ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಭಾರತ ಸೇರಿದಂತೆ ವಿಶ್ವದಲ್ಲೇ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಬಹುತೇಕರು ಎಲೆಕ್ಟ್ರಿಕ್ ಕಾರು ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಹಲವಾರು ಜನಪ್ರಿಯ ಕಾರು ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ಹೊಸ ಪ್ಯೂರ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಹೊಸ ಎಲೆಕ್ಟ್ರಿಕ್ ಕಾರು 2023 ರಲ್ಲಿ ಬಿಡುಗಡೆಯಾಗಬಹುದೆಂದು ವರದಿಗಳಾಗಿದೆ. ಇದು ಕ್ರಾಸ್ಒವರ್ ವಿನ್ಯಾಸವನ್ನು ಹೊಂದಿರುವ ಎ-ಸೆಗ್ಮೆಂಟ್ ಸಣ್ಣ ಕಾರು ಆಗಿರುತ್ತದೆ. ಹೊಸ ಟೂ ವ್ಹೀಲ್ ಡ್ರೈವ್ ಮಾದರಿಯಾಗಿರುತ್ತದೆ. ಇದು ಸಿಂಗಲ್ ಚಾರ್ಜ್ ನಲ್ಲಿ ಅಧಿಕ ರೇಂಜ್ ಅನ್ನು ನೀಡುತ್ತದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಈ ಎಲೆಕ್ಟ್ರಿಕ್ ಕಾರು ಅತ್ಯಾಧುನಿಕ ಪೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ಆದರೆ ಸುಜುಕಿ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರಿನ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗ ಪಡಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬೇಕಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಇನ್ನು ಬಿ-ಸೆಗ್ಮೆಂಟ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2024ರಲ್ಲಿ ಪರಿಚಯಿಸಲಾಗುತ್ತದೆ. ಇದು ಹೆಚ್ಚಿನ ರೇಂಜ್ ಹೊಂದಿರುವ ಕಾಂಪ್ಯಾಕ್ಟ್ ಆಲ್-ವ್ಹೀಲ್-ಡ್ರೈವ್ ವಾಹನವಾಗಿ ಮಾರಾಟವಾಗಲಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಇನ್ನು ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಅನ್ನು 2023 ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ವರದಿಯಾದೆ. ಇನ್ನು ಸುಜುಕಿ ತನ್ನ ಎಸ್-ಕ್ರಾಸ್ ಕ್ರಾಸ್ಒವರ್ ಮಾದರಿಯನ್ನು ಹೊಸ ರೂಪದಲ್ಲಿ ಮುಂದಿನ ವರ್ಷದಲ್ಲಿ ಪರಿಚಯಿಸಬಹುದು.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಹೊಸ ಎಸ್-ಕ್ರಾಸ್ ಹೊಸ ಮೈಲ್ಡ್ ಹೈಬ್ರಿಡ್ ಸಿಸ್ಟಂ ನೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ. ಇದು 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಹೊಸ ಸ್ಟಾರ್ಟರ್ ಜನರೇಟರ್ ಹೊಂದಿದ್ದು, ಇದು ಎಲೆಕ್ಟ್ರಿಕ್ ಮೋಟರ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಕ್ರಾಸ್ಒವರ್ ಮಾದರಿಯು ಮೈಲ್ಡ್ ಹೈಬ್ರಿಡ್ ಸಿಸ್ಟಂ 8-ವೋಲ್ಟ್ ಅನ್ನು ಹೊಂದಿರುತ್ತದೆ, ಇದು ಎಲೆಕ್ಟ್ರಿಕ್ ಮೋಟರ್ ಗ್ಯಾಸೋಲಿನ್ ಎಂಜಿನ್'ಗೆ ಹೆಚ್ಚಿನ ಬೆಂಬಲವನ್ನು ನೀಡುತ್ತದೆ. ಸುಜುಕಿ ಎಸ್-ಕ್ರಾಸ್ ಆಲ್-ವ್ಹೀಲ್-ಡ್ರೈವ್ ಫುಲ್ ಹೈಬ್ರಿಡ್ ಸಿಸ್ಟಂ ಪಡೆಯಲಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

2024ರಲ್ಲಿ ಸುಜುಕಿ ನ್ಯೂ ಜನರೇಷನ್ ವಿಟಾರಾ ಎಸ್‌ಯುವಿಯನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ. ಇದು ಪ್ಲಗ್-ಇನ್ ಹೈಬ್ರಿಡ್ ಡ್ರೈವ್ (ಪಿಹೆಚ್‌ಇವಿ) ಯೊಂದಿಗೆ ಬರಲಿದ್ದು, ಇದು ವಿಟಾರಾವನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸುಜುಕಿ

ಸುಜುಕಿ 2022 ರಲ್ಲಿ ಜಿಮ್ನಿ ಆಫ್-ರೋಡರ್ ಲಾಂಗ್ ವ್ಹೀಲ್ ಬೇಸ್ ಎಸ್‍ಯುವಿಯನ್ನು ಪರಿಚಯಿಸಲಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಕಂಪನಿಯು 2024 ರಲ್ಲಿ ಸಮಗ್ರವಾಗಿ ಪರಿಷ್ಕೃತ ಜಿಮ್ನಿಯನ್ನು ಪರಿಚಯಿಸುತ್ತದೆ ಎಂದು ಹೇಳಲಾಗುತ್ತಿದೆ.

Most Read Articles

Kannada
English summary
Suzuki’s First Pure Electric Crossover To Debut. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X