ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಸುಜುಕಿ ಆಸ್ಟ್ರೇಲಿಯಾದಲ್ಲಿ ಜಿಮ್ನಿಯ ಬೇಸ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ. ಜಿಮ್ನಿ ಲೈಟ್ ಎಂಬ ಎಂಟ್ರಿ ಲೆವೆಲ್ ಮಾದರಿಯು ಕೈಗೆಟುಕುವ ದರದಲ್ಲಿ ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಈ ಜಿಮ್ನಿ ಲೈಟ್ ಬೇಸ್ ವೆರಿಯೆಂಟ್ ವೈಟಿಂಗ್ ಪಿರೇಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೆಸರೇ ಸೂಚಿಸುವಂತೆ, ಹೊಸ ‘ಲೈಟ್' ಮಾದರಿಯು ಹಗುರವಾದ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಂದಿರುತ್ತದೆ. ಈ ಜಿಮ್ನಿ ಲೈಟ್‌ನ ಹೊರಭಾಗದಲ್ಲಿನ ಬದಲಾವಣೆಗಳಲ್ಲಿ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್ ಗಳು ಮತ್ತು ಪ್ಲಾಸ್ಟಿಕ್-ವಿನ್ಯಾಸ ಒಆರ್ವಿಎಂ ಕವರ್‌ಗಳು ಸೇರಿವೆ

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಇನ್ನು ಈ ಹೊಸ ಸುಜುಕಿ ಜಿಮ್ನಿ ಲೈಟ್ ಬೇಸ್ ವೆರಿಯೆಂಟ್ ನಲ್ಲಿ ಅಲಾಯ್ ವ್ಹೀಲ್ ಗಳನ್ನು ಹೊಸ 15 ಇಂಚಿನ ಸ್ಟೀಲ್ ರಿಮ್‌ಗಳಿಂದ ಬದಲಾಯಿಸಲಾಗುತ್ತದೆ. ಇದು ಪ್ರಸ್ತುತ ಜಿಮ್ನಿಯಲ್ಲಿ ಲಭ್ಯವಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಬದಲಿಗೆ ಮೂಲ ರೇಡಿಯೋ/ಸಿಡಿ ಪ್ಲೇಯರ್ ಅನ್ನು ನೀಡುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಇನ್ನು ಕ್ಯಾಬಿನ್ ವಿನ್ಯಾಸವು ಬದಲಾಗದೆ ಉಳಿಯುತ್ತದೆ.ಈ ಹೊಸ ಸುಜುಕಿ ಜಿಮ್ನಿ ಲೈಟ್ ಬೇಸ್ ವೆರಿಯೆಂಟ್ ಎಂಜಿನ್ ನಲ್ಲಿಯು ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಇದರಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಕೆ-ಸೀರಿಸ್ ಇನ್-ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಲಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗಿದ್ದು, ನಾಲ್ಕು-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಆಯ್ಕೆಯನ್ನು ನೀಡಲಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಜಿಮ್ನಿ ಆಫ್-ರೋಡರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಯಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಕಂಪನಿಯು ನಿರೀಕ್ಷಿತ ಗ್ರಾಹಕರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸುತ್ತಿದೆ, ಇದು ಜಿಮ್ನಿಯನ್ನು ಭಾರತೀಯ ಮಾರುಕಟ್ಟೆಗೆ ಹೆಚ್ಚು ಕಾರ್ಯಸಾಧ್ಯವಾಗಿಸಲು ಸಹಾಯ ಮಾಡುತ್ತದೆ. ಆಫ್-ರೋಡ್ ಎಸ್‌ಯುವಿ ಕೆಲವು ಭಾರತ-ನಿರ್ದಿಷ್ಟ ಕಾಸ್ಮೆಟಿಕ್ ಬದಲಾವಣೆಗಳನ್ನು ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ವೈಶಿಷ್ಟ್ಯ ನವೀಕರಣಗಳನ್ನು ಕೂಡ ಪಡೆಯಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಈ ಎಸ್‍ಯುವಿಯ ಅಧಿಕೃತ ಬಿಡುಗಡೆಯ ಮಾಹಿತಿಯು ಇನ್ನೂ ಬಹಿರಂಗಗೊಳ್ಳದಿದ್ದರೂ, ಮಾರುತಿ ಜಿಮ್ನಿ ಮುಂದಿನ ವರ್ಷದ ಆರಂಭದಲ್ಲಿ ಬರಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಂಡೋ-ಜಪಾನೀಸ್ ಕಾರು ತಯಾರಕರು ಭಾರತದಲ್ಲಿ ಜಿಮ್ನಿಯ 5-ಡೋರಿನ ಆವೃತ್ತಿಯನ್ನು ತರಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಇನ್ನು ಜಿಮ್ನಿ 5-ಡೋರ್ ಎಸ್‍ಯುವಿಯು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಈ ಜಿಮ್ನಿ ಮೈಲ್ಡ್ ಹೈಬ್ರಿಡ್ ಸಿಸ್ಟಂ ಹೊಂದಿರುವ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. ಹೊಸ ಮಾದರಿಯು ಜಿಮ್ನಿ ಸಿಯೆರಾ ಆವೃತ್ತಿಯನ್ನು ಆಧರಿಸಿರಲಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಸುಜುಕಿ ಜಿಮ್ನಿ ಲೈಟ್

ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಜಿಮ್ನಿ ಎಸ್‍ಯುವಿಗೆ ಭರ್ಜರಿ ಬೇಡಿಕೆಯನ್ನು ಹೊಂದಿರುವುದರಿಂದ ಜಿಮ್ನಿ ಬೇಸ್ ವೆರಿಯೆಂಟ್ ಲೈಟ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಸುಜುಕಿ ಜಿಮ್ನಿ ಲೈಟ್‌ನ ಬೆಲೆಯನ್ನು ಆಗಸ್ಟ್ 1 ರಂದು ಘೋಷಿಸಲಾಗುವುದು. ಈ ಹೊಸ ರೂಪಾಂತರವನ್ನು ಜಪಾನ್‌ನಲ್ಲಿ ತಯಾರಿಸಲಾಗುತ್ತದೆ.

Most Read Articles

Kannada
English summary
Suzuki To Launch More Affordable Jimny Lite. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X