ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳಾಗಿದೆ. ಈ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಹೊಸ ಸುಜುಕಿ ಎಸ್-ಕ್ರಾಸ್ ಕಾರು ಮುಂದಿನ ವರ್ಷ ಯುರೋಪಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಎಸ್-ಕ್ರಾಸ್ ಕಾರು ಹೊಸ ರೂಪದಲ್ಲಿ ಬರಲಿದೆ. ಮೂರನೇ ತಲೆಮಾರಿನ ಎಸ್-ಕ್ರಾಸ್ ಜೊತೆಗೆ ಸುಜುಕಿ ಕಂಪನಿಯು ಮುಂದಿನ ತಲೆಮಾರಿನ ವಿಟಾರಾವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಟಾರಾ ಜೊತೆಗೆ ಎಸ್-ಕ್ರಾಸ್ ಕೂಡ ಯುರೋಪಿನ ಮಾರುಕಟ್ಟೆಯಲ್ಲಿ ಸುಜುಕಿಗೆ ಪ್ರಮುಖ ಮಾದರಿಯಾಗಿದೆ.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಪ್ರಸ್ತುತ ಎಸ್-ಕ್ರಾಸ್ ಅನ್ನು 1.4-ಲೀಟರ್ ಬೂಸ್ಟರ್‌ಜೆಟ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದೆ. ಈ ಎಂಜಿನ್ 5,500 ಆರ್‌ಪಿಎಂನಲ್ಲಿ 129 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇನ್ನು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಅನ್ನು ಯುರೋಪಿನಲ್ಲಿ ಆಯ್ಕೆಯಾಗಿ ನೀಡಲಾಗುತ್ತದೆ.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಎಂಟಿ ಟೂ-ವ್ಹೀಲ್ ಡ್ರೈವ್ ಸಿಸ್ಟಂ ಅಥವಾ ಆಲ್ ಗ್ರಿಪ್ 4ಡಬ್ಲ್ಯುಡಿ ಕಾನ್ಫಿಗರೇಶನ್‌ಗೆ ಪವರ್ ಅನ್ನು ವರ್ಗಾಯಿಸುತ್ತದೆ ಮತ್ತು ಎಟಿ ಕೇವಲ 4ಡಬ್ಲ್ಯುಡಿ ಸಿಸ್ಟಂನೊಂದಿಗೆ ಬರುತ್ತದೆ.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಮುಂಬರುವ ಸುಜುಕಿ ಎಸ್-ಕ್ರಾಸ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 48 ವೋಲ್ಟ್ ಹೈಬ್ರಿಡ್ ಸಿಸ್ಟಂನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಬಹುದಾಗಿದ್ದು, ಪ್ರಸ್ತುತ ಮಾದರಿಯು 1.4-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಅನ್ನು ಉಳಿಸಿಕೊಳ್ಳಬಹುದು.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ನ್ಯೂ ಜನರೇಷನ್ ಮಾರುತಿ ಸುಜುಕಿ ಎಸ್-ಕ್ರಾಸ್ 2023 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇದು 1.5 ಲೀಟರ್ ನಾಲ್ಕು ಸಿಲಿಂಡರ್ ಕೆ15ಬಿ ಮೈಲ್ಡ್ -ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ಈ ಎಂಜಿನ್ 104.7 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಬಹುದು.

ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್

ನ್ಯೂ ಜನರೇಷನ್ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಆರಂಭಿಕ ಬೆಲೆಯು ರೂ,8.39 ಲಕ್ಷಕ್ಕೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮುಂದಿನ ಮಾದರಿಯಾಗಿ ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ಆಧಾರಿತ ಎರಡನೇ ತಲೆಮಾರಿನ ಸೆಲೆರಿಯೊವನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Next Gen S-Cross To Likely Debut With A Hybrid Engine | ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳಾಗಿದೆ. ಈ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.
Story first published: Thursday, July 22, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X