ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ಮುಂದುವರಿಸಿದ್ದು, ಲಾಕ್‌ಡೌನ್ ಪರಿಣಾಮ ಆರ್ಥಿಕ ಚಟುವಟಿಕೆಗಳಲ್ಲಿ ಸಾಕಷ್ಟು ಕುಸಿತ ಕಂಡಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಎರಡನೇ ಅಲೆ ಸಂದರ್ಭದಲ್ಲೂ ವಿಸ್ತರಿತ ಲಾಕ್‌ಡೌನ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಕುಸಿತ ಕಂಡಿದೆ. ಕೋವಿಡ್ ಹೆಚ್ಚಳವಾದ ನಂತರ ದೇಶದ ಪ್ರಮುಖ ಆಟೋ ಕಂಪನಿಗಳು ಕಳೆದ ತಿಂಗಳಿನಿಂದಲೇ ವಾಹನ ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸಿದ್ದು, ಕೋವಿಡ್ ತುಸು ತಗ್ಗಿರುವುದರಿಂದ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆರಂಭಿಸಲಾಗಿದ್ದರೂ ಸುರಕ್ಷಾ ಮಾರ್ಗಸೂಚಿ ಪರಿಣಾಮ ಉತ್ಪಾದನೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ದೇಶಾದ್ಯಂತ ನೆಲೆಗೊಂಡಿರುವ ಪ್ರಮುಖ ವಾಹನ ಕಂಪನಿಗಳು ಹೊಸ ಸುರಕ್ಷಾ ಕ್ರಮಗಳೊಂದಿಗೆ ಉತ್ಪಾದನೆಯನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿದ್ದು, ವಿವಿಧ ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ಆದರೆ ತಮಿಳುನಾಡು ಸರ್ಕಾರವು ತನ್ನ ರಾಜ್ಯದಲ್ಲಿ ನೆಲೆಗೊಂಡಿರುವ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಿಗೆ ಪೂರ್ಣ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದು, ಸರ್ಕಾರದ ನಿರ್ಧಾರ ಸ್ವಾಗತಿಸಿರುವ ಆಟೋ ಉತ್ಪಾದನಾ ಕಂಪನಿಗಳು ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಗರಿಷ್ಠ ಮಟ್ಟದ ಸುರಕ್ಷಾ ಮಾನದಂಡಗಳನ್ನು ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿವೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ಭಾರತದಲ್ಲಿ ಇತರೆ ರಾಜ್ಯಗಳಿಂತ ತಮಿಳುನಾಡಿರುವ ಹೆಚ್ಚಿನ ಮಟ್ಟದ ವಾಹನ ಕಂಪನಿಗಳು ನೆಲೆಗೊಂಡಿದ್ದು, ತಮಿಳುನಾಡು ಸರ್ಕಾರ ನಿರ್ಧಾರಕ್ಕೆ ಪ್ರಮುಖ ಆಟೋ ಉತ್ಪಾದನಾ ಅಭಿನಂದನೆ ಸಲ್ಲಿಸಿವೆ. ಮಾಹಿತಿಗಳ ಪ್ರಕಾರ ಜೂನ್ 21ರಿಂದಲೇ ಬಹುತೇಕ ಕಂಪನಿಗಳು ಶೇ. 100 ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದ್ದು, ಹೊಸ ಸುರಕ್ಷಾ ಮಾರ್ಗಸೂಚಿ ಅನುಸಾರವಾಗಿ ಕಾರು ಉತ್ಪಾದನೆಯನ್ನು ಪುನಾರಂಭಿಸಲಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ಇನ್ನು ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ವೈರಸ್ ಹರಡುವಿಕೆ ತೀವ್ರವಾಗಿರುವುದರಿಂದ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ವಿವಿಧ ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಆಟೋ ಮೊಬೈಲ್ ಕಂಪನಿಗಳು ಸಹ ಸಾಕಷ್ಟು ಸಹಕಾರ ನೀಡುತ್ತಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡಿದೆ.

ವಾಹನ ಉತ್ಪಾದನೆಗಾಗಿ ಶೇ.100ರಷ್ಟು ಅವಕಾಶ ನೀಡಿದ ತಮಿಳುನಾಡು ಸರ್ಕಾರ

ಸದ್ಯದ ಪರಿಸ್ಥಿತಿಯು ಸುಧಾರಣೆಗೊಳ್ಳಲು ಇನ್ನು ಕೆಲವು ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದ್ದು, ವಾಹನ ಕಂಪನಿಗಳು ಆರ್ಥಿಕ ಸಂಕಷ್ಟದ ನಡುವೆಯೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸಿವೆ.

Most Read Articles

Kannada
English summary
Tamil Nadu Govt Allows Automakers To Operate 100 Percent Capacity.
Story first published: Wednesday, June 23, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X