ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಭಾಗಶಃ ಲಾಕ್ಡೌನ್, ಕರ್ಫ್ಯೂ ವಿಧಿಸಲಾಗುತ್ತಿದ್ದು, ವೈಸರ್ ಭೀತಿಯಿಂದಾಗಿ ಜನಸಾಮಾನ್ಯರು ಹಲವಾರು ಸುರಕ್ಷಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ.

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚುತ್ತಿದ್ದು, ಹೆಲ್ಮೆಟ್ ತಯಾರಿಕೆ ಕಂಪನಿಯಾದ ಸ್ಟೀಲ್‌ಬರ್ಡ್ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ವಿವಿಧ ಮಾದರಿಯ ಹಲವು ಫೇಸ್-ಶೀಲ್ಡ್‌ಗಳನ್ನು ಮಾರಾಟ ಮಾಡುತ್ತಿದೆ.

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಒಟ್ಟು 8 ಮಾದರಿಯ ಫೇಸ್‌-ಶೀಲ್ಡ್‌ಗಳನ್ನು ಮಾರಾಟ ಮಾಡುತ್ತಿದ್ದು, ದಿನಂಪ್ರತಿ ಸುಮಾರು 6 ಸಾವಿರ ಯನಿಟ್ ಮಾರಾಟಗೊಳ್ಳುತ್ತಿದೆ. ಸುರಕ್ಷತೆಯ ದೃಷ್ಠಿಯಿಂದ ಹೊಸ ಫೇಸ್-ಶೀಲ್ಡ್‌ಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿರುವ ಕಂಪನಿಯು ಕೋವಿಡ್ ಆರಂಭದಲ್ಲಿ ದಿನಂಪ್ರತಿ 10 ಸಾವಿರ ಯುನಿಟ್ ಮಾರಾಟ ಮಾಡಿತ್ತು.

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಮೊದಲ ಅಲೆಯು ತಗ್ಗಿದ ನಂತರ ಫೇಸ್-ಶೀಲ್ಡ್ ಉತ್ಪಾದನೆಯನ್ನು ತಗ್ಗಿಸಿದ್ದ ಕಂಪನಿಯು ಇದೀಗ ಮತ್ತೆ ದಿನಂಪ್ರತಿ 10 ಸಾವಿರ ಯುನಿಟ್ ಉತತ್ಪಾದನೆ ಕೈಗೊಳ್ಳುತ್ತಿದ್ದು, ಕೇವಲ ಮಾರಾಟಕ್ಕಾಗಿ ಮಾತ್ರವಲ್ಲ ಅಗತ್ಯವಿರುವ ಕಡೆಗಳಲ್ಲಿ ಉಚಿತವಾಗಿಯೂ ಸಹ ಫೇಸ್‌ಶೀಲ್ಡ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಕಂಪನಿಯು ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಫೇಸ್-ಶೀಲ್ಡ್‌ಗಳನ್ನು ವಿನ್ಯಾಸಗೊಳಿಸಿದ್ದು, ಸಾಮಾನ್ಯ ಜನರು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಕೋವಿಡ್ ವಾರಿಯರ್ಸ್‌ಗಳಾದ ಪೋಲಿಸರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೌರ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಮಾದರಿಯ ವಿನ್ಯಾಸವುಳ್ಳ ಫೇಸ್-ಶೀಲ್ಡ್ ಸಿದ್ದಪಡಿಸಲಾಗುತ್ತಿದೆ.

MOST READ: ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನಗಳ ಸಂಚಾರಕ್ಕೆ ಏನೆಲ್ಲಾ ಹೊಸ ರೂಲ್ಸ್?

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಸ್ಟೀಲ್‌ಬರ್ಡ್ ಕಂಪನಿಯು ಇತ್ತೀಚೆಗೆ ಶಾಲಾ ಮಕ್ಕಳಿಗೂ ಕೂಡಾ ವಿವಿಧ ಮಾದರಿಯ ಫೇಸ್-ಶೀಲ್ಡ್ ಪರಿಚಯಿಸಿದ್ದು, ಹಿಮಾಚಲಪ್ರದೇಶದ ಬದ್ದಿಯಲ್ಲಿರುವ ತನ್ನ ಹೊಸ ಹೆಲ್ಮೆಟ್ ಉತ್ಪಾದನಾ ಘಟಕದಲ್ಲಿ ಸ್ಟೀಲ್‌ಬರ್ಡ್‌ ಫೇಸ್-ಶೀಲ್ಡ್‌ಗಳನ್ನು ತಯಾರಿಸಲಾಗುತ್ತಿದೆ.

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಸ್ಟೀಲ್‌ಬರ್ಡ್‌ ಹೊಸ ಫೇಸ್-ಶೀಲ್ಡ್‌ಗಳಲ್ಲಿ ಹ್ಯಾಂಡ್ಸ್ ಫ್ರೀ ಮಾದರಿಗಳು ಸಹ ಖರೀದಿಗೆ ಲಭ್ಯವಿದ್ದು, ಸುಲಭವಾಗಿ ಬಳಕೆ ಮಾಡಲು ಮತ್ತು ಸುಲಭವಾಗಿ ಸ್ವಚವಾಗಿಸಲು ಅನುಕೂಲಕರವಾಗಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಕೋವಿಡ್ ಅಬ್ಬರ: ಸ್ಟೀಲ್‌ಬರ್ಡ್ ಫೇಸ್-ಶೀಲ್ಡ್‌ಗಳಿಗೆ ಭರ್ಜರಿ ಬೇಡಿಕೆ

ಹೊಸ ಫೇಸ್-ಶೀಲ್ಡ್ ವಿವಿಧ ಮಾದರಿಯ ವಿನ್ಯಾಸದೊಂದಿಗೆ ಉತ್ತಮ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಕಂಪನಿಯು ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಉಚಿತವಾಗಿ ಫೇಸ್‌-ಶೀಲ್ಡ್ ಮತ್ತು ಹ್ಯಾಂಡ್ ಸ್ಯಾನಿಟೈಜ್ ವಿತರಣೆ ಮಾಡಿದೆ.

Most Read Articles

Kannada
English summary
Steelbird Face-Shield Daily Sales Crosses 6000 Units. Read in Kannada.
Story first published: Tuesday, April 20, 2021, 23:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X