ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ಕಳೆದ ವರ್ಷದ ಜನವರಿಯಲ್ಲಿ ನಡೆದ 2020ರ ಕಸ್ಟಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ (ಸಿಇಎಸ್) ಸೋನಿ ಕಾರ್ಪೊರೇಷನ್ ವಿಷನ್-ಎಸ್ ಎಂಬ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿತ್ತು. ಈ ಹೊಸ ಸೋನಿ ಕಾನ್ಸೆಪ್ಟ್ ಕಾರು ಹಲವಾರು ಹೊಸ ಫೀಚರ್ ಗಳನ್ನು ಮತ್ತು ವಿಭಿನ್ನ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ವಿಷನ್-ಎಸ್ ಕಾನ್ಸೆಪ್ಟ್ ಕಾರು ಮೊದಲ ಬಾರಿಗೆ ಮೂಲಮಾದರಿಯ ರೂಪದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸಲು ಪ್ರಾರಂಭಿಸಿದೆ. ಜಪಾನಿನ ಕಂಪನಿಯು ಬಿಡುಗಡೆ ಮಾಡಿದ ಹೊಸ ವೀಡಿಯೋದಲ್ಲಿ ಆಸ್ಟ್ರಿಯಾದ ಎಂಜಿನಿಯರ್‌ಗಳು ನೋಂದಣಿ ಫಲಕಗಳನ್ನು ಒಳಗೊಂಡ ಒಂದು ಮಾದರಿ ಮರೆಮಾಚುವ ಶೈಲಿಯ ಹೊದಿಕೆಯೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದೆ. ಸೋನಿಯ ಮೊದಲ ಕಾರಿನಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಈ ವೀಡಿಯೋದಲ್ಲಿ ಕೆಲವು ಮಾಹಿತಿಗಳು ತಿಳಿಯಬಹುದಾಗಿದೆ.

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಇದು 33 ವಿಭಿನ್ನ ಸೆನ್ಸಾರ್ ಗಳನ್ನು ಒಳಗೊಂಡಿದೆ. ಅಲ್ಲದೇ ಈ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಲೆವೆಲ್ 2 ಆಟೋನೊಮಸ್ ಡ್ರೈವಿಂಗ್, 360 ರಿಯಾಲಿಟಿ ಆಡಿಯೊ ಟೆಕ್, ಕ್ಯಾಬಿನ್ ಒಳಗೆ ವೈಡ್-ಸ್ಕ್ರೀನ್ ಡಿಸ್ ಪ್ಲೇ ಮತ್ತು ಹೆಚ್ಚಿನದನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ಇನ್ನು ಸೋನಿ ಕಂಪನಿಯು ವಿಷನ್-ಎಸ್ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುವ ಸಲುವಾಗಿ ಬ್ಲ್ಯಾಕ್‌ಬೆರಿ, ಬಾಷ್, ಎನ್‌ವಿಡಿಯಾ, ಕಾಂಟಿನೆಂಟಲ್ ಮತ್ತು ಕ್ವಾಲ್ಕಾಮ್‌ನಂತಹ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಆದ್ದರಿಂದ ಇವಿ ಕಾನ್ಸೆಪ್ಟ್ ಈ ಕಂಪನಿಗಳಿಂದ ತಂತ್ರಜ್ಞಾನಗಳನ್ನು ಸಹ ಪಡೆಯುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ಇನ್ನು ಹೊಸ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನಲಿ ಆರ್ಟಿಫಿಷಿಯಲ್ ಇಂಟಿಲಿಜೆಂಟ್, ಟೆಲಿಕಮ್ಯೂನಿಕೇಷನ್ ಮತ್ತು ಕೌಲ್ಡ್ ತಂತ್ರಜ್ಞಾನವನ್ನು ಸಹ ಹೊಂದಿದೆ, ಇವುಗಳೆಲ್ಲವೂ ದೊಡ್ಡ ಪನೋರಮಿಕ್ ಟಚ್‌ಸ್ಕ್ರೀನ್ ವ್ಯವಸ್ಥೆಯ ಸಹಾಯದಿಂದ ಬಳಸಬಹುದು.

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರು ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ. ಇದು ಹಲವಾರು ಮನರಂಜನಾ ಫೀಚರ್ ಗಳನ್ನು ಒಳಗೊಂಡಿದೆ. ಈ ವಿಷನ್-ಎಸ್ ಕಾನ್ಸೆಪ್ಟ್ ಕಾರು ಇನ್ನು ಕೂಡ ಟೆಸ್ಟಿಂಗ್ ಹಂತದಲ್ಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸೋನಿ ಈ ಹಿಂದೆ ಎಲೆಕ್ಟ್ರಿಕ್ ಸೆಡಾನ್‌ನ ಕೆಲವು ಸ್ಪೆಕ್ಸ್‌ಗಳನ್ನು ಬಹಿರಂಗಪಡಿಸಿದೆ, ಇದರಲ್ಲಿ ಎರಡು 200 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್‌ಗಳಿವೆ, ಅದು ಒಟ್ಟಾಗಿ 268 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು

ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಕೇವಲ 4.8 ಸೆಕೆಂಡುಗಳಲ್ಲಿ 0 ದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಹೊಸ ಸೋನಿ ವಿಷನ್-ಎಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು 240 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
Sony Vision-S EV Road Test Begins. Read In Kannada.
Story first published: Friday, January 15, 2021, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X