Just In
- 12 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 49 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
ಟಾಟಾ ಮೋಟಾರ್ಸ್ ಕಂಪನಿಯ ಹ್ಯಾರಿಯರ್ ಮಿಡ್ ಎಸ್ಯುವಿ ಭಾರತೀಯ ಮಾರುಕಟ್ಟೆಯ ಎಸ್ಯುವಿಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಟಾಟಾ ತನ್ನ ಹ್ಯಾರಿಯರ್ ಮಿಡ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2019ರಲ್ಲಿ ಬಿಡುಗಡೆಗೊಳಿಸಿತ್ತು.

ಟಾಟಾ ಹ್ಯಾರಿಯರ್ ಮಿಡ್ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಟಾಟಾ ಹ್ಯಾರಿಯರ್ 2,223 ಯುನಿಟ್ಗಳು ಮಾರಾಟವಾಗಿವೆ. 2019ರ ಡಿಸೆಂಬರ್ ತಿಂಗಳಲ್ಲಿ ಹ್ಯಾರಿಯರ್ ಮಾದರಿಯ 1,458 ಯುನಿಟ್ಗಳು ಮಾರಾಟವಗಿತ್ತು. ಇದನ್ನು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.52 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2020ರ ನವೆಂಬರ್ ತಿಂಗಳ ಮಾರಟಕ್ಕೆ ಹೋಲಿಸಿದರೆ ಶೇ.1 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ಟಾಟಾ ಹ್ಯಾರಿಯರ್ ಎಸ್ಯುವಿಯು ಒಮೆಗಾ (ಆಪ್ಟಿಮಲ್ ಮಾಡ್ಯುಲರ್ ಎಫಿಶಿಯಂಟ್ ಗ್ಲೋಬಲ್ ಅಡ್ವಾನ್ಸ್ಡ್) ಪ್ಲಾಟ್ಫಾರ್ಮ್ನಿಂದ ಅಭಿವೃದ್ದಿ ಪಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟಾಟಾ ಹ್ಯಾರಿಯರ್ ಮಿಡ್ ಎಸ್ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್ಯುವಿಯಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡ ನೀಡಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇತ್ತೀಚೆಗೆ ಟಾಟಾ ತನ್ನ ಹ್ಯಾರಿಯರ್ ಎಸ್ಯುವಿಯ ಎಕ್ಸ್ಟಿ ಪ್ಲಸ್ ಎನ್ನುವ ವೆರಿಯೆಂಟ್ವೊಂದನ್ನು ಬಿಡುಗಡೆಗೊಳಿಸಿತು. ಈ ಎಸ್ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಎಲ್ಲವೂ ಆಕರ್ಷಕ ಮತ್ತು ಬೋಲ್ಡ್ ಲುಕ್ ಅನ್ನು ನೀಡುತ್ತದೆ.

ಪ್ರಸ್ತುತ ಟಾಟಾ ಹ್ಯಾರಿಯರ್ ಮಿಡ್ ಎಸ್ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.84 ಲಕ್ಷದಿಂದ ರೂ.20.30 ಲಕ್ಷಗಳಾಗಿದೆ. ಈ ಎಸ್ಯುವಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್ಟಿ, ಎಕ್ಸ್ಟಿ ಪ್ಲಸ್, ಎಕ್ಸ್ಝಡ್ ಮತ್ತು ಎಕ್ಸ್ಝಡ್ ಪ್ಲಸ್ ಎಂಬ ಆರು ರೂಪಾಂತರಗಳಲ್ಲಿ ಲಭ್ಯವಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಈ ಹ್ಯಾರಿಯರ್ ಎಸ್ಯುವಿಯು ಪ್ರೀಮಿಯಂ ಇಂಟಿರಿಯರ್ ಅನ್ನು ಹೊಂದಿದೆ. ಇದರಲ್ಲಿ ಒನ್-ಟಚ್ ಸನ್ರೂಫ್, ಲೇಯರ್ಡ್ ಡ್ಯಾಶ್ಬೋರ್ಡ್, ಡ್ರೈವ್ ಮೋಡ್ಗಳು, ಹೊಂದಾಣಿಕೆ ಮಾಡಬಹುದಾದ ಹೆಡ್ರೆಸ್ಟ್ಗಳು ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಹ್ಯಾರಿಯರ್ ಎಸ್ಯುವಿಯಲ್ಲಿ ಸುರಕ್ಷತೆಗಾಗಿ ಏರ್ಬ್ಯಾಗ್ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಎಂಬ ಫೀಚರ್ ಗಳನ್ನು ಹೊಂದಿವೆ.

ಟಾಟಾ ಹ್ಯಾರಿಯರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್ಯುವಿ 500, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ ಮತ್ತು ಜೀಪ್ ಕಂಪಾಸ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.