Just In
- 14 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 51 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ಹೊಸ ಮೈಲಿಗಲ್ಲು ದಾಟಿದ ಟಾಟಾ ಆಲ್ಟ್ರೋಜ್ ಕಾರು
ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಕಾರು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಕಾರಣದಿಂದಾಗಿ ಈ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರು 12 ತಿಂಗಳಲ್ಲಿ 50,000ಕ್ಕೂ ಹೆಚ್ಚು ಯೂನಿಟ್ ಮಾರಾಟವನ್ನು ದಾಖಲಿಸಿದೆ.

ಈ ಮಾರಾಟದಲ್ಲಿ ಪೆಟ್ರೋಲ್ ಮಾದರಿಯ ಪಾಲು 90%ನಷ್ಟಿದೆ. ಟಾಟಾ ಆಲ್ಟ್ರೋಜ್ ಸದ್ಯಕ್ಕೆ ದೇಶದಲ್ಲಿರುವ ಅತ್ಯಂತ ಸುರಕ್ಷಿತ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್'ನೊಂದಿಗೆ ಮಾರಾಟ ಮಾಡಲಾಗುತ್ತದೆ. ಉಳಿದ ಕಂಪನಿಯ ಕಾರುಗಳಿಗೆ ಹೋಲಿಸಿದರೆ ಈ ಕಾರು ಕೈಗೆಟುಕುವ ಬೆಲೆ ಹಾಗೂ ಹಲವಾರು ಹೊಸ ಫೀಚರ್'ಗಳನ್ನು ಹೊಂದಿದೆ.

2020ರ ಜನವರಿಯಿಂದ ಡಿಸೆಂಬರ್'ವರೆಗೆ 47.076 ಯೂನಿಟ್ ಆಲ್ಟ್ರೋಜ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಇವುಗಳಲ್ಲಿ 44,427 ಯುನಿಟ್ ಪೆಟ್ರೋಲ್ ಮಾದರಿಗಳಾದರೆ 2,649 ಯುನಿಟ್ ಡೀಸೆಲ್ ಮಾದರಿಗಳಾಗಿವೆ.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು

ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಆಲ್ಟ್ರೋಜ್ ಐ-ಟರ್ಬೊ ಕಾರ್ ಅನ್ನು ಪರಿಚಯಿಸಿದೆ. ಕಂಪನಿಯು ಈ ಕಾರಿನ ಮೂಲಕ ಮಾರಾಟದಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದೆ.

ಪ್ರೀಮಿಯಂ ಹ್ಯಾಚ್ಬ್ಯಾಕ್ ಸೆಗ್ ಮೆಂಟಿನಲ್ಲಿ ಆಲ್ಟ್ರೋಜ್ ಕಾರು, ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ 20, ಟೊಯೊಟಾ ಗ್ಲಾಂಜಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಸೆಗ್ ಮೆಂಟಿನಲ್ಲಿ ಆಲ್ಟ್ರೋಜ್ ಕಾರು 17%ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಂಪನಿಯು ಹೊಸ ಎಂಜಿನ್ಗಳೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಲ್ಲಿ ಎಕ್ಸ್ ಝಡ್ ಪ್ಲಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದರಿಂದಾಗಿ ಟಾಟಾ ಆಲ್ಟ್ರೋಜ್ ಮಾರಾಟವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

ಟಾಟಾ ಆಲ್ಟ್ರೋಜ್ ಐಟರ್ಬೊ ಕಾರಿನಲ್ಲಿ 1.2 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 114 ಬಿಹೆಚ್ಪಿ ಪವರ್ ಹಾಗೂ 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯು ಶೀಘ್ರದಲ್ಲೇ 7 ಡಿಸಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ನ ಆಯ್ಕೆಯನ್ನು ಪರಿಚಯಿಸಲಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಸಿಗುತ್ತವೆ. ಇದರ ಮಾರಾಟವು ಉತ್ತಮವಾಗಿ ನಡೆಯುತ್ತಿದ್ದು, ಕಂಪನಿಯು ಅದನ್ನು ನಿರಂತರವಾಗಿ ನವೀಕರಿಸುತ್ತಿದೆ.

2020ರ ನವೆಂಬರ್ ತಿಂಗಳಿನಲ್ಲಿ 6,260 ಯುನಿಟ್ ಮಾರಾಟದೊಂದಿಗೆ ಆಲ್ಟ್ರೋಜ್ ಕಾರು ಮಾರಾಟದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಜನವರಿಯಲ್ಲಿ ಈ ಕಾರು ಎಷ್ಟು ಪ್ರಮಾಣದಲ್ಲಿ ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟಾಟಾ ಆಲ್ಟ್ರೋಜ್ ಟರ್ಬೊ-ಪೆಟ್ರೋಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.7.74 ಲಕ್ಷಗಳಾದರೆ, ಟಾಪ್-ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.86 ಲಕ್ಷಗಳಾಗಿದೆ. ಟರ್ಬೊ-ಪೆಟ್ರೋಲ್ ಆವೃತ್ತಿಯನ್ನು ಎಕ್ಸ್ಟಿ, ಎಕ್ಸ್ ಝಡ್ ಹಾಗೂ ಎಕ್ಸ್ ಝಡ್ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ.