೊರಭಾಗದಲ್ಲಿ ಅಳವಡಿಸಲಾಗಿರುವ ಪ್ಲಾಸ್ಟಿಕ್ ಕ್ಲಾಡಿಂಗ್ ಕಾರಿಗೆ ಒರಟು ಲುಕ್ ನೀಡುವುದರ ಜೊತೆಗೆ ಕಾರುಗಳನ್ನು ಮೌಲ್ಯಯುತವಾಗಿಸುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Some useless features given in modern cars details
Story first published: Saturday, November 27, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X