ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ತನ್ನ ಹೊಸ ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಐಷಾರಾಮಿ ಬಿಎಂಡಬ್ಲ್ಯು ಕಾರು ಬಿಡುಗಡೆಯಾದ ದಿನವೇ ಸೋಲ್ಡ್ ಔಟ್ ಆಗಿತ್ತು.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಇದೀಗ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಅನ್ನು ಡೀಲರುಗಳು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಆನ್‌ಲೈನ್ ಬುಕಿಂಗ್ ಶೀಘ್ರದಲ್ಲೇ ತೆರೆಯುವ ನಿರೀಕ್ಷೆಯಿದೆ. ಎರಡನೇ ಬ್ಯಾಚ್ ಕಾರುಗಳು 50 ಯುನಿಟ್ ಗಳಿಗೆ ಸೀಮಿತವಾಗಿರಬಹುದು. ಈ ಕಾರಿನ ವಿತರಣೆಯನ್ನು ಈ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್‌ ತಿಂಗಳಿನಲ್ಲಿ ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಈ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನಲ್ಲಿ ಪವರ್ ಫುಲ್ 3.0-ಲೀಟರ್, ಆರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ ಮತ್ತು ಆಲ್-ವ್ಹೀಲ್ ಡ್ರೈವ್ ಸೆಟಪ್ ಒಳಗೊಂಡಿದೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಈ ಎಂಜಿನ್ 87 ಬಿಹೆಚ್‌ಪಿ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಐಷಾರಾಮಿ ಬಿಎಂಡಬ್ಲ್ಯು ಕಾರು ಕೇವಲ 4.4 ಸೆಕೆಂಡುಗಳಲ್ಲಿ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಈ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನಲ್ಲಿ ಎಂ-ಸ್ಪೆಸಿಫಿಕ್ ಚಾಸಿಸ್ ಟ್ಯೂನಿಂಗ್, ಬಿಎಂಡಬ್ಲ್ಯು ಎಕ್ಸ್‌ಡ್ರೈವ್ ಆಲ್-ವ್ಹೀಲ್ ಡ್ರೈವ್ ಮತ್ತು ಎಂ ಸ್ಪೋರ್ಟ್ ರಿಯರ್ ಡಿಫರೆನ್ಷಿಯಲ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಐಷಾರಾಮಿ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಗ್ರೇಸಿವ್ ಮತ್ತು ನಯವಾದ ಹೆಡ್‌ಲೈಟ್‌ಗಳು ಮತ್ತು ಮಸ್ಕಲರ್ ಬಂಪರ್ ಅನ್ನು ಹೊಂದಿದೆ. ಈ ಕಾರಿನಲ್ಲಿ 18 ಇಂಚಿನ ವ್ಹೀಲ್ ಗಳನ್ನು ನೀಡಿದೆ. ಇದರೊಂದಿಗೆ 19 ಇಂಚಿನ ವ್ಹೀಲ್ ಗಳ ಆಯ್ಕೆಯನ್ನು ನೀಡಿದೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಇನ್ನು ಈ ಕಾರಿನ ಸೈಡ್ ಪ್ರೊಫೈಲ್ ಉದ್ದಕೂ ಅಗ್ರೇಸಿವ್ ಬಾಡಿ ಲೈನ್ ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್‌ಲೈಟ್‌ಗಳನ್ನೂ ಸಹ ಒಳಗೊಂಡಿದೆ. ಇದು ಡ್ಯುಯಲ್ ಔಟ್ ಲೆಟ್ ಗಳೊಂದಿಗೆ ಎಂ ಸ್ಪೋರ್ಟ್ ಎಕ್ಸಾಸ್ಟ್ ಸಹ ಹೊಂದಿದೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಇಂಟಿರಿಯರ್ ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಹೊಂದಿರುವ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಆರಂಭ

ಈ ಕಾರಿನ ಮೂರು ಜೋನ್ ಕ್ಲೈಮೇಟ್ ಕಂಟ್ರೋಲ್, ಅಂಬಿಯೆಟ್ ಲೈಟಿಂಗ್, ಕನೆಕ್ಟೆಡ್ ಪ್ಯಾಕೇಜ್ ಪ್ಲಸ್ ಜೊತೆಗೆ ರಿಯಲ್-ಟೈಮ್ ಟ್ರಾಫಿಕ್ ಮಾಹಿತಿ, ರಿಮೋಟ್ ಸರ್ವೀಸಸ್, ಕನ್ಸೈರ್ಜ್ ಸರ್ವೀಸಸ್ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ 8.8-ಇಂಚಿನ ಕಂಟ್ರೋಲ್ ಡಿಸ್ ಪ್ಲೇಯನ್ನು ಅನ್ನು ನೀಡಲಾಗಿದೆ.

Most Read Articles

Kannada
English summary
Bookings For The Next Batch Of BMW M340i xDrive Cars Opens. Read In Kannada.
Story first published: Wednesday, June 23, 2021, 21:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X