ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ಕೋವಿಡ್ -19 ಬಿಕ್ಕಟ್ಟಿನ ನಡುವೆಯೂ ಹೊರತಾಗಿಯೂ 2020ರಲ್ಲಿ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಅತಿ ಹೆಚ್ಚು ವಾಹನಗಳನ್ನು ಆಮದು ಮಾಡಿಕೊಳ್ಳಲಾಗಿದೆ. ವಾಹನ ಮಾರುಕಟ್ಟೆಯ ಬಗೆಗಿನ ಇತ್ತೀಚಿನ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಆಟೋಮೋಟಿವ್ ಇಂಡಸ್ಟ್ರಿ ರಫ್ತು ಮಂಡಳಿಯ ಇತ್ತೀಚಿನ ಆಟೋಮೋಟಿವ್ ರಫ್ತು ಕೈಪಿಡಿ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.ವಿಶ್ವದ ಅನೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಭಾರತವನ್ನು ಪ್ರವೇಶ ವರ್ಗವಾಗಿ ಹಾಗೂ ಸಣ್ಣ ವಾಹನಗಳ ತಯಾರಿಕಾ ಕೇಂದ್ರವಾಗಿ ಮಾಡಿಕೊಂಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಆಮದು ಮಾಡಿಕೊಳ್ಳುವ ಹೆಚ್ಚಿನ ವಾಹನಗಳು ಈ ವರ್ಗಕ್ಕೆ ಸೇರಿವೆ. ಫೋಕ್ಸ್‌ವ್ಯಾಗನ್‌ನ ಪೊಲೊ ಈ ವಿಭಾಗದಲ್ಲಿರುವ ಸಣ್ಣ ಕಾರು. ಈ ಕಾರ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ 2020ರಿಂದ ಉತ್ಪಾದಿಸಲಾಗುತ್ತಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ವರದಿಗಳ ಪ್ರಕಾರ, 2020ರಲ್ಲಿ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ 87,953 ಯುನಿಟ್ ವಾಹನಗಳನ್ನು ರಫ್ತು ಮಾಡಲಾಗಿದೆ. ಈ ಪ್ರಮಾಣವು ದಕ್ಷಿಣ ಆಫ್ರಿಕಾ ದೇಶವು ಆಮದು ಮಾಡಿಕೊಳ್ಳುವ ಒಟ್ಟು ಪ್ರಯಾಣಿಕ ಕಾರುಗಳು ಹಾಗೂ ಲಘು ವಾಣಿಜ್ಯ ವಾಹನಗಳ ಶೇ 43.2ರಷ್ಟಾಗಿದೆ.

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ಆದರೆ ಈ ಅವಧಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಮಾರಾಟವಾದ 10 ಕಂಪನಿಗಳಲ್ಲಿ 9 ಸ್ಥಳೀಯ ಕಂಪನಿಗಳ ವಾಹನಗಳಿವೆ. ಅಲ್ಲಿನ ಜನರು ಪಿಕಪ್ ವಾಹನಗಳನ್ನು ಚಾಲನೆ ಮಾಡಲು ಬಯಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ಇದು ಕಮರ್ಷಿಯಲ್ ಹಾಗೂ ದೂರ ಬಳಕೆಯ ವಾಹನಗಳನ್ನು ಒಳಗೊಂಡಿದೆ. ಇದು ನಿಜಕ್ಕೂ ಒಳ್ಳೆಯ ಸುದ್ದಿ ಎಂದು ದಕ್ಷಿಣ ಆಫ್ರಿಕಾದ ಮಹೀಂದ್ರಾ ಸಿಇಒ ರಾಜೇಶ್ ಗುಪ್ತಾ ಹೇಳಿದ್ದಾರೆ.

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸಂಬಂಧಗಳು ಗಾಢವಾಗಿ, ಬಲಗೊಳ್ಳುತ್ತಿವೆ ಎಂದು ಅವರು ಹೇಳಿದರು. ಉಭಯ ದೇಶಗಳ ನಡುವೆ ಪರಸ್ಪರ ವ್ಯಾಪಾರ ಹೆಚ್ಚಾಗುತ್ತಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಭಾರತದಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಆಮದು ಮಾಡಿಕೊಂಡ ದಕ್ಷಿಣ ಆಫ್ರಿಕಾ

ಮಾತ್ರವಲ್ಲದೇ ಭಾರತೀಯ ವಾಹನಗಳನ್ನು ದಕ್ಷಿಣ ಆಫ್ರಿಕಾದಿಂದ ಆಫ್ರಿಕಾ ಖಂಡದ ಇತರ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ. ಮಹೀಂದ್ರಾ ಕಂಪನಿಯ ಪಿಕ್-ಅಪ್ ವಾಹನಗಳ ಮಾರಾಟವು ಸ್ಥಳೀಯ ಮಾರುಕಟ್ಟೆಯಲ್ಲಿ ಮೂರು ವರ್ಷಗಳಿಂದ ವೇಗವಾಗಿ ಸಾಗುತ್ತಿದೆ ಎಂದು ಅವರು ಹೇಳಿದರು.

Most Read Articles

Kannada
English summary
South Africa imports more Vehicles from India. Read in Kannada.
Story first published: Monday, May 10, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X