Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಹೊಸ ಟಾಟಾ ಪಂಚ್(Tata Punch) ಕಾರು ಮಾದರಿಯು ಮೈಕ್ರೊ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಟಾಟಾ ಕಂಪನಿಯು ಹೊಸ ಕಾರಿನ ಮೊದಲ ಬ್ಯಾಚ್ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಹೊಸ ಪಂಚ್ ಕಾರು ಮಾದರಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಇದುವರೆಗೆ ಸುಮಾರು ಇಪತ್ತು ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಹೊಸ ಕಾರಿನ ಮೂಲಕ ಒಟ್ಟು ಕಾರು ಮಾರಾಟ ಪ್ರಮಾಣವನ್ನು ಪ್ರತಿ ತಿಂಗಳು ನಲವತ್ತು ಸಾವಿರಕ್ಕೆ ತಲಪುವ ಗುರಿಹೊಂದಿದೆ. ಹೊಸ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಬೆಲೆ ಹೊಂದಿದ್ದು, ಹೊಸ ಕಾರು ಮೈಕ್ರೊ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.09 ಲಕ್ಷ ಬೆಲೆ ಹೊಂದಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಪಂಚ್ ಕಾರಿನಲ್ಲಿ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಸೆಗ್ಮೆಂಟ್ ಬೆಸ್ಟ್ ಫಿಚರ್ಸ್‌ಗಳೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್‌ ಹೊಂದಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಹೊಸ ಕಾರಿನ ಪ್ಯೂರ್ ಮಾದರಿಯಲ್ಲಿ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಸ್ಯಾವಿ ಕಂಟ್ರೋಲ್, ಆರ್‌ಪಿಎಎಸ್, ಸೆಂಟ್ರೇಲ್ ಲಾಕಿಂಗ್ ಜೊತೆ ಕೀ, ಐಎಸಿ ಮತ್ತು ಇಎಸ್ಎಸ್ ಟೆಕ್ನಾಲಜಿ, ಫ್ರಂಟ್ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್, 90 ಡಿಗ್ರಿ ಡೋರ್ ಓಪನ್, ರಿಯರ್ ಪ್ಲ್ಯಾಟ್ ಫ್ಲೊರ್, ಬ್ಲ್ಯಾಕ್ ಒಡಿಹೆಚ್, ಹ್ಯುಮಿನಿಟಿ ಕ್ರೊಮ್ ಲೈನ್, ಪೆಟೆಂಡ್ ಬಂಪರ್, ಡೋರ್, ವೀಲ್ಹ್ ಆರ್ಚ್, ಸಿಲ್ ಕ್ಲಾಡಿಂಗ್ ಜೋಡಣೆ ಮಾಡಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಅಡ್ವೆಂಚರ್ ಮಾದರಿಯಲ್ಲಿ 4 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ವ್ಯೂ ಮಿರರ್, ಆಲ್ ಪವರ್ ವಿಂಡೋ, ಫಾಲೋ ಮಿ ಹೋಂ ಹೆಡ್‌ಲ್ಯಾಂಪ್, ಆಂಟಿ ಗ್ಲೆರ್ ಐಆರ್‌ಎಂವಿ, ಸೆಂಟ್ರಲ್ ರಿಮೋಟ್ ಲಾಕಿಂಗ್ ಜೊತೆ ಫ್ಲಿಪ್ ಕೀ, ಫುಲ್ ವ್ಹೀಲ್ ಕವರ್ ಮತ್ತು ಬಾಡಿ ಕಲರ್ ರಿಯರ್ ವ್ಯೂ ಮಿರರ್ ನೀಡಲಾಗಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಅಕಾಂಪ್ಲಿಶೆಡ್ ಆವೃತ್ತಿಯಲ್ಲಿ ಹೊಂದಾಣಿಕೆ ಮಾಡಬಹುದಾದ 7 ಇಂಚಿನ ಹರ್ಮನ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, 4 ಸ್ಪೀಕರ್ಸ್ ಮತ್ತು 2 ಟ್ವಿಟರ್, ರಿಯರ್ ವ್ಯೂ ಕ್ಯಾಮೆರಾ, ಎಲ್ಇಡಿ ಟೈಲ್ ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಆರ್15 ಹೈಪರ್ ಸ್ಟೈಲ್ ವ್ಹೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಒನ್ ಟಚ್ ಡೋರ್ ವಿಂಡೋ ಡೌನ್, ಕ್ರೂಸ್ ಕಂಟ್ರೋಲ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಸಿಟಿವಿ ಮಾದರಿಯಾಗಿ ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯವಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಹೈ ಎಂಡ್ ಮಾದರಿಯಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಆರ್16 ಡೈಮಂಡ್ ಕಟ್ ಅಲಾಯ್ ವ್ಹೀಲ್, ರೂಫ್ ರೈಲ್ಸ್, 7 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಹೆಡ್‌ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಆಟೋ ಫೋಡ್ಲಿಂಗ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಸಿಸ್ಟಂ, ಕೂಲ್ಡ್ ಗ್ಲೊ ಬಾಕ್ಸ್, ರಿಯರ್ ವೈಪರ್ ಪ್ಲಸ್ ವಾಷ್, ರಿಯರ್ ಡಿಫಾಗರ್, ಪೆಡಲ್ ಲ್ಯಾಂಪ್ಸ್, ಹಿಂಬದಿಯ ಆಸನದಲ್ಲಿ ಆರ್ಮ್ ರೆಸ್ಟ್ ಮತ್ತು ಲೆದರ್ ಕೊಟಿಂಗ್ ಹೊಂದಿರುವ ಸ್ಟೀರಿಂಗ್ ಮತ್ತು ಗೇರ್ ನಾಬ್ ನೀಡಲಾಗಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲೂ ಅತ್ಯುತ್ತಮ ಡಿಸೈನ್ ಹೊಂದಿದ್ದು, ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ನಂತರ ಎಲ್ಲಾ ಕಾರು ಮಾದರಿಗಳಲ್ಲೂ ಗರಿಷ್ಠ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳಿಸಿದ್ದು,ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸೇಫ್ಟಿ ರೇಟಿಂಗ್ಸ್ ನೀಡಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಕಾರುಗಳಲ್ಲಿ ಸುರುಕ್ಷೆ ವಿಚಾರವಾಗಿ ಎರಡು ಹಂತದ ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಸುರಕ್ಷಾ ರೇಟಿಂಗ್ಸ್ ನಿರ್ಧರಿಸಲಿದ್ದು, ಹೊಸ ಪಂಚ್ ಕಾರು ಮಾದರಿಯು ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.

Punch ಮೈಕ್ರೊ ಎಸ್‌ಯುವಿ ಮೊದಲ ಬ್ಯಾಚ್ ವಿತರಣೆ ಆರಂಭಿಸಿದ Tata Motors

ಭಾರತದಲ್ಲಿರುವ ಪ್ರಮುಖ ಹ್ಯಾಚ್‌ಬ್ಯಾಕ್ , ಸೆಡಾನ್ ಮತ್ತು ಎಸ್‍‌ಯುವಿ ಕಾರು ಮಾದರಿಗಳು ದುಬಾರಿ ಬೆಲೆ ನಡುವೆಯೂ ಗರಿಷ್ಠ ಮಟ್ಟದ ಸುರಕ್ಷತೆ ನೀಡಲು ವಿಫಲವಾಗಿದ್ದು , ಟಾಟಾ ಮೋಟಾರ್ಸ್ ಕಂಪನಿಗಳು ಮಾತ್ರ ದುಬಾರಿ ಕಾರುಗಳನ್ನೇ ಹಿಂದಿಕ್ಕಿ ಸುರಕ್ಷತೆಯಲ್ಲಿ ಅಗ್ರಸ್ಥಾನ ಗಳಿಸಿದೆ.

Source: Rushlane

Most Read Articles

Kannada
English summary
Tata motors commences first batch deliveries of punch micro suv
Story first published: Thursday, October 21, 2021, 23:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X