Just In
- 4 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 8 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 10 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 20 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಫಾರಿ ಕಾರಿನ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್
ಮಧ್ಯಮ ಕ್ರಮಾಂಕದ ಎಸ್ಯುವಿ ಕಾರು ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಟಾಟಾ ಸಫಾರಿ ಕಾರು ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ತಾಂತ್ರಿಕ ಅಂಶಗಳ ಆಯ್ಕೆ ಪಡೆದುಕೊಳ್ಳಲಿದ್ದು, ಇದಕ್ಕಾಗಿ ಕಂಪನಿಯು ಹೊಸ ವೆರಿಯೆಂಟ್ ಪರಿಚಯಿಸಲು ಸಜ್ಜಾಗುತ್ತಿದೆ.
ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಗಳೊಂದಿಗೆ ಮಾರಾಟಗೊಳ್ಳುತ್ತಿರುವ ಟಾಟಾ ಸಫಾರಿ ಎಸ್ಯುವಿಯು ಶೀಘ್ರದಲ್ಲೇ ಮತ್ತೊಂದು ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಟಾಟಾ ಕಂಪನಿಯು ಹೊಸ ಕಾರು ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.
ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಸಫಾರಿ ಕಾರು ಸದ್ಯ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.81 ಲಕ್ಷ ಬೆಲೆ ಪಡೆದುಕೊಂಡಿದ್ದು, ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಯು ಮಧ್ಯಮ ಕ್ರಮಾಂಕದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಸಫಾರಿ ಕಾರು ಮಾದರಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್ಟಿ, ಎಕ್ಸ್ಟಿ ಪ್ಲಸ್, ಎಕ್ಸ್ಜೆಡ್, ಎಕ್ಸ್ಜೆಡ್ ಪ್ಲಸ್ ಮತ್ತು ಎಕ್ಸ್ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.
ಸ್ಟ್ಯಾಂಡರ್ಡ್ ಸಫಾರಿ ಮಾದರಿಯು ಎಕ್ಸ್ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ರೂ. 21.61 ಲಕ್ಷ ಬೆಲೆ ಹೊಂದಿದ್ದಲ್ಲಿ ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.56 ಲಕ್ಷದಿಂದ ರೂ. 21.81 ಲಕ್ಷ ಬೆಲೆ ಪಡೆದುಕೊಂಡಿದೆ.
ಒಮೆಗಾ ಪ್ಲ್ಯಾಟ್ಫಾರ್ಮ್ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.
ಹೊಸ ಕಾರಿನ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ಗಳೊಂದಿಗೆ ಗರಿಷ್ಠ ಸುರಕ್ಷತೆಗೆ ಒತ್ತು ನೀಡಿದ್ದು, ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.
ಸಫಾರಿ ಎಸ್ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.
ಹೈ ಎಂಡ್ ಕಾರು ಮಾದರಿಗಳಲ್ಲಿ ಸದ್ಯ ಡೀಸೆಲ್ ಕಾರುಗಳನ್ನು ಮಾತ್ರ ಹೊಂದಿರುವ ಟಾಟಾ ಕಂಪನಿಯು ಪೆಟ್ರೋಲ್ ಮಾದರಿಗಳ ಬಿಡುಗಡೆಗೂ ಸಿದ್ದತೆ ನಡೆಸುತ್ತಿದ್ದು, ಹೊಸ ಎಮಿಷನ್ನಂತೆ ಕಾರುಗಳ ಮಾರಾಟದಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಪರಿಚಯಿಸುತ್ತಿದೆ.