ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

2021ರ ಸೆಪ್ಟೆಂಬರ್ ತಿಂಗಳಿನ ಮಿಡ್-ಸೈಜ್ ಎಸ್‍ಯುವಿ ವಿಭಾಗದ ಮಾರಾಟ ಅಂಕಿಅಂಶಗಳು ಬಹಿರಂಗವಾಗಿದೆ. ಮಿಡ್-ಸೈಜ್ ಎಸ್‍ಯುವಿ ವಿಭಾಗದಲ್ಲಿ ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಹೊರತುಪಡಿಸಿ ಉಳಿದೆಲ್ಲ ಮಾದರಿಗಳು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಸೆಪ್ಟೆಂಬರ್‌ ತಿಂಗಳ ಮಿಡ್ ಸೈಜ್ ಎಸ್‍ಯುವಿ ವಿಭಾಗದ ಮಾರಾಟದಲ್ಲಿ ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಅಲ್ಕಾಜರ್ ಮಾದರಿಗಳನ್ನು ಹಿಂದಿಕ್ಕಿ ಟಾಟಾ ಹ್ಯಾರಿಯರ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ, ಕಳೆದ ತಿಂಗಳು ಟಾಟಾ ಹ್ಯಾರಿಯರ್ ಮಾದರಿಯ 2,821 ಯುನಿಟ್‌ಗಳು ಮಾರಾಟವಾಗಿವೆ, ಇನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಟಾಟಾ ಹ್ಯಾರಿಯರ್ ಮಾದರಿಯ 2,743 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,2.84 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಕಳೆದ ತಿಂಗಳಿನ ಎಂಜಿ ಹೆಕ್ಟರ್ 2,722 ಯುನಿಟ್‌ಗಳ ಮಾರಾಟದೊಂದಿಗೆ ಮಿಡ್ ಸೈಜ್ ಎಸ್‍ಯುವಿ ವಿಭಾಗದ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹೆಕ್ಟರ್ ಮಾದರಿಯ 3,726 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.16.91ರಷ್ಟು ಮಾರಾಟದಲ್ಲಿ ಕುಸಿತವಾಗಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಇನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿ ಹ್ಯುಂಡೈ ಅಲ್ಕಾಜರ್ ಮಾದರಿಯ 1,929 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹ್ಯುಂಡೈ ಅಲ್ಕಾಜರ್ ಮಾದರಿಯ 3,468 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.44.38 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಸೆಪ್ಟೆಂಬರ್‌ನಲ್ಲಿ 1,500 ಯುನಿಟ್‌ಗಳ ಮಾರಾಟದೊಂದಿಗೆ ಟಾಟಾ ಸಫಾರಿ ಎಸ್‍ಯುವಿಯು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಟಾಟಾ ಸಫಾರಿ ಮಾದರಿಯ 1,762 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.14.87 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ. ಈ ಸಫಾರಿಯು ಹ್ಯಾರಿಯರ್ ಎಸ್‍ಯುವಿಯ ಹಿರಿಯ ಸಹೋದರ ಮಾದರಿಯಾಗಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಇನ್ನು ಕಳೆದ ತಿಂಗಳಿನಲ್ಲಿ ಜೀಪ್ ಕಂಪಾಸ್ ಎಸ್‍ಯುವಿ ಮಾದರಿಯ 1,311 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಜೀಪ್ ಕಂಪಾಸ್ ಮಾದರಿಯ 1,173 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.138 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಸೆಪ್ಟೆಂಬರ್‌ ತಿಂಗಳ ಮಿಡ್ ಸೈಜ್ ಎಸ್‍ಯುವಿ ವಿಭಾಗದ ಮಾರಾಟದಲ್ಲಿ ಮೊದಲ ಸ್ಥಾನ ಗಳಿಸಿದ ಟಾಟಾ ಹ್ಯಾರಿಯರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಟಾಟಾ ಮೋಟಾರ್ಸ್ ಕಂಪನಿಯ ಹ್ಯಾರಿಯರ್ ಮಿಡ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯ ಎಸ್‍ಯುವಿಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಟಾಟಾ ತನ್ನ ಹ್ಯಾರಿಯರ್ ಮಿಡ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2019ರಲ್ಲಿ ಬಿಡುಗಡೆಗೊಳಿಸಿತ್ತು.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಈ ಎಸ್‍ಯುವಿ ಒಮೆಗಾ (ಆಪ್ಟಿಮಲ್ ಮಾಡ್ಯುಲರ್ ಎಫಿಶಿಯಂಟ್ ಗ್ಲೋಬಲ್ ಅಡ್ವಾನ್ಸ್ಡ್) ಪ್ಲಾಟ್‌ಫಾರ್ಮ್‌ನಿಂದ ಅಭಿವೃದ್ದಿ ಪಡಿಸಲಾಗಿದೆ. ಈ ಟಾಟಾ ಹ್ಯಾರಿಯರ್ ಮಿಡ್ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡ ನೀಡಲಾಗಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಈ ಎಸ್‍ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಎಲ್ಲವೂ ಆಕರ್ಷಕ ಮತ್ತು ಬೋಲ್ಡ್ ಲುಕ್ ಅನ್ನು ನೀಡುತ್ತದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯು ಪ್ರೀಮಿಯಂ ಇಂಟಿರಿಯರ್ ಅನ್ನು ಹೊಂದಿದೆ. ಇದರಲ್ಲಿ ಒನ್-ಟಚ್ ಸನ್‌ರೂಫ್, ಲೇಯರ್ಡ್ ಡ್ಯಾಶ್‌ಬೋರ್ಡ್, ಡ್ರೈವ್ ಮೋಡ್‌ಗಳು, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಕಳೆದ ಬಾರಿ ಟಾಟಾ ತನ್ನ ಹ್ಯಾರಿಯರ್ ಎಸ್‍ಯುವಿಯ ಎಕ್ಸ್‌ಟಿ ಪ್ಲಸ್ ಎನ್ನುವ ವೆರಿಯೆಂಟ್‌ವೊಂದನ್ನು ಬಿಡುಗಡೆಗೊಳಿಸಿತು. ಈ ಎಸ್‍ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಎಲ್ಲವೂ ಆಕರ್ಷಕ ಮತ್ತು ಬೋಲ್ಡ್ ಲುಕ್ ಅನ್ನು ನೀಡುತ್ತದೆ.

ಮಿಡ್ ಸೈಜ್ ಎಸ್‍ಯುವಿ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ Tata Harrier

ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಎಂಬ ಫೀಚರ್ ಗಳನ್ನು ಹೊಂದಿವೆ. ಇನ್ನು ಒಟ್ಟಿನಲ್ಲಿ ಟಾಟಾ ಹ್ಯಾರಿಯರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ,

Most Read Articles

Kannada
English summary
Tata harrier getting high demand in mid size suv segment september 2021 sales report details
Story first published: Saturday, October 9, 2021, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X