ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಕಳೆದ ವರ್ಷದಿಂದ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಟಾಟಾದ ಜನಪ್ರಿಯ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಆಲ್‌‌ಟ್ರೊಜ್ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಟಾಟಾ ಆಲ್‌‌ಟ್ರೊಜ್ ಒಂದು ಲಕ್ಷದ ಯುನಿಟ್ ಅನ್ನು ಪುಣೆಯಲ್ಲಿನ ಉತ್ಪಾದನಾ ಘಟಕದಿಂದ ಉತ್ಪಾದಿಸಿದ್ದಾರೆ. ಕೊರೋನಾ ಸಂಕಷ್ಟದ ನಡುವೆ ಕೇವಲ 20 ತಿಂಗಳಲ್ಲಿ ಒಂದು ಲಕ್ಷ ಆಲ್‌‌ಟ್ರೊಜ್ ಕಾರು ಟಾಟಾ ಉತ್ಪಾದಿಸಿದೆ. 2022ರ ಹಣಕಾಸು ವರ್ಷದಲ್ಲಿ, ಟಾಟಾ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳಿಗೆ ಏರಿತು. 2021ರ ಮಾರ್ಚ್ ತಿಂಗಳಿನಲ್ಲಿ ಆಲ್‌‌ಟ್ರೊಜ್ 7,550 ಯೂನಿಟ್‌ಗಳು ಮಾರಾಟವಾಗಿತ್ತು. ಇದು ಪ್ರತಿ ತಿಂಗಳು ಸರಾಸರಿ 6,000 ಯೂನಿಟ್‌ಗಳು ಮಾರಾಟವಾಗುತ್ತಿದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಸ್ವದೇಶಿ ಬ್ರಾಂಡ್ ಆಲ್‌‌ಟ್ರೊಜ್ ಅನ್ನು 2020ರ ಜನವರಿ ತಿಂಗಳಿನಲ್ಲಿ ALFA ARC (ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಆರ್ಕಿಟೆಕ್ಚರ್ ನಿಂದ ಆಧಾರವಾಗಿರುವ ಮೊದಲ ಉತ್ಪನ್ನವಾಗಿ ಪರಿಚಯಿಸಿತು ಮತ್ತು ಇದು ಅತ್ಯಂತ ಆಕರ್ಷಕ ಮತ್ತು ಸುರಕ್ಷಿತ ಕಾರು ಹಣವು ಕೈಗೆಟುಕುವ ಮಾದರಿಯಾಗಿದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಟಾಟಾ ಆಲ್‌‌ಟ್ರೊಜ್ ಹೊಸ 'ಐ-ಟರ್ಬೊ' ರೂಪಾಂತರವನ್ನು ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಮತ್ತಷ್ಟು ಬೂಸ್ಟ್ ಮಾಡಿದೆ. ವಿಶೇಷವೆಂದರೆ ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಅರಿವಿನೊಂದಿಗೆ ಟಾಟಾ ಕಾರುಗಳು ಖರೀದಿದಾರರಲ್ಲಿ ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ ಎಂದು ಹೇಳಬಹುದು.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಟಾಟಾ ಆಲ್‌‌ಟ್ರೊಜ್ ಅನ್ನು ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಹ್ಯಾಚ್‌ಬ್ಯಾಕ್ ವಯಸ್ಕರ ವಿಭಾಗದಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಮಕ್ಕಳ ಸುರಕ್ಷತೆಗಾಗಿ 3-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಈ ಟಾಟಾ ಆಲ್‌‌ಟ್ರೊಜ್ ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಆಗಿದೆ. ಇ ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಿವೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಈ ಟಾಟಾ ಆಲ್‌‌ಟ್ರೊಜ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು. ಇದು 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡನೆಯದು 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಇನ್ನು ಮೂರನೇಯ 1.2-ಲೀಟರ್ ಪವರ್ ಫುಲ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 110 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆಲ್‌‌ಟ್ರೊಜ್ ಐಟೆರ್ಬೊ 11.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪದೆದುಕೊಳ್ಳುತ್ತದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಟಾಟಾ ಸಂಸ್ಥೆಯ ಸೇಲ್ಸ್, ಮಾರ್ಕೆಟಿಂಗ್ ಮತ್ತು ಕಸ್ಟಮರ್ ಕೇರ್ ವಿಭಾಗದ ಉಪಾಧ್ಯಕ್ಷರಾದ ರಾಜನ್ ಅಂಬಾ ಮಾತನಾಡಿ, 1,00,000 ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಒಂದು ಸವಾಲಿನ ವಿಭಾಗದಲ್ಲಿ ಆಲ್‌‌ಟ್ರೊಜ್ ಯಶಸ್ಸಿಗೆ ಮತ್ತೊಂದು ಸಾಕ್ಷಿಯಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್. ಐಪಿಎಲ್ 2020ರಲ್ಲಿ ಅಧಿಕೃತ ಪಾಲುದಾರರಾಗುವುದರಿಂದ ಹಿಡಿದು, ಭಾರತದ ಕೆಲವು ಪ್ರತಿಷ್ಠಿತ ಮ್ಯಾರಥಾನ್ ಈವೆಂಟ್‌ಗಳಿಗೆ ಪ್ರಮುಖ ಕಾರ್ ಆಗಿ, ಈ ವರ್ಷ ನಮ್ಮ ಒಲಿಂಪಿಯನ್‌ಗಳಿಗೆ ಸೂಕ್ತವಾದ ಬಹುಮಾನದ ಆಯ್ಕೆಯಾಗಿ ಆಲ್‌‌ಟ್ರೊಜ್ ಎಲ್ಲರ ಹೃದಯ ಗೆದ್ದಿದೆ ಎಂದು ಹೇಳಿದರು.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಟಾಟಾ ಆಲ್‌‌ಟ್ರೊಜ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ, ಹ್ಯುಂಡೈ ಐ20, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ.

ಕಡಿಮೆ ಅವಧಿಯಲ್ಲಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Tata Altroz ಕಾರು

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಆಲ್ಫಾ ಎಆರ್‌ಸಿ ಆದರಿಸಿ ಹೊಸ ಪಂಚ್ ಹೆಸರಿನ ಮೈಕ್ರೋ ಎಸ್‌ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಇದು ಈಗಾಗಲೇ ದೇಶಾದ್ಯಂತ ಅನೇಕ ಡೀಲರ್‌ಶಿಪ್‌ಗಳನ್ನು ತಲುಪಿರುವ ಕಾರಣ ಶೀಘ್ರದಲ್ಲೇ ಮಾರಾಟಕ್ಕೆ ಬರುತ್ತದೆ. ಎಂಟ್ರಿ ಲೆವಲ್ ಕಾರುಗಳಲ್ಲೇ ವಿನೂತನ ಫೀಚರ್ಸ್ ಮತ್ತು ಎಂಜಿನ್ ಆಯ್ಕೆ ಹೊಂದಿರುವ ಹೊಸ ಪಂಚ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತದೆ. ಇದರ ಜೊತೆಗೆ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಬಹುದು.

Most Read Articles

Kannada
English summary
Tata altroz premium hatchback reached 1 lakh production milestone in india details
Story first published: Tuesday, September 28, 2021, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X