ಆಕರ್ಷಕ ಬೆಲೆಯ ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಹನ ಉತ್ಪದನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಏಸ್ ಲಘು ವಾಣಿಜ್ಯ ವಾಹನದ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.99 ಲಕ್ಷಕ್ಕೆ ಬಿಡುಗಡೆ ಮಾಡಿದ್ದು, ಲಘು ವಾಣಿಜ್ಯ ವಾಹನಗಳ ವಿಭಾಗದಲ್ಲಿ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಅತಿ ಕಡಿಮೆ ದರದ ಮಾದರಿ ಎಂದು ಹೇಳಲಾಗಿದೆ. ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಫ್ಲ್ಯಾಟ್ ಬೆಡ್ ವರ್ಷನ್ ಮತ್ತು ಹಾಫ್ ಡೆಕ್ ಮಾದರಿಗಳನ್ನು ಹೊಂದಿದ್ದು, ಹೊಸ ವಾಹನ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಆರಂಭಿಸಲಾಗಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಹನದ ಫ್ಲ್ಯಾಟ್ ಬೆಡ್ ವರ್ಷನ್(ರೂ.3.99 ಲಕ್ಷ) ಮತ್ತು ಹಾಫ್ ಡೆಕ್ ವರ್ಷನ್(ರೂ. 4.10) ಲಕ್ಷ ಬೆಲೆ ಹೊಂದಿದ್ದು, ಅತ್ಯುತ್ತಮ ಸಾಣಾಣಿಕೆ ಸಾಮರ್ಥ್ಯ ಹೊಂದಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಹೊಸ ವಾಣಿಜ್ಯ ವಾಹನವು 2,200 ಎಂಎಂ ಉದ್ದ, 1,490 ಎಂಎಂ ಅಗಲವಾಗಿರುವ ಕಾರ್ಗೊ ಡೆಕ್ ಹೊಂದಿದ್ದು, ಸಣ್ಣ ಪ್ರಮಾಣದ ಸರಕು ಸಾಗಾಣಿಕೆಗೆ ಅನುಕೂಲಕವಾಗಿ 1.5 ಟನ್ ಪ್ಲೇ ಲೋಡ್ ಸಾಮರ್ಥ್ಯ ಹೊಂದಿದೆ. ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಟು ಸಿಲಿಂಡರ್ ಪ್ರೇರಣೆಯ ಎಂಜಿನ್‌ನೊಂದಿಗೆ 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಿದ್ದು, 29-ಬಿಎಚ್‌ಪಿ ಮತ್ತು 55-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಹೊಸ ವಾಹನವನ್ನು ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಲಾಜಿಸ್ಟಿಕ್ ಸಾಗಿಸಲು, ತರಕಾರಿ ವಾಹನವನ್ನಾಗಿಸಲು, ಕೃಷಿ ಸಾಮಾಗ್ರಿಗಳ ಸಾಗಾಣಿಕೆಗೆ, ಇ-ಕಾರ್ಸ್ ಉತ್ಪನ್ನಗಳು ಸಾಗಿಸಲು ಅಥವಾ ಸಿಲಿಂಡರ್ ಸಾಗಾಣಿಕೆ ವಾಹನವನ್ನಾಗಿಸಲು ಇದು ಸಹಕಾರಿಯಾಗಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಹೊಸ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಮಾದರಿಯ ಖರೀದಿ ಮೇಲೆ ಟಾಟಾ ಮೋಟಾರ್ಸ್ ಕಂಪನಿಯು ವಿಶೇಷ ಹಣಕಾಸು ಸೌಲಭ್ಯವನ್ನು ನೀಡುತ್ತಿದ್ದು, ಹೊಸ ವಾಹನ ಖರೀದಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ. 90 ರಷ್ಟು ಆನ್ ರೋಡ್ ದರದ ಮೇಲೆ ಸಾಲಸೌಲಭ್ಯ ನೀಡುತ್ತಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಶೇ.90 ಸಾಲ ಸೌಲಭ್ಯದ ಮೇಲೆ ಪ್ರತಿ ತಿಂಗಳು ರೂ. 7,500 ಇಎಂಐ ನಿಗದಿಪಡಿಸಲಾಗಿದ್ದು, ಹೊಸ ವಾಹನದ ಖರೀದಿ ಮೇಲೆ ಟಾಟಾ ಮೋಟಾರ್ಸ್ ಕಂಪನಿಯು ಗರಿಷ್ಠ ಮಟ್ಟದ ಗ್ರಾಹಕರ ಸೇವೆಗಳೊಂದಿಗೆ ವಾಹನ ಮಾಲೀಕತ್ವವನ್ನು ಸುಲಭವಾಗಿಸುತ್ತಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಣಿಜ್ಯ ವಾಹನಕ್ಕಾಗಿ ಸಂಪೂರ್ಣ ಸೇವಾ 2.0 ಪರಿಚಯಿಸಿದ್ದು, ಹೊಸ ಕಾರ್ಯಕ್ರಮದಡಿಯಲ್ಲಿ ಹೊಸ ಮಾಲೀಕರಿಗೆ ಗರಿಷ್ಠ ಮಟ್ಟದ ತಾಂತ್ರಿಕ ಸೇವೆಗಳು ಉಚಿತವಾಗಿ ಪಡೆಯಬಹುದಾಗಿದೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ಜೊತೆಗೆ ಹೊಸ ವಾಣಿಜ್ಯ ವಾಹನ ಖರೀದಿದಾರರಿಗೆ ವಾರ್ಷಿಕ ನಿರ್ವಹಣಾ ಪ್ಯಕೇಜ್, 24x7 ರೋಡ್‌ಸೈಡ್ ಅಸಿಸ್ಟ್, ಟಾಟಾ ಅಲರ್ಟ್ ಕಸ್ಟಮರ್ ಕೇರ್ ಸೇರಿದಂತೆ ಹಲವಾರು ಆಫರ್ ನೀಡುತ್ತಿದ್ದು, ಅತಿ ಕಡಿಮೆ ನಿರ್ವಹಣೆಯೊಂದಿಗೆ ಹೆಚ್ಚು ಲಾಭಗಳಿಕೆ ಹೊಸ ವಾಹನ ಸಹಕಾರಿಯಾಗಿದೆ.

Most Read Articles

Kannada
English summary
Tata Ace Gold Petrol CX Launched At Rs 3.99 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X