ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಐಷಾರಾಮಿ ಕಾರುಗಳಲ್ಲಿ ಮಾತ್ರ ನೀಡಲಾಗುತ್ತಿದ್ದ ವಿಶೇಷವಾದ ಫೀಚರ್ ಗಳಲ್ಲಿ ಒಂದಾದ ಅಟಾನಾಮಸ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಿಧಾನವಾಗಿ ಬೃಹತ್ ಪ್ರಮಾಣದಲ್ಲಿ ಸಾಮಾನ್ಯ ಕಾರುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಟಾಟಾ ಮೋಟಾರ್ಸ್‌ನ ಎಲೆಕ್ಟ್ರಾನಿಕ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪನಿಯಾದ Tata Elxsi, ಬಜೆಟ್ ಬೆಲೆಯ ಕಾರುಗಳ ಸ್ವಾಯತ್ತ ಚಾಲನೆಗಾಗಿ ತನ್ನದೇ ಆದ ಪ್ಲಾಟ್‌ಫಾರಂ ಅನ್ನು ಅಭಿವೃದ್ಧಿಪಡಿಸಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಈ ಪ್ಲಾಟ್‌ಫಾರಂ ಅನ್ನು ಯಾವುದೇ ವಾಹನಕ್ಕೆ ಮರುಹೊಂದಿಸಬಹುದು. ಸ್ವಾಯತ್ತ ಚಾಲನಾ ವೇದಿಕೆಯನ್ನು ಕಳೆದ ಹತ್ತು ವರ್ಷಗಳಿಂದ Tata Elxsi ಅಭಿವೃದ್ಧಿಪಡಿಸುತ್ತಿದೆ. ಇದನ್ನು ಅನೇಕ ಚಾಲನಾ ಸಾಧನಗಳನ್ನು ನಿರ್ವಹಿಸಲು ಅಗತ್ಯವಿರುವ ಇಮೇಜ್ ಪ್ರೊಸೆಸಿಂಗ್‌ನೊಂದಿಗೆ ಆರಂಭಿಸಲಾಯಿತು. ಯಾವುದೇ ಇತರ ADAS ಸೆಟಪ್‌ನಂತೆ, Tata Elxsi ಅಭಿವೃದ್ಧಿಪಡಿಸಿರುವ ಪ್ಲಾಟ್‌ಫಾರಂ ರಾಡಾರ್ ಆಧಾರಿತ ಸೆನ್ಸಾರ್ ಹಾಗೂ ಕ್ಯಾಮೆರಾಗಳನ್ನು ಹೊಂದಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಈ ಪ್ಲಾಟ್‌ಫಾರಂನ ಎಲ್ಲಾ ಘಟಕಗಳನ್ನು ಅಟಾನಾಮಸ್ ಲೆವೆಲ್ 4 ಡ್ರೈವಿಂಗ್‌ಗೆ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಅಂದರೆ ಸ್ಟೀಯರಿಂಗ್ ವ್ಹೀಲ್‌ ಮೇಲೆ ಚಾಲಕನ ಕೈ ಇಲ್ಲದಿದ್ದರೂ ಕಾರು ಆಟೋಮ್ಯಾಟಿಕ್ ಆಗಿ ಚಾಲನೆಯಲ್ಲಿರಲಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಟಾಟಾ ಟಿಯಾಗೊ ಕಾರಿನಲ್ಲಿ ಅಟಾನಾಮಸ್ ಪಾರ್ಕಿಂಗ್

Tata Elxsi ಈಗಾಗಲೇ ತನ್ನ ಆಟೋ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಚಾಲಕರ ಸಮಸ್ಯೆಗಳನ್ನು ಸೀಮಿತ ದೃಷ್ಟಿಕೋನದಿಂದ ಗೇಜಿಂಗ್ ಮಾಡಲು ಹಾಗೂ ಪಾರ್ಕಿಂಗ್ ಮಾಡಲು ಹರ ಸಾಹಸ ಪಡುತ್ತಿದೆ. ಈ ಸಿಸ್ಟಂ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಬಳಸಲಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಈ ತಂತ್ರಜ್ಞಾನಗಳಲ್ಲಿ ವಿ - ಡ್ರೈವ್ ಎಂಬ ಫೋಟೋ ರಿಯಲಿಸ್ಟಿಕ್ ಸಿಮ್ಯುಲೇಶನ್, ಅಟಾನಾಮಸ್ ಎಂಬ ಸ್ವಾಯತ್ತ ಡ್ರೈವಿಂಗ್ ಮಿಡಲ್‌ವೇರ್ ಸ್ಟಾಕ್, ಕ್ಯಾಮೆರಾ ಮಾನಿಟರಿಂಗ್ ಸಿಸ್ಟಂಗಳಿಗಾಗಿ ADAS ಅಲ್ಗಾರಿದಮ್‌ ಹಾಗೂ ವರ್ಧಿತ ರಿಯಾಲಿಟಿ ಮೂಲಕ ನಡೆಸಲ್ಪಡುವ V2X ಪರಿಶೀಲನಾ ಸಾಧನಗಳು ಸೇರಿವೆ. ಈ ಸಿಸ್ಟಂ ಹೊಂದಿರುವ ಟಾಟಾ ಟಿಯಾಗೋ ಕಾರಿನ ವೀಡಿಯೊವನ್ನು Tata Elxsi ಯುಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಈ ಸಿಸ್ಟಂ ಅನ್ನು ಆನ್ ಮಾಡಿದ ನಂತರ, ವಾಹನವನ್ನು ನಿಲ್ಲಿಸಲು ಹಾಗೂ ಪಾರ್ಕ್ ಔಟ್ ಮಾಡಲು ಪಥಗಳನ್ನು ರಚಿಸುವ ಮೂಲಕ ತರಬೇತಿ ನೀಡಬೇಕು. ಇವೆರಡೂ ವಾಹನದ ಮೆಮೋರಿಯಲ್ಲಿ ಸ್ಟೋರ್ ಆಗುತ್ತವೆ. ಈ ಮಾರ್ಗಗಳನ್ನು ಕಾರಿನ ಮೆಮೊರಿಯಲ್ಲಿ ಉಳಿಸಿದರೆ, ಮುಂದಿನ ಬಾರಿ ಕಾರ್ ಅನ್ನು ಅದರ ಡ್ರಾಪ್ ವಲಯದಲ್ಲಿ ಬಿಡ ಬಹುದು.

ಪಥವನ್ನು ರೆಕಾರ್ಡ್ ಮಾಡಿದ ನಂತರ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು, ನೋಸ್ ಇನ್ ಅಥವಾ ನೋಸ್ ಔಟ್ ಎಂಬ ಎರಡು ವಿಧಾನಗಳಲ್ಲಿ ಒಂದನ್ನು ಆಯ್ಕೆ ಮಾಡುವ ಮೂಲಕ ಆಟೋ ಪಾರ್ಕಿಂಗ್ ಪಾರ್ಕಿಂಗ್ ಸಿಸ್ಟಂ ಅನ್ನು ಆನ್ ಮಾಡಬಹುದು. ಸ್ಟಾರ್ಟ್ ಪಾರ್ಕಿಂಗ್ ಬಟನ್ ಕ್ಲಿಕ್ ಮಾಡಿದಾಗ, ವಾಹನವು ಕೊನೆಯ ಬಾರಿ ಪಾರ್ಕಿಂಗ್ ಮಾಡಿದ ಪಥವನ್ನು ಅನುಸರಿಸುತ್ತದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಹಾಗೂ ಆಟೋಮ್ಯಾಟಿಕ್ ಆಗಿ ಆ ಜಾಗದಲ್ಲಿ ನಿಲ್ಲುತ್ತದೆ. ಪಾರ್ಕ್ ಔಟ್‌ಗಾಗಿ ಉಳಿಸಿದ ಪಥವನ್ನು ಅನುಸರಿಸುವ ಮೂಲಕ ಇದು ಪಾರ್ಕಿಂಗ್ ಸ್ಥಳದಿಂದ ಹೊರಗೆ ಚಲಿಸಬಹುದು. ಇದನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನಿರ್ವಹಿಸಬಹುದು. Tata Elxsi ಕಂಪನಿಯು ಕಾರುಗಳಿಗಾಗಿಯೂ ಅಟಾನಾಮಸ್ ಲೆವೆಲ್ 4 ಡ್ರೈವಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಈ ಸಿಸ್ಟಂನ ಸಾಮರ್ಥ್ಯವನ್ನು ಪ್ರದರ್ಶಿಸಲು ಕಂಪನಿಯು ಮಾರುತಿ ಸುಜುಕಿ ಇಗ್ನಿಸ್ ಕಾರ್ ಅನ್ನು ಬಳಸಿದೆ. ಈ ಸಿಸ್ಟಂ ಸುತ್ತಮುತ್ತಲಿನ ವ್ಯವಸ್ಥೆಯ 3D ಮ್ಯಾಪಿಂಗ್ ರಚಿಸಲು ಸ್ವಾಯತ್ತ ಚಾಲನೆಗೆ ಬಳಸುವಂತೆಯೇ LIDAR ಅನ್ನು ಬಳಸುತ್ತದೆ. ADAS ಪ್ಲಾಟ್‌ಫಾರಂ ಅನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಹಲವು ಸವಾಲುಗಳಿವೆ ಎಂದು Tata Elxsi ಹೇಳಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಇವುಗಳಲ್ಲಿ ಸಾಫ್ಟ್‌ವೇರ್‌ನಿಂದಾಗುವ ವೆಚ್ಚ, ತಪ್ಪು ಲೇನ್ ಗುರುತಿಸುವಿಕೆ ಹಾಗೂ ರಸ್ತೆಗಳಲ್ಲಿರುವ ಟ್ರಾಫಿಕ್ ಸಿಗ್ನಲ್‌ ಹಾಗೂ ADAS ಕುರಿತು ಜನರಲ್ಲಿ ಮೂಡಿಸುವ ಅರಿವಿನ ಕೊರತೆ ಸೇರಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಟಾಟಾ ಮೋಟಾರ್ಸ್ ಕಂಪನಿಯ ಇತರ ಸುದ್ದಿಗಳ ಬಗ್ಗೆ ಹೇಳುವುದಾದರೆ ಕಂಪನಿಯು ಶೀಘ್ರದಲ್ಲೇ ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಫ್ರಾಂಚೈಸಿ ವಾಹನ ಸ್ಕ್ರ್ಯಾಪೇಜ್ ಕೇಂದ್ರವನ್ನು ಸ್ಥಾಪಿಸಲು ತೆರೆಯಲಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಗುಜರಾತ್ ಸರ್ಕಾರದ ಸಹಾಯದಿಂದ ಕಂಪನಿಯು ತನ್ನ ಮೊದಲ ಸ್ಕ್ರ್ಯಾಪಿಂಗ್ ಘಟಕವನ್ನು ಸ್ಥಾಪಿಸಲಿದೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಕಂಪನಿಯು ಗುಜರಾತ್‌ನಲ್ಲಿ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಫ್ರಾಂಚೈಸಿಗಳನ್ನು ಆಹ್ವಾನಿಸಿದೆ. ಫ್ರಾಂಚೈಸಿಗಳನ್ನು ತೆಗೆದುಕೊಳ್ಳಲು ಬಯಸುವ ಪಾಲುದಾರರಿಗೆ ಕಂಪನಿಯು ಉದ್ದೇಶ ಪತ್ರಗಳನ್ನು (ಲೆಟರ್ ಆಫ್ ಇನ್ ಟೆಂಟ್ ) ಕಳುಹಿಸುತ್ತಿದೆ. ಅಹಮದಾಬಾದ್ ನಲ್ಲಿರುವ ಸ್ಕ್ರ್ಯಾಪೇಜ್ ಘಟಕವನ್ನು ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳಿಗಾಗಿ ಅಭಿವೃದ್ಧಿಪಡಿಸಲಾಗುವುದು.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಈ ಘಟಕವು ವಾರ್ಷಿಕ 36,000 ವಾಹನಗಳನ್ನು ಮರುಬಳಕೆ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಒಂದು ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 25,000 ಟ್ರಕ್‌ಗಳು ಹಾನಿಗೊಳಗಾಗುತ್ತವೆ. ಅವುಗಳನ್ನು ಸ್ಕ್ರ್ಯಾಪ್ ಮಾಡಲು ದೇಶದಲ್ಲಿ ಸಾಕಷ್ಟು ಸ್ಕ್ರ್ಯಾಪಿಂಗ್ ಘಟಕಗಳಿಲ್ಲ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಇನ್ನು ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ 21 ಹೊಸ ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಪ್ರಯಾಣಿಕರ ಸಾರಿಗೆ ಹಾಗೂ ಸರಕು ವಿಭಾಗದಲ್ಲಿ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಕಂಪನಿಯು ಈ ಹೊಸ ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಟಾಟಾದ ಹೊಸ ಕಾರ್ಗೋ ವಾಹನಗಳಲ್ಲಿ ಲಘು, ಮಧ್ಯಮ ಹಾಗೂ ಭಾರೀ ತೂಕದ ವಾಹನಗಳು ಸೇರಿವೆ.

ಕಾರುಗಳನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡುತ್ತದೆ Tata Elxsi ಅಭಿವೃದ್ಧಿಪಡಿಸಿರುವ ಈ ಸಿಸ್ಟಂ

ಇದೇ ವೇಳೆ ಸಣ್ಣ ಹಾಗೂ ದೊಡ್ಡ ಬಸ್‌ಗಳ ಜೊತೆಗೆ ವಾಣಿಜ್ಯ ಪ್ರಯಾಣಿಕ ವಾಹನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಪರಿಚಯಿಸಲಾಗಿದೆ. ಟಾಟಾ ಮೋಟಾರ್ಸ್‌ನ ಹೊಸ ವಾಣಿಜ್ಯ ವಾಹನಗಳ ಬಗ್ಗೆ ಹೇಳುವುದಾದರೆ, ಪ್ರಯಾಣಿಕ ವಿಭಾಗದಲ್ಲಿ 5 ಲಘು ವಾಹನ, 7 ಮಧ್ಯಮ ಮತ್ತು ಭಾರೀ ವಾಹನ, 5 ಪಿಕಪ್ ವಾಹನ ಹಾಗೂ 5 ಪ್ರಯಾಣಿಕ ವಾಹನಗಳನ್ನು ಪರಿಚಯಿಸಲಾಗಿದೆ.

Most Read Articles

Kannada
English summary
Tata elxsi displays autonomous driving system in tiago and ignis cars video details
Story first published: Friday, November 19, 2021, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X