Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಾಟಾ ಬಹುನೀರಿಕ್ಷಿತ ಆಲ್ಟ್ರೊಜ್ ಐ-ಟರ್ಬೊ ವರ್ಷನ್ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಆಲ್ಟ್ರೊಜ್ ಆವೃತ್ತಿಯಲ್ಲಿ ಪರ್ಫಾಮೆನ್ಸ್ ಮಾದರಿಯಾದ ಐ-ಟರ್ಬೊ ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.73 ಲಕ್ಷ ಬೆಲೆ ಹೊಂದಿದೆ.

ಹೊಸ ಆಲ್ಟ್ರೊಜ್ ಟರ್ಬೋ ವರ್ಷನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಯಾದ ಹ್ಯುಂಡೈ ಐ20, ಮಾರುತಿ ಸುಜುಕಿ ಬಲೆನೊ ಮತ್ತು ಫೋರ್ಕ್ಸ್ವ್ಯಾಗನ್ ಪೊಲೊ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಆಲ್ಟ್ರೊಜ್ ಐ-ಟರ್ಬೊ ಮಾದರಿಯನ್ನು ಎಕ್ಸ್ಟಿ, ಎಕ್ಸ್ಜೆಡ್, ಎಕ್ಸ್ಜೆಡ್ ಪ್ಲಸ್ನಲ್ಲಿ ಪರಿಚಯಿಸಲಾಗಿದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಆವೃತ್ತಿಯು ಬೆಲೆಯಲ್ಲೂ ತುಸು ದುಬಾರಿಯಾಗಿದೆ.

ಹೊಸ ಕಾರು ಖರೀದಿಗಾಗಿ ಈಗಾಗಲೇ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ರೂ. 11 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದು, ಗಣರಾಜ್ಯೋತ್ಸವಕ್ಕೆ ಹೊಸ ಕಾರಿನ ವಿತರಣೆಯನ್ನು ಆರಂಭಿಸಲಿದೆ.

ಹೊಸ ಐ-ಟರ್ಬೋ ಆಲ್ಟ್ರೊಜ್ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಪರ್ಫಾಮೆನ್ಸ್ ಮತ್ತು ವಿವಿಧ ಹೊಸ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಿಂತಲೂ ಉತ್ತಮ ಮಟ್ಟದ ಎಂಜಿನ್ ಆಯ್ಕೆ ಮತ್ತು ಸುಧಾರಿತ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಆಲ್ಟ್ರೊಜ್ ಕಾರಿನಲ್ಲಿ ಸದ್ಯ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ. ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಟಾಟಾ ಆಲ್ಟ್ರೊಜ್ ಐಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಬಿಡುಗಡೆ ಮಾಡಲಾಗಿದ್ದು, ಗರಿಷ್ಠ 108-ಬಿಹೆಚ್ಪಿ ಮತ್ತು 140-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಐ-ಟರ್ಬೋ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ನೀಡಲಿದೆಯೆಂತೆ.

ಹೊಸ ಎಂಜಿನ್ ಮೂಲಕ ಐಟರ್ಬೋ ಮಾದರಿಯು ಕೇವಲ 12 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮೀ ವೇಗಪಡೆದುಕೊಳ್ಳಲಿದ್ದು, ಉತ್ತಮ ಪರ್ಫಾಮೆನ್ಸ್ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ಗೆ ಗರಿಷ್ಠ 18.13 ಕಿಮೀ ಮೈಲೇಜ್ ಹಿಂದಿರುಗಿಸಲಿದೆ.

ಇನ್ನು ಟಾಟಾ ಆಲ್ಟ್ರೊಜ್ ಐಟರ್ಬೊ ಪೆಟ್ರೋಲ್ ಆವೃತ್ತಿಯು ಪ್ರಮುಖ ಮೂರು ವೆರಿಯೆಂಟ್ಗಳಲ್ಲಿ ಲಭ್ಯವಿರಲಿದ್ದು, ಹಾರ್ಬಲ್ ಬ್ಲ್ಯೂ, 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ಅತ್ಯುತ್ತಮ ಲೆದರ್ ಆಸನಗಳು, ಕನೆಕ್ಟೆಡ್ ಟೆಕ್ನಾಲಜಿ ಐರಾ ಸೌಲಭ್ಯ ಪಡೆದುಕೊಂಡಿದೆ.

ಐರಾ(iRA) ಕನೆಕ್ಟೆಡ್ ಫೀಚರ್ಸ್ ಅನ್ನು ಆಲ್ಟ್ರೊಜ್ ಐಟರ್ಬೋ ಆವೃತ್ತಿಯಲ್ಲಿ ಜೋಡಣೆ ಮಾಡುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕನೆಕ್ಟೆಡ್ ಫೀಚರ್ಸ್ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಕಾರುಗಳಿಗೆ ಗರಿಷ್ಠ ಭದ್ರತೆ ನೀಡುತ್ತದೆ.

ಹೊಸ ಐರಾ ಕನೆಕ್ಟೆಡ್ ಫೀಚರ್ಸ್ನಲ್ಲಿ ಸುಮಾರು 70ಕ್ಕೂ ಹೆಚ್ಚು ವಾಯ್ಸ್ ಕಮಾಂಡ್ ಸೌಲಭ್ಯವಿದ್ದು, ಒಂದೇ ಸೂರಿನಡಿ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಲ್ಲದೆ ತಾಂತ್ರಿಕ ದೋಷಗಳನ್ನು ಅತಿ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಈ ಮೂಲಕ ಸೆಗ್ಮೆಂಟ್ ಇನ್ ಬೆಸ್ಟ್ ಫೀಚರ್ಸ್ ಹೊಂದಿರುವ ಆಲ್ಟ್ರೊಜ್ ಕಾರು ಮಾದರಿಯು ಐ-ಟರ್ಬೊ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣವೈಶಿಷ್ಟ್ಯತೆಗಳನ್ನು ಹೊಂದಿದ್ದು, ಐ-ಟರ್ಬೊ ಮೂಲಕ ಆಲ್ಟ್ರೊಜ್ ಕಾರಿಗೆ ಮತ್ತಷ್ಟು ಬಲಿಷ್ಠ ಎಂಜಿನ್ ಮತ್ತು ಸ್ಪೋರ್ಟಿ ಲುಕ್ ನೀಡಲಾಗಿದೆ.

ಹೊಸ ಎಂಜಿನ್ ಮಾದರಿಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ತಂದುಕೊಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಗರಿಷ್ಠ ಸುರಕ್ಷಾ ರೇಟಿಂಗ್ ಕೂಡಾ ಹೊಂದಿರುವುದು ಕಾರಿನ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಲಿದೆ.